ಟಾಕ್ಸಿಕ್ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್

Spread the love

ಟಾಕ್ಸಿಕ್ ಬಿಡುಗಡೆಗೂ ಮುನ್ನ ಧರ್ಮಸ್ಥಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಟ ಯಶ್

ಬೆಳ್ತಂಗಡಿ: ಟಾಕ್ಸಿಕ್ ಸಿನಿಮಾದ ಪ್ರಚಾರದಲ್ಲಿ ತೊಡಗಿರುವ ಸ್ಯಾಂಡಲ್‌ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅವರು ಆ.25ರ ಮಂಗಳವಾರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಧರ್ಮಸ್ಥಳಕ್ಕೆ ಭೇಟಿ ನೀಡಿದ ನಟ ಯಶ್ ಮತ್ತು ನಿರ್ಮಾಪಕ ವೆಂಕಟ್ ಅವರು ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಗರ್ಭಗುಡಿಯ ಮುಂದೆ ಕೆಲ ಸಮಯ ನಿಂತು ಪ್ರಾರ್ಥನೆ ಮಾಡಿದರು.

ಅದಾದ ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾದ ನಟ ಯಶ್ ಮತ್ತು ನಿರ್ಮಾಪಕ ವೆಂಕಟ್ ಅವರು ಹೆಗ್ಗಡೆಯವರ ಆಶೀರ್ವಾದವನ್ನು ಸಹ ಪಡೆದು ಕೆಲ ಸಮಯ ಮಾತುಕತೆ ಸಹ ನಡೆಸಿದರು.

‘ಟಾಕ್ಸಿಕ್’ ಸಿನಿಮಾ ನಾಳೆ (ಆಗಸ್ಟ್ 26) ರಿಲೀಸ್ ಆಗುತ್ತಿದೆ. ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸುವ ಜೊತೆಗೆ ಸಹ ನಿರ್ಮಾಪಕರೂ ಆಗಿದ್ದಾರೆ. ಕೆವಿಎನ್ ಜೊತೆಗೆ ತಮ್ಮ ಮಾನ್​​​ಸ್ಟರ್ ಮೈಂಡ್ ಕ್ರಿಯೇಷನ್ಸ್ ಮೂಲಕ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ಸಿನಿಮಾ ಅನ್ನು ಗೀತೂ ಮೋಹನ್​​ದಾಸ್ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ, ರುಕ್ಮಿಣಿ ವಸಂತ್ ಇನ್ನೂ ಹಲವರು ನಟಿಸಿದ್ದಾರೆ.


Spread the love
Subscribe
Notify of

0 Comments