ದಕ್ಷಿಣ ಕನ್ನಡ ಉಡುಪಿ ಮೀನು ಮಾರಾಟ ಫೆಡರೇಶನ್ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಗೆ ಎಕ್ಸ್ ರೇ ಯಂತ್ರ ಹಸ್ತಾಂತರ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ಇದರ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ರೋಗಿಗಳ ಸೇವೆಗಾಗಿ ಕೊಡುಗೆಯಾಗಿ ನೀಡಿದ ಎಕ್ಸ್ ರೇ ಯಂತ್ರದ ಉದ್ಘಾಟನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ನೇವರಿಸಿದರು.
ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಇತ್ತೀಚೆಗೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಎಕ್ಸ್ ರೇ ಸೇವೆಯಲ್ಲಿ ವ್ಯತ್ಯಯದಿಂದ ರೋಗಿಗಳಿಗೆ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೀನು ಮಾರಾಟ ಫೆಡರೇಶನ್ ಮೂಲಕ ಜಿಲ್ಲಾಸ್ಪತ್ರೆಗೆ ನೂತನ ಎಕ್ಸ್ ರೇ ಯಂತ್ರವನ್ನು ನೀಡಿದ್ದು, ಇದರಿಂದ ಜಿಲ್ಲಾಸ್ಪತ್ರೆಯಲ್ಲಿ ದಿನನಿತ್ಯ ಚಿಕಿತ್ಸೆಗೆ ಬರುವ ನೂರಾರು ರೋಗಿಗಳಿಗೆ ಸಹಕಾರಿಯಾಗಲಿದೆ ಎಂದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾಸ್ಪತ್ರೆಯ ಸರ್ಜನ್ ಡಾ. ಅಶೋಕ್ ಮಾತನಾಡಿ ಜಿಲ್ಲಾಸ್ಪತ್ರೆಯ ರೋಗಿಗಳ ಸೇವೆಗೆ ಎಕ್ಸ್ ರೇ ಯಂತ್ರವನ್ನು ಮೀನು ಮಾರಾಟ ಫೆಡರೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರಿಗೆ ಜಿಲ್ಲಾಸ್ಪತ್ರೆಯ ಪರವಾಗಿ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮೀನು ಮಾರಾಟ ಫೆಡರೇಷನ್ ಉಪಾಧ್ಯಕ್ಷರಾದ ಶ್ರೀ ದೇವಪ್ಪ ಕಾಂಚನ್, ನಿರ್ದೇಶಕರಾದ ಶ್ರೀ ರಾಮಚಂದ್ರ ಕುಂದರ್, ಶ್ರೀ ಸುರೇಶ್ ಸಾಲ್ಯಾನ್, ನಗರಸಭೆ ಮಾಜಿ ಅಧ್ಯಕ್ಷರಾದ ಶ್ರೀ ಪ್ರಭಾಕರ ಪೂಜಾರಿ, ಸದಸ್ಯರಾದ ಶ್ರೀಮತಿ ರಶ್ಮಿ ಸಿ. ಭಟ್, ಶ್ರೀ ಸುಂದರ ಕಲ್ಮಾಡಿ, ಶ್ರೀ ಯೋಗೀಶ್ ಸಾಲ್ಯಾನ್, ಶ್ರೀ ಟಿ. ಜಿ. ಹೆಗ್ಡೆ, ಶ್ರೀ ಹರೀಶ್ ಶೆಟ್ಟಿ, ಶ್ರೀಮತಿ ಎಡ್ಲಿನ್ ಕರ್ಕಡ, ಮೀನುಗಾರ ಮುಖಂಡರಾದ ಶ್ರೀ ದಯಾನಂದ ಸುವರ್ಣ, ಶ್ರೀ ಜಗನ್ನಾಥ ಕಡೆಕಾರ್, ಶ್ರೀ ಸುಭಾಷ್ ಮೆಂಡನ್, ಶ್ರೀ ಸತೀಶ್ ಕುಂದರ್, ಶ್ರೀ ನಾಗರಾಜ ಸುವರ್ಣ, ಶ್ರೀ ರತ್ನಾಕರ ಸಾಲ್ಯಾನ್, ಶ್ರೀ ಸುಂದರ ಸಾಲ್ಯಾನ್, ಶ್ರೀ ವಿನಯ ಕರ್ಕೇರ, ಶ್ರೀ ಕರುಣಾಕರ ಸಾಲ್ಯಾನ್, ಶ್ರೀ ನಾಗರಾಜ ಕುಂದರ್, ಶ್ರೀ ಮಿಥುನ್ ಕುಂದರ್, ಶ್ರೀ ಕೃಷ್ಣ ಕೋಟ್ಯಾನ್, ಶ್ರೀಮತಿ ಗೀತಾ ಕರ್ಕೇರ, ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಶ್ರೀ ರಾಜೀವ್ ಕುಲಾಲ್, ಪ್ರಮುಖರಾದ ಶ್ರೀ ಸುನೀಲ್ ನೇಜಾರು, ಶ್ರೀ ಸುಭಾಷಿತ್, ಶ್ರೀ ರಾಘವೇಂದ್ರ ಆಚಾರ್ಯ, ಶ್ರೀಮತಿ ಸುನೀತಾ ಭಂಡಾರಿ, ಶ್ರೀ ಸುಧಾಕರ ಪ್ರಭು, ಉಡುಪಿ ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ, ವೈದ್ಯರಾದ ಡಾ. ಆಮ್ನ ಮೊದಲಾದವರು ಉಪಸ್ಥಿತರಿದ್ದರು.













