ಕಥೊಲಿಕ್ ಸಭಾ ಉಡುಪಿ ಪ್ರದೇಶ ನೂತನ ಅಧ್ಯಕ್ಷರಾಗಿ ಮೆಲ್ವಿನ್ ಆರಾನ್ಹಾ ಶಿರ್ವ ಆಯ್ಕೆ

Spread the love

ಕಥೊಲಿಕ್ ಸಭಾ ಉಡುಪಿ ಪ್ರದೇಶ ನೂತನ ಅಧ್ಯಕ್ಷರಾಗಿ ಮೆಲ್ವಿನ್ ಆರಾನ್ಹಾ ಶಿರ್ವ ಆಯ್ಕೆ

ಉಡುಪಿ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಮೆಲ್ವಿನ್ ಆರಾನ್ಹಾ ಶಿರ್ವಾ ಅವರು ಆಯ್ಕೆಯಾಗಿದ್ದಾರೆ.

ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕೇಂದ್ರದ ನಿಕಟಪೂರ್ವ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಚುನಾವಣಾಧಿಕಾರಿಯಾಗಿದ್ದು, ವಲೇರಿಯನ್ ಫೆರ್ನಾಂಡಿಸ್ ಚುನಾವಣಾ ವೀಕ್ಷಕರಾಗಿದ್ದರು.

ನೂತನ ಪದಾಧಿಕಾರಿಗಳ ವಿವರ ಇಂತಿದೆ
ಆಧ್ಯಾತ್ಮಿಕ ನಿರ್ದೇಶಕರು : ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್
ನಿಕಟಪೂರ್ವ ಅಧ್ಯಕ್ಷರು : ರೊನಾಲ್ಡ್ ಆಲ್ಮೇಡಾ, ಉದ್ಯಾವರ
ನಿಯೋಜಿತ ಅಧ್ಯಕ್ಷರು : ಲೂವಿಸ್ ಡಿಸೋಜಾ, ಸಾಸ್ತಾನ
ಉಪಾಧ್ಯಕ್ಷರು: ಮೇಬಲ್ ಡಿಸೋಜಾ, ಬಸ್ರೂರು
ಪ್ರಧಾನ ಕಾರ್ಯದರ್ಶಿ : ಜುಲಿಯೆಟ್ ಡಿಸೋಜಾ ಪಾಂಗಾಳ
ಸಹಕಾರ್ಯದರ್ಶಿ : ಸೋನು ಸಿಕ್ವೇರಾ ಕಾರ್ಕಳ
ಕೋಶಾಧಿಕಾರಿ : ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್ ಬ್ರಹ್ಮಾವರ
ಸಹ ಕೋಶಾಧಿಕಾರಿ: ಪ್ರತೀಮಾ ಡಿಸೋಜಾ ಕಾರ್ಕಳ

ಉಡುಪಿ ಧರ್ಮಪ್ರಾಂತ್ಯದಲ್ಲಿ ಕಥೊಲಿಕ್ ಸಭಾ ಅತ್ಯಂತ ಪ್ರಭಾವಶಾಲಿ ಸಂಘಟನೆಯಾಗಿದ್ದು ರಾಜಕೀಯ ಜಾಗೃತಿ ಯೊಂದಿಗೆ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನೆರವೇರಿಸಿಕೊಂಡು ಬರುತ್ತಿದ್ದು ಧರ್ಮಪ್ರಾಂತ್ಯ ವ್ಯಾಪ್ತಿಯ 51 ಚರ್ಚುಗಳಲ್ಲಿ ಸಂಘಟನೆ ತನ್ನ ಘಟಕಗಳನ್ನು ಹೊಂದಿರುತ್ತದೆ.


Spread the love
Subscribe
Notify of

0 Comments
Inline Feedbacks
View all comments