ಆಲ್ ಇಂಡಿಯ ಕಥೊಲಿಕ್ ಯೂನಿಯನ್ ಕರ್ನಾಟಕ ರಾಜ್ಯ  ಅಧ್ಯಕ್ಷರಾಗಿ ಆಲ್ವಿನ್ ಕ್ವಾಡ್ರಸ್ ಆಯ್ಕೆ

Spread the love

ಆಲ್ ಇಂಡಿಯ ಕಥೊಲಿಕ್ ಯೂನಿಯನ್ ಕರ್ನಾಟಕ ರಾಜ್ಯ  ಅಧ್ಯಕ್ಷರಾಗಿ ಆಲ್ವಿನ್ ಕ್ವಾಡ್ರಸ್ ಆಯ್ಕೆ

ಉಡುಪಿ: ಆಲ್ ಇಂಡಿಯ ಕಥೊಲಿಕ್ ಯೂನಿಯನ್ (AICU) ಇದರ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಉಡುಪಿ ಜಿಲ್ಲೆಯ  ಆಲ್ವಿನ್ ಕ್ವಾಡ್ರಸ್ ಕೋಟ ಆಯ್ಕೆಯಾಗಿದ್ದಾರೆ.

ನವದೆಹಲಿಯಲ್ಲಿ ನಡೆದ ಸಂಘಟನೆಯ ರಾಷ್ಟ್ರೀಯ ಸಮಿತಿಯ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆಲ್ವಿನ್ ಕ್ವಾಡ್ರಸ್ ಅವರು ಉಡುಪಿ ಜಿಲ್ಲೆಯಲ್ಲಿ ಸ್ವ ಉದ್ಯಮ ನಡೆಸುತ್ತಿದ್ದು ಕಥೊಲಿಕ್ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾಗಿ ಉಡುಪಿ ಧರ್ಮಪ್ರಾಂತ್ಯ ಮಟ್ಟದ ಸಮ್ಮೇಳನ ಸಮುದಾಯೋತ್ಸವ್ ಆಯೋಜಿಸಿದ್ದರು.

ಇದಲ್ಲದೆ ರೋಟರಿ ಕ್ಲಬ್ ಜಿಲ್ಲೆ 3182 ವಲಯ 3 ಇದರ ಮಾಜಿ ಸಹಾಯಕ ಗವರ್ನರ್ ಆಗಿದ್ದು  ಬ್ರಹ್ಮಾವರ ಕಥೊಲಿಕ್ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ಕರಾವಳಿ ಕ್ರಿಶ್ಚಿಯನ್ ಛೇಂಬರ್ ಆಫ್ ಕಾಮರ್ಸ್ ಪ್ರೇರಣಾ ಇದರ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

ಆಲ್ ಇಂಡಿಯ ಕಥೊಲಿಕ್ ಯೂನಿಯನ್ ರಾಜ್ಯ ಸಮಿತಿ ಕರ್ನಾಟಕ ಪ್ರಾಂತ್ಯದ ಎಲ್ಲಾ ಧರ್ಮಪ್ರಾಂತ್ಯಗಳಿಗೆ ಹೊಂದಿಕೊಂಡಿದ್ದು ನೊಂದಾಯಿತರಾದ ಸಂಘಟನೆಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ.


Spread the love
Subscribe
Notify of

0 Comments