ಜ.3: ಮಿಸ್ಟರ್ ಉಡುಪಿ ಕ್ಲಾಸಿಕ್ 2026 ಇದರ ಟ್ರೋಫಿ ಅನಾವರಣ

Spread the love

ಜ.3: ಮಿಸ್ಟರ್ ಉಡುಪಿ ಕ್ಲಾಸಿಕ್ 2026 ಇದರ ಟ್ರೋಫಿ ಅನಾವರಣ

ಉಡುಪಿ: ಪರ್ಯಾಯ ಮಹೋತ್ಸವದ ಪ್ರಯುಕ್ತ ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೊಶೀಯೇಶನ್ ಇವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಮಿಸ್ಟರ್ ಉಡುಪಿ ಕ್ಲಾಸಿಕ್ 2026 ಇದರ ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 3 ರಂದು ಶನಿವಾರ ಸಂಜೆ 4 ಗಂಟೆಗೆ ನಡೆಯಲಿದೆ.

ಸಂಜೆ 4 ಗಂಟೆಗೆ ಉಡುಪಿ ಶ್ರೀ ಕೃಷ್ಣ ಮಠದ ಆವರಣದಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರ ಆಶೀರ್ವಚನದೊಂದಿಗೆ ಟ್ರೋಫಿಯನ್ನು ನಗರದಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು, ಸಂಜೆ 5 ಗಂಟೆಗೆ ಕಲ್ಸಂಕ ಮಾಂಡವಿ ಸ್ಕ್ವೆರ್ ಮಾಲ್ ಇದರ ನೆಲ ಮಾಳಿಗೆಯಲ್ಲಿ ಇರುವ ಅತ್ರಿಯಂ ಸಭಾಂಗಣದಲ್ಲಿ ಟ್ರೋಫಿ ಅನಾವರಣ ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಭಾಗವಹಿಸಲಿದ್ದು, ಗೌರವ ಅತಿಥಿಗಳಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನಕರ ಹೇರೂರು, ಉಡುಪಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೋಶೀಯೇಶನ್ ಇದರ ಅಧ್ಯಕ್ಷರಾದ ಜೇಸನ್ ಡಾಯಸ್, ಉಡುಪಿಯ ಉದ್ಯಮಿ ಮಿಥಿಲೇಶ್ ಭಾಗವಹಿಸಲಿದ್ದಾರೆ.

ಮಿಸ್ಟರ್ ಕ್ಲಾಸಿಕ್ 2026 ಕಾರ್ಯಕ್ರಮ ಜನವರಿ 17 ರಂದು ಉಡುಪಿ ಶೋಕಮಾತಾ ಚರ್ಚಿನ ಮೈದಾನದಲ್ಲಿ ಆಯೋಜಿಸಲಾಗಿದ್ದು ವಿವಿಧ ವಿಭಾಗಗಳಲ್ಲಿ ದೇಹದಾರ್ಡ್ಯ  ಸ್ಪರ್ಧೆಗಳು ಜರುಗಲಿವೆ ಎಂದು ಕಾರ್ಯಕ್ರಮದ ಆಯೋಜಕರಾದ ಪ್ರಸಾದ್ ರಾಜ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments