Team Mangalorean
ಕಮೀಷನರ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ; ಲಾಠಿಚಾರ್ಜ್
ಕಮೀಷನರ್ ಕಚೇರಿಗೆ ಪಿಎಫ್ಐ ಕಾರ್ಯಕರ್ತರ ಮುತ್ತಿಗೆ; ಲಾಠಿಚಾರ್ಜ್
ಮಂಗಳೂರು: ನಗರ ಪೋಲಿಸ್ ಆಯುಕ್ತರ ಕಚೇರಿಯ ಎದುರುಗಡೆ ಧರಣಿ ನಡೆಸಲು ಪ್ರಯತ್ನಿಸಿದ ಪಾಪ್ಯುಲರ್ ಫ್ರಂಟ್ ಒಫ್ ಇಂಡಿಯಾ ಇದರ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಚ್ ನಡೆಸಿದ...
ಉಡುಪಿ ಜಿಲ್ಲಾಧಿಕಾರಿಗಳ ಹತ್ಯೆ ಯತ್ನ ಕ್ಯಾಪ್ಟನ್ ಕಾರ್ಣಿಕ್ ಖಂಡನೆ
ಉಡುಪಿ ಜಿಲ್ಲಾಧಿಕಾರಿಗಳ ಹತ್ಯೆ ಯತ್ನ ಕ್ಯಾಪ್ಟನ್ ಕಾರ್ಣಿಕ್ ಖಂಡನೆ
ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹಾಗೂ ಕುಂದಾಪುರದ ಸಹಾಯಕ ಕಮಿಷನರ್ ಮತ್ತಿತರರ ಮೇಲೆ ಮರಳು ಮಾಫಿಯಾ ನಡೆಸಿದ ಕೊಲೆ ಯತ್ನವನ್ನು ವಿಧಾನ ಪರಿಷತ್ ವಿರೋಧ ಪಕ್ಷದ...
ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ
ಅಕ್ರಮ ಮರಳು ಧಂಧೆಕೋರರಿಗೆ ಮುಂದೈತೆ ಮಾರಿ ಹಬ್ಬ! ಕಠಿಣ ಕ್ರಮಕ್ಕೆ ಜಿಲ್ಲಾಧಿಕಾರಿ ಚಿಂತನೆ
ಮ್ಯಾಂಗಲೋರಿಯನ್ ಸುದ್ದಿಲೋಕ
ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಯನ್ನು ಪರಿಶೀಲಸಲು ತೆರಳಿದ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮತ್ತು ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಹಾಗೂ ಇತರರ ಮೇಲೆ ನಡೆದ ಹಲ್ಲೆ ಮತ್ತು ಕೊಲೆಯತ್ನದಿಂದ ಸ್ವಲ್ಪವೂ ಜಿಲ್ಲಾಧಿಕಾರಿಯವರು ವಿಚಲಿತರಾಗಿಲ್ಲ ಎನ್ನುವುದು ಅವರ ದಿಟ್ಟತನ ಹಾಗೂ ಧ್ಯೆರ್ಯದ ಮಾತುಗಳಿಂದ ಎದ್ದು ಕಾಣುತ್ತದೆ.
ಭಾನುವಾರ ಮಧ್ಯರಾತ್ರಿ ಜಿಲ್ಲಾಧಿಕಾರಿ ಹಾಗೂ ಇತರರ ಮೇಲೆ ಹಲ್ಲೆ ಯತ್ನ ನಡೆದು ಅದಕ್ಕೆ ಸಂಬಂಧಿಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಹಾಗೂ ಇತರ ಕೆಲಸಗಳನ್ನು ಮುಗಿಸಿ ಎಂದಿನಂತೆ ಸಮಯಕ್ಕೆ ಸರಿಯಾಗಿ ಕಚೇರಿ ಕೆಲಸಕ್ಕೆ ಆಗಮಿಸಿದ ಅವರು ದಿನವಿಡೀ ಬಿಡುವಿಲ್ಲದ ಕೆಲಸಗಳಲ್ಲಿ ಮಗ್ನವಾಗಿ ಏನೂ ಆಗದಂತೆ ಇದ್ದಿರುವುದು ಅವರ ಧ್ಯೇರ್ಯವನ್ನು ಎತ್ತಿ ತೋರಿಸುತ್ತಿತ್ತು.
ಈ ನಡುವೆ ಬೆಳಿಗ್ಗೆ ಅವರನ್ನು ಭೇಟಿ ಮಾಡಲು ಬಂದ ಪತ್ರಕರ್ತರ ಬಳಿ ಹಿಂದಿನ ರಾತ್ರಿ ನಡೆದ ಘಟನೆಯ ಸಂಪೂರ್ಣ ವಿವರ ನೀಡುವುದರೊಂದಿಗೆ ಜಿಲ್ಲೆಯಲ್ಲಿ ನಿರಾತಂಕವಾಗಿ ನಡೆಯುತ್ತಿರುವ ಮರಳು ಮಾಫಿಯಾಯನ್ನು ಮಟ್ಟ ಹಾಕದೇ ಬಿಡುವುದಿಲ್ಲ ಎಂಬ ದಿಟ್ಟ ಮಾತುಗಳನ್ನು ಅವರು ಆಡಿದ್ದಾರೆ. ಅಲ್ಲದೆ ನಿನ್ನೆ ನಡೆದ ಘಟನೆ ನನ್ನ ಮುಂದಿನ ಹೋರಾಟದ ಅಂತ್ಯವಾಗದೇ ಅದು ಆರಂಭವಾಗಲಿದೆ. ಜೀವ ಭಯವಿದ್ದರೂ ಕೂಡ ಹಲವರಿಂದ ಜಿಲ್ಲಾಡಳಿತ ಅಕ್ರಮ ಮರಳುಗಾರಿಕೆ ತಡೆಯಲು ವಿಫವಾಗಿದೆ ಎಂಬ ಮಾಧ್ಯಮ ವರದಿ ಅವರನ್ನು ಸದಾ ಕಾಡುತ್ತಿದ್ದ ಪರಿಣಾಮ ಕೇವಲ ತನ್ನ ಗನ್ ಮ್ಯಾನ್ ಹಾಗೂ ಜಿಪಂನ ಹೊರಗುತ್ತಿಗೆ ಕಾರಿನ ಚಾಲಕನೊಂದಿಗೆ ಹಾಗೂ ಕುಂದಾಪುರ ಉಪವಿಭಾಗಾಧಿಕಾರಿ ಶೀಲ್ಪಾ ನಾಗ್ ಅವರ ಪತಿ ಹಾಗೂ ಅವರ ಡ್ರೈವರ್ ಜೊತೆ ಅಕ್ರಮ ಮರಳುಗಾರಿಕೆ ನಡೆಯುವಲ್ಲಿ ಸ್ವತಃ ಯಾರಿಗೂ ಮಾಹಿತಿ ನೀಡದೆ ತೆರಳಿದ್ದರು. ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಅದು ಎಲ್ಲಿ ಸೋರಿಕೆಯಾಗುತ್ತದೆ ಇದರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ ಎಂದು ಆಲೋಚಿಸಿ ಬಂದ ಜಿಲ್ಲಾಧಿಕಾರಿ ತಂಡಕ್ಕೆ ಕಂಡ್ಲೂರಿನಲ್ಲಿ ನಡೆದ ಘಟನೆ ಒಂದು ರೀತಿಯಲ್ಲಿ ಆಘಾತವನ್ನು ತಂದಿದೆ ಆದರೂ ಕೂಡ ಅದನ್ನು ಸಾವರಿಸಿಕೊಂಡು ವಾಪಾಸ್ ಅಲ್ಲಿಂದ ಹೋಗವಾಗಲೇ ಅವರೊಂದು ಧೃಢ ನಿರ್ದಾರದೊಂದಿಗೆ ಉಡುಪಿ ನಗರ ಠಾಣೆಗೆ ಆಗಮಿಸಿದ್ದರು. ಅವರ ಚಾಲೆಂಜ್ ಪ್ರಕಾರ ಈ ಹೋರಾಟ ಯಾವುದೇ ಅಂತ್ಯವಾಗಲ್ಲ ಬದಲಾಗಿ ಮರಳುಗಾರಿಕೆಯ ವಿರುದ್ದ ಹೋರಾಟ ತೀವೃಗೊಳಿಸಲು ದಾರಿ ಮಾಡಿಕೊಟ್ಟಂತಾಗಿದೆ.
ಮುಂದಿನ ದಿನಗಳಲ್ಲಿ ಜೀವದ ಭಯದಿಂದಾಗಿ ಏಕಾಂಗಿಯಾಗಿ ನಡೆಸುವ ಧಾಳಿಯನ್ನು ಸಂಘಟಿತವಾಗಿ ಮಾಡಲು ನಿರ್ಧರಿಸಿರುವ ಜಿಲ್ಲಾಧಿಕಾರಿಗಳು ಇದಕ್ಕಾಗಿ ವಿಶೇಷ ಸ್ವ್ಯಾಡ್ ಒಂದನ್ನು ಸಿದ್ದಪಡಿಸಿ ಅದರ ಮೂಲಕ ಹೋರಾಟದ ರೂಪುರೇಷೆ ನಡೆಸಲಾಗುವುದು ಅಲ್ಲದೆ ಪೊಲೀಸ್ ಇಲಾಖೆಯ ಜೊತೆಗೆ ಮುಂದಿನ ದಿನಗಳಲ್ಲಿ ಸ್ಪೆಷಲ್ ಸ್ಕ್ವಾಡ್ ರಚನೆ ಮಾಡಲಾಗುವುದು. ಸ್ಕ್ವಾಡ್ ಮೂಲಕ ಜಿಲ್ಲೆಯ ಎಲ್ಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಅಲ್ಲೆಲ್ಲಾ ದಾಳಿ ನಡೆಸುವ ಚಿಂತನೆ ಅವರು ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಧಾಳಿ ಮಾಡುವುದರೊಂದಿಗೆ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಗೆ ಎಳ್ಳು ನೀರು ಬಿಡಬೇಕು ಎಂಬ ಚಿಂತನೆ ಅವರಲ್ಲಿದೆ. ಅವರ ಕನಸಿಗೆ ಅಧಿಕಾರಿ ವರ್ಗ ಸಂಪೂರ್ಣ ಬೆಂಬಲ ನೀಡಲಿದೆ ಎಂಬ ವಿಶ್ವಾಸವನ್ನು ಅರು ಹೊಂದಿದ್ದು ಇದರಿಂದ ಅವರ ಸಾಧನೆಗೆ ಇನ್ನಷ್ಟು ಬಲ ಬರಲಿದೆ.
ಈ ನಡುವೆ ಸರಕಾರದ ಮಂತ್ರಿಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್...
ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ಇಂಜಿನಿಯರಿಂಗ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು: ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯೋರ್ವ ಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ರವಿವಾರ ವರದಿಯಾಗಿದೆ.
ಮೃತಳನ್ನು ನಗರದ ಆಕಾಶಭವನ ನಿವಾಸಿ ಮನೀಷಾ ಚಂದ್ರಶೇಖರ್ (21) ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯು...
ಕಾರವಾರ ನಗರಸಭೆಯ ಆಯುಕ್ತರಾಗಿ ಎಸ್ ಯೋಗೇಶ್ವರ್ ವರ್ಗಾವಣೆ
ಕಾರವಾರ ನಗರಸಭೆಯ ಆಯುಕ್ತರಾಗಿ ಎಸ್ ಯೋಗೇಶ್ವರ್ ವರ್ಗಾವಣೆ
ಉಡುಪಿ : ಉಡುಪಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಾದ ಎಸ್ ಯೋಗೇಶ್ವರ್ ಇವರನ್ನು ಕಾರವಾರ ನಗರಸಭೆಯ ಆಯುಕ್ತರಾಗಿ ವರ್ಗಾವಣೆಗೊಂಡಿದ್ದು, ಏಪ್ರಿಲ್ 1 ರಂದು...
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ
ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ಯುವಕನ ಬಂಧನ
ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪಣಂಬೂರು ಕ್ರೈಂ ವಿಭಾಗದ ಎಸ್ಐ ಕುಮಾರೇಶನ್ ಶುಕ್ರವಾರ ಬಂಧಿಸಿದ್ದಾರೆ.
ಬಂಧಿತನನ್ನು ಬೋಳೂರಿನ ನಿವಾಸಿ ಅನೀಶ್ ಅಮೀನ್ (24) ಎಂದು...
Padma Shri Award to Smt. Sukri Bommu Gouda
The President, Shri Pranab Mukherjee presenting the Padma Shri Award to Smt. Sukri Bommu Gouda, at a Civil Investiture Ceremony, at Rashtrapati Bhavan, in...
ಬೀಟ್ ಪೇದೆಯೇ ನಿಮ್ಮಊರಿಗೆ ಪೊಲೀಸ್ ಮುಖ್ಯಸ್ಥ!
ಬೀಟ್ ಪೇದೆಯೇ ನಿಮ್ಮಊರಿಗೆ ಪೊಲೀಸ್ ಮುಖ್ಯಸ್ಥ!
ಬೆಂಗಳೂರು: ನಗರಕ್ಕೆ ಪೊಲೀಸ್ ಕಮಿಷನರ್, ಜಿಲ್ಲೆಗೊಬ್ಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಠಾಣೆಗಳಿಗೆ ಠಾಣಾಧಿಕಾರಿ ಇರುವಂತೆ ಇನ್ನುಮುಂದೆ ‘ಪ್ರದೇಶಕ್ಕೊಬ್ಬ ಪೊಲೀಸ್’ ಇರಲಿದ್ದಾರೆ.
ಆಯಾ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು, ಅಪರಾಧ...
ಹೆದ್ದಾರಿ ಸಮೀಪ ಮದ್ಯದಂಗಡಿ ನಿಷೇಧ ತೆರವಿಗೆ ಸುಪ್ರೀಂಕೋರ್ಟ್ ನಕಾರ
ಹೆದ್ದಾರಿ ಸಮೀಪ ಮದ್ಯದಂಗಡಿ ನಿಷೇಧ ತೆರವಿಗೆ ಸುಪ್ರೀಂಕೋರ್ಟ್ ನಕಾರ
ಹೊಸದಿಲ್ಲಿ: ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳ 500 ಮೀ.ವ್ಯಾಪ್ತಿಯಲ್ಲಿನ ಮದ್ಯದಂಗಡಿಯನ್ನು ತೆರವುಗೊಳಿಸಬೇಕೆಂಬ ತನ್ನ ಹಿಂದಿನ ಆದೇಶದಲ್ಲಿ ಮಾರ್ಪಾಡು ಮಾಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ. ಈ...
ಕಾರ್ಯಕರ್ತರ ಹತ್ಯೆಗೆ ಬೆಂಬಲ ನೀಡುತ್ತಿರುವ ಪಿಣರಾಯಿ ಮಂಗಳೂರಿಗೆ ಬರುವುದು ಬೇಡಾ- ವೇದವ್ಯಾಸ ಕಾಮತ್
ಕಾರ್ಯಕರ್ತರ ಹತ್ಯೆಗೆ ಬೆಂಬಲ ನೀಡುತ್ತಿರುವ ಪಿಣರಾಯಿ ಮಂಗಳೂರಿಗೆ ಬರುವುದು ಬೇಡಾ- ವೇದವ್ಯಾಸ ಕಾಮತ್
ಮಂಗಳೂರು: ಎಡಪಕ್ಷಗಳು ಕೇರಳದಲ್ಲಿ ದಿನನಿತ್ಯ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಹಲ್ಲೆ, ದೌರ್ಜನ್ಯ ಮತ್ತು ಸರಣಿಕೊಲೆಗಳನ್ನು ಖಂಡಿಸಿ...




















