ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ- ದಿನೇಶ್ ಗುಂಡೂರಾವ್

Spread the love

ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗ- ದಿನೇಶ್ ಗುಂಡೂರಾವ್

ಮಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಚುನಾವಣಾ ಆಯೋಗದ ದುರುಪಯೋಗವಾಗಿದೆ ಎಂದು ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಗಂಭೀರ ಆರೋಪ ಮಾಡಿದರು.

ಪಶ್ಚಿಮ ಬಂಗಾಳ ಸೇರಿದಂತೆ ದೇಶದ ವಿವಿಧೆಡೆ ನಡೆದ ಚುನಾವಣೆ ವೇಳೆ ಚುನಾವಣಾ ಆಯೋಗದ ನಡೆ ಸಂಶಯಾಸ್ಪದವಾಗಿದೆ. ವಿರೋಧ ಪಕ್ಷಗಳಿಗೆ ಚುನಾವಣಾ ಆಯೋಗದ ಮೇಲೆ ನಂಬಿಕೆ ಹೋಗಿದೆ. ನಿಷ್ಪಕ್ಷಪಾತವಾಗಿ ನಿರ್ವಹಣೆ ಮಾಡುವ ಚುನಾವಣಾ ಆಯೋಗದ ಮೇಲೆ ಈ ಹಿಂದೆ ದೇಶದಲ್ಲಿ ಯಾರೂ ಸಂಶಯ ಹೊಂದಿರಲಿಲ್ಲ. ಆದರೆ ಇಂದು ಪರಿಸ್ಥಿತಿ ಇಲ್ಲ. ಚುನಾವಣೆ ಗೆಲ್ಲಲು ಏನು ಮಾಡಬೇಕೋ ಅದನ್ನು ಬಿಜೆಪಿ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಪಂಜಾಬ್ ಚುನಾವಣೆ ಬಂದಿರುವುದರಿಂದ ಇ.ಡಿ, ಐ.ಟಿ. ಈಗ ಅಲ್ಲಿ ಹೋಗಿ ಬಿದ್ದಿದ್ದಾರೆ. ಪಂಜಾಬ್ ಚುನಾವಣೆ ಮುಗಿಯುತ್ತಿದ್ದಂತೆ ಕರ್ನಾಟಕಕ್ಕೆ ಬರುತ್ತಾರೆ. ಇ.ಡಿ, ಐಟಿಯವರು ಬಿಜೆಪಿಗೆ ಸಹಾಯ ಮಾಡುತ್ತಿದ್ದಾರೆ. ಇವರು ಎಲ್ಲಾ ಸಂಸ್ಥೆಗಳನ್ನು ಚುನಾವಣೆ ಗೆಲ್ಲುವುದಕ್ಕೆ ಬಳಸುತ್ತಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪ ಮಾಡಿದರು.

ಎಸ್ಐಆರ್ನಲ್ಲಿ ಇರುವ ವಿಷಯಗಳ ಬಗ್ಗೆ ಹೇಗೆ ಹೋರಾಡಬೇಕೆಂಬ ಚರ್ಚೆ ಮಾಡುತ್ತಿದ್ದೇವೆ. ಓಟರ್ ಲೀಸ್ಟ್ನಲ್ಲಿ ಇದ್ದ ಹೆಸರುಗಳನ್ನು ತೆಗೆದು ಹಾಕಿದ್ದಾರೆ.

ಕಾನೂನಾತ್ಮಕವಾಗಿ ಈ ಬಗ್ಗೆ ಹೋರಾಟ ಮಾಡುತ್ತೇವೆ. ಪಶ್ಚಿಮ ಬಂಗಾಲದಲ್ಲಿ ಸಾಫ್ಟ್ವೇರ್ ಉಪಯೋಗ ಮಾಡಿದ್ದರು. ಯಾವ ಯಾವ ಮತಗಳನ್ನು ತೆಗೆಯಬೇಕೆಂದು ಆ ಸಾಫ್ಟ್ವೇರ್ ನಿರ್ಧಾರ ಮಾಡಿತ್ತು. ಎಐ ಫಾರ್ಮುಲಾ ಬಳಕೆ ಮಾಡಿದರು. ಆ ರೀತಿಯದಕ್ಕೆ ಅವಕಾಶ ಸಿಗಬಾರದು ಎಂದು ಹೇಳಿದರು.

ಕರ್ನಾಟಕದಲ್ಲಿ ಏನು ತೆಗೆದುಕೊಂಡು ಬರುತ್ತಾರೆ ಎಂದು ಗೊತ್ತಿಲ್ಲ. ಚುನಾವಣಾ ಆಯೋಗಕ್ಕೆ ಸುಪ್ರೀಂ ಪವರ್ ಕೊಟ್ಟಿದ್ದಾರೆ. ಚುನಾವಣಾ ಆಯೋಗದ ವಿರುದ್ಧ ಕೋರ್ಟ್ನಲ್ಲಿಯು ಪ್ರಶ್ನೆ ಮಾಡುವಂತಿಲ್ಲ. ಅಂತಹ ಕಾನೂನು ತೆಗೆದುಕೊಂಡು ಬಂದಿದ್ದಾರೆ. ಓಪನ್ ಆಗಿ ಪಕ್ಷಪಾತ, ದುರುಪಯೋಗ ಮಾಡುತ್ತಿದ್ದಾರೆ ಎಂದರು.

ಕರ್ನಾಟಕದಲ್ಲಿ ಬಿಜೆಪಿಯವರು ಎಷ್ಟೇ ಭ್ರಷ್ಟರಾಗಿದ್ದರು ಅವರನ್ನು ಇಡಿ, ಐಟಿ ಮುಟ್ಟುವುದಿಲ್ಲ. ಚುನಾವಣೆ ಗೆಲ್ಲುವುದೆ ಇವರಿಗೆ ಮುಖ್ಯ ಆಗಿದೆ. ನಮ್ಮ ಪತ್ರಿಕಾ ಸ್ವಾತಂತ್ರ್ಯ157ನೇ ಸ್ಥಾನದಲ್ಲಿದೆ. ಪಾಕಿಸ್ತಾನಗಿಂತ ನಾವು ಹಿಂದೆ ಬಿದ್ದಿದ್ದೇವೆ. ಪ್ರಧಾನಮಂತ್ರಿ, ಅಮಿತ್ ಶಾಗೆ ಒಂದೇ ಒಂದು ಪ್ರಶ್ನೆ ಕೇಳುವ ರೈಟ್ಸ್ ಇಲ್ಲ. ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯವೇ ಇಲ್ಲ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.


Spread the love
Subscribe
Notify of

0 Comments
Inline Feedbacks
View all comments