Complaint Filed for Spreading Panic among People Making False Predictions

Spread the love

Complaint Filed for Spreading Panic among People Making False Predictions

From;
Narendra Nayak
President, Federation of Indian Rationalist Associations
101, Noel Park. MG Road 3rd cross
Mangalore-575 006
cell no 94482 16343 email id- narenyen@gmail.com

To:
The IGP of Police
Karnataka

Dear Sir,

Sub.: Spreading panic among people making false predictions-reg

With reference to the above, I am herein forwarding a complaint from Kodagu about one self-proclaimed Brahmand Guruji who has claimed that an earthquake is going to happen in Kodagu.

If the prediction is the truth, precautions will have to be taken to protect the people from the great harm that is going to be caused to them. On the other hand, if it is false, it would have created panic among people already in great suffering due to COVID-19 and previous years landslides.

I request you to take action against such people who create panic among the gullible and exploit them by claiming that he will perform some Puja to ward of the catastrophe and collect money from them.

Yours truly,
Narendra Nayak
President, Federation of Indian Rationalist Associations

*ಬ್ರಹ್ಮಾಂಡ ಗುರೂಜಿ ವಿರುದ್ಧ ಪೊಲೀಸ್ ದೂರು.*

ಬ್ರಹ್ಮಾಂಡ ಗುರೂಜಿ ಕೊಡಗು ಜಿಲ್ಲೆ ಮುಂದಿನ ದಿನಗಳಲ್ಲಿ ಬಾರಿ ಭೂಕಂಪದಿಂದ ನೆಲಸಮವಾಗಲಿದೆ ಎಂದು ಭವಿಷ್ಯ ನುಡಿದಿರುವುದು ಸಾಮಾಜಿಕ ಜಾಲತಾಣ ಮತ್ತು ಆನ್ಲೈನ್ ಪ್ರಕಟವಾಗಿದ್ದು, ಈ ಬಗ್ಗೆ ಕೊಡಗಿನ ಜನತೆಯಲ್ಲಿ ತೀವ್ರ ಭಯ ಬೀತಿಯನ್ನು ಮೂಡಿಸಿದೆ.

ಸಮಾಜದಲ್ಲಿ ಆತಂಕ ಸೃಷ್ಟಿಸಿರುವ ಹೇಳಿಕೆ ನೀಡಿರುವ ಈ ವ್ಯಕ್ತಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೊಡಗು ಬೆಳೆಗಾರರ ಒಕ್ಕೂಟ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

*ದೂರಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಅಂಶಗಳು:*

ಬ್ರಹ್ಮಾಂಡ ಗುರೂಜಿ ಎಂಬ ಭವಿಷ್ಯ ಹೇಳುವ ವ್ಯಕ್ತಿ ಕೊಡಗು ಜಿಲ್ಲೆಯು ಮುಂದಿನ ದಿನಗಳಲ್ಲಿ ಭಾರಿ ಭೂಕಂಪನದಿಂದ ನೆಲಸಮವಾಗುತ್ತದೆ ಎಂದು ನುಡಿದಿರುವುದು, ಆನ್ಲೈನ್ ನ್ಯೂಸ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುತ್ತದೆ.

ಗುರೂಜಿ ಎಂದು ಹೇಳಿಕೊಂಡಿರುವ ಈ ವ್ಯಕ್ತಿ ಹೇಳಿರುವ ಭವಿಷ್ಯ ಯಾವ ಆಧಾರದಲ್ಲಿ ಹೇಳಿರುತ್ತಾರೆ. ಕೊಡಗು ಜಿಲ್ಲೆಯಲ್ಲಿ ಭಾರಿ ಭೂಕಂಪನವಾಗಿ ನೆಲಸಮವಾಗುತ್ತೆ ಎಂದು ಹೇಳಿರುವುದರಿಂದ ಕೊಡಗಿನ ಜನರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿರುತ್ತದೆ.

ಸರಕಾರ ಒಂದು ವೇಳೆ ಈ ಗುರೂಜಿ ನುಡಿದಿರುವ ಭವಿಷ್ಯವನ್ನು ನಂಬುತ್ತದೆ ಎಂದಾದರೇ, ಭಾರಿ ಭೂಕಂಪನ ಯಾವ ತಾರೀಖಿನಂದು, ಎಷ್ಟು ಸಮಯಕ್ಕೆ ಆಗುತ್ತದೆ, ಎಷ್ಟು ಪ್ರಮಾಣದಲ್ಲಿ ರಿಕ್ಟರ್ ಮಾಪಕದಲ್ಲಿ ದಾಖಲಾಗುತ್ತದೆ. ಕೊಡಗಿನ ಯಾವ ಪ್ರದೇಶದಲ್ಲಿ ಇದು ಕೇಂದ್ರಿಕೃತವಾಗಿರುತ್ತದೆ ಎಂಬುವುದನ್ನು ಸ್ಪಷ್ಟಪಡಿಸಬೇಕು. ಅಥವಾ ಸರಕಾರ ಇದನ್ನು ವೈಜ್ಞಾನಿಕವಾಗಿ ದೃಡೀಕರಿಸುತ್ತದೆಯೋ ಎಂಬುದು ಸಹ ಮುಖ್ಯವಾಗಿದೆ.

ಒಂದು ವೇಳೆ ಸರಕಾರ ಇದನ್ನು ಅಧಿಕೃತವಾಗಿ ನಂಬುವುದಾದರೇ, ಆತಂಕದಲ್ಲಿರುವ ಜನರಿಗೆ ಸುರಕ್ಷಿತ ಜಾಗಗಳಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಈಗಾಗಲೇ ಸತತ 2 ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ನಲುಗಿರುವ ಕೊಡಗಿನ ಜನತೆ ಈ ಭವಿಷ್ಯದಿಂದ ಮತ್ತಷ್ಟು ಆತಂಕಗೊಂಡಿದ್ದಾರೆ.

ಆದ್ದರಿಂದ ಈತ ಹೇಳಿರುವುದು ಸುಳ್ಳು ಎಂದಾದರೇ, ಮೂಡನಂಬಿಕೆ ಎಂದಾದರೇ ಸಮಾಜದಲ್ಲಿ ಆತಂಕ ಸೃಷ್ಟಿಸಲು ಕಾರಣವಾಗಿರುವ ಈ ಸ್ವಯಂಘೋಷಿತ ಬ್ರಹ್ಮಾಂಡ ಗುರೂಜಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಬ್ರಹ್ಮಾಂಡ ಸ್ವಾಮೀಜಿಯ ವಿರುದ್ದ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ದೂರು ನೀಡಲಾಗಿದೆ.

ದೂರು ದಾಖಲಿಸಿರುವ ಕೊಡಗು ಬೆಳೆಗಾರರ ಒಕ್ಕೂಟ ವಿರಾಜಪೇಟೆ ಡಿವೈಎಸ್ಪಿ ಜಯಕುಮಾರ್ ಅವರೊಂದಿಗೆ ಸಮಾಲೋಚನೆ ನಡೆಸಿದೆ. ಇದಕ್ಕೂ ಮೊದಲು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅವರೊಂದಿಗೆ ಸಮಾಲೋಚನೆ ನಡೆಸಿತು.

ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಪ್ರದಾನ ಕಾರ್ಯದಶಿ೯ ಅಣ್ಣೀರ ಹರೀಶ್ ಮಾದಪ್ಪ, ಜಂಟಿ ಕಾರ್ಯದಶಿ೯ ಬಾಚಂಗಡ ದಾದ ದೇವಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ ದೂರು ಸಲ್ಲಿಸಿದ್ದಾರೆ.

*TV 1 NEWS UPDATE*


Spread the love