ಜ.5-11: 24ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ

Spread the love

ಜ.5-11: 24ನೇ ವರ್ಷದ ಕೆಮ್ತೂರು ತುಳು ನಾಟಕ ಸ್ಪರ್ಧೆ

ಉಡುಪಿ: ತುಳುಕೂಟ ಉಡುಪಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ 24ನೇ ವರ್ಷದ ದಿ.ಕೆಮ್ತೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳು ನಾಟಕ ಸ್ಪರ್ಧೆಯನ್ನು ಜನವರಿ 5ರಿಂದ 11ರವರೆಗೆ ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ದೇಶದ ಯಾವುದೇ ಪ್ರದೇಶದ ಅರ್ಹ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ಒಟ್ಟು 14 ತಂಡಗಳು ಸ್ಪರ್ಧೆಗೆ ಅರ್ಜಿ ಹಾಕಿದ್ದು, ಈ ಬಾರಿ ಒಟ್ಟು 7 ಪ್ರಸಿದ್ಧ ತಂಡಗಳಿಗೆ ಅವಕಾಶ ನೀಡಲಾಗಿದೆ ಎಂದರು.

ತುಳುಭಾಷಾ ಸಾಹಿತ್ಯ, ಸಂಸ್ಕೃತಿಯ ಬಗೆಗೆ ಒಲವು ಹೊಂದಿರುವ ದೇಶ, ವಿದೇಶಗಳ ತುಳು ಭಾಷೆಯನ್ನಾಡುವ ಸದಸ್ಯರನ್ನು ಹೊಂದಿರುವ ಹಾಗೂ ತುಳುನಾಡಿನಾದ್ಯಂತ ಕಾರ್ಯಕ್ಷೇತ್ರವನ್ನು ಹೊಂದಿರುವ ತುಳುಕೂಟ ಉಡುಪಿ (ರಿ.) ಸಂಸ್ಥೆಯು 24.02.1985 ರಲ್ಲಿ ಸ್ಥಾಪಕಾಧ್ಯಕ್ಷರಾದ ಡಾ| ಭಾಸ್ಕರಾನಂದ ಕುಮಾರ್ ಅವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡಿತು. ತುಳು ಘಂಟು, ಸಾಹಿತ್ಯ, ನಾಟಕ, ಯಕ್ಷಗಾನ, ಹಬ್ಬ ಹರಿದಿನಗಳ ಆಚರಣೆ, ಭೂತಕೋಲ, ಜಾನಪದ ನಲಿಕೆ, ಪಾಡನ, ನಂಬಿಕೆ ತ್ಯಾದಿಗಳ ಬಗ್ಗೆ ವಿಷಯ ಸಂಗ್ರಹಿಸಿ ಸಾಂಸ್ಕೃತಿಕ ಸಿರಿ ಅಳಿಯದಂತೆ ಉಳಿಸಲು ಕಳೆದ 40 ವರ್ಷಗಳಿಂದ ಸಾಕಷ್ಟು ಆರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಪ್ರಸ್ತುತ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರ ಅಧ್ಯಕ್ಷತೆಯಲ್ಲಿ ತುಳುಕೂಟ ಉಡುಪಿ ಮಾನ ಮನಸ್ಕರ ತಂಡದೊಂದಿಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ದಿ. ನಿಟ್ಟೂರು ಸಂಜೀವ ಭಂಡಾರಿ ನೆನಪಿನ ತುಳು ಭಾವಗೀತೆ ಸ್ಪರ್ಧೆ, ತುಳು ವಿದ್ವಾಂಸರಾದ ದಿ| ಎಸ್. ಯು. ಪಣಿಯಾಡಿ ವರ ನೆನಪಿನಲ್ಲಿ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ, ತುಳು ನಾಟಕ ರಂಗದ ಮೇರುವ್ಯಕ್ತಿ ದಿ. ಕೆಸ್ತೂರು ದೊಡ್ಡಣ್ಣ ಶೆಟ್ಟಿ ದಪಿನ ಕೆಸ್ತೂರು ತುಳು ನಾಟಕ ಸ್ಪರ್ಧೆ, ತುಳು ಮಿನದನ, ಮದಿರೆಂಗಿದ ರಂಗ್, ತುಳುವ ನಡಕೆ, ತುಳುವ ಗೊಬ್ಬುಲು, ಸೋಣದ ಸೆ, ಆಟಿದ ಕಷಾಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ವಿದ್ಯಾರ್ಥಿಗಳಿಗೆ ತೃತೀಯ ಭಾಷೆಯಾಗಿ ತುಳುವನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುವ ಸಲುವಾಗಿ ವಿಶಿಷ್ಟ ಶ್ರೇಣಿಯಲ್ಲಿ ರ್ಗಡೆ ಹೊಂದಿದೆ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ತುಳು ಲಿಪಿ ಕಲಿಕೆಗೆ ಪ್ರೋತ್ಸಾಹ ಹಾಲಾಗುತ್ತಿದೆ. ತುಳುಭಾಷೆಯನ್ನು ಎಂಟನೇ ಪರಿಚ್ಛೇದದಡಿ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ತುಳುಕೂಟದ ವತಿಯಿಂದ ಕಾರ, ಜನಪ್ರತಿನಿಧಿಗಳಿಗೆ ಬೇಡಿಕೆ ಸಲ್ಲಿಸಿ ಹೋರಾಟಕ್ಕೆ ಮುಂದಡಿ ಇಡಲಾಗಿದೆ. ತುಳುಕೂಟದ ಕಾರ್ಯಕ್ರಮಗಳಿಂದಾಗಿ ಮಾರು 100 ಕ್ಕಿಂತಲೂ ಹೆಚ್ಚು ತುಳು ಕಾದಂಬರಿ ಪುಸ್ತಕಗಳು ಪ್ರಕಟಗೊಂಡಿರುತ್ತವೆ. ತುಳು ಸಾಹಿತ್ಯ ಮಾಲೆಯಿಂದ ಅನೇಕ ಈ ಲೇಖಕರ ಪುಸ್ತಕಗಳ ಪ್ರಕಟಣೆಯೂ ನೆರವೇರಿದೆ. ತುಳು ರಂಗಭೂಮಿಯಲ್ಲಿ ಹೊಸ ಅಲೆಯ 300ಕ್ಕಿಂತಲೂ ಹೆಚ್ಚು ಟಕಗಳು ಪ್ರದರ್ಶನಗೊಂಡು ತುಳು ನಾಟಕ ರಂಗಭೂಮಿಗೆ ಈ ಮೂಲಕ ಹೊಸಾ ಆಯಾಮವನ್ನು ನೀಡುವ ಪ್ರಯತ್ನ ನಡೆದಿದೆ.

ಈ ಬಾರಿ 24ನೇ ವರ್ಷದ ಕೆಮ್ಮೂರು ದೊಡ್ಡಣ್ಣ ಶೆಟ್ಟಿ ನೆನಪಿನ ತುಳುನಾಟಕ ಸ್ಪರ್ಧೆಯು ಇದೇ ಜನವರಿ 5ರಿಂದ 11 ರತನಕ ಉಡುಪಿ ಎಂ.ಜಿ.ಎಂ.ಕಾಲೇಜಿನ ಮುದ್ದಣ ಮಂಟಪದಲ್ಲಿ ಆಯೋಜಿಸಲಾಗಿದೆ. ದೇಶದ ಯಾವುದೇ ಪ್ರದೇಶದ ಯೋಗ್ಯ ತುಳು ಹವ್ಯಾಸಿ ನಾಟಕ ತಂಡಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ ವಿವಿಧ 7 ಪ್ರಸಿದ್ಧ ತಂಡಗಳಿಗೆ ಅವಕಾಶ ನೀಡಲಾಗಿದೆ. ಜನವರಿ 5, 2026 ರಂದು ಸಂಜೆ 5 ಗಂಟೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕೆ.ಎಂ.ಶೆಟ್ಟಿ ಚೇರ್ಮೆನ್ ವಿ.ಕೆ. ಗ್ರೂಪ್ ಆಫ್ ಕಂಪನೀಸ್ ಅವರು ಕೆಸ್ತೂರು ತುಳು ನಾಟಕ ಪರ್ಬ ಉದ್ಘಾಟಿಸಲಿರುವರು. ಶ್ರೀ ಪ್ರಮೋದ್ ಮಧ್ವರಾಜ್, ಮಾಜಿ ಸಚಿವರು, ಕರ್ನಾಟಕ ಸರಕಾರ ಹಾಗೂ ಪ್ರೊ. ವನಿತಾ ಮಯ್ಯ, ಪ್ರಾಂಶುಪಾಲರು ಎಂ.ಜಿ.ಎಂ. ಕಾಲೇಜು ಉಡುಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಜನವರಿ 5 ರಂದು ಕಲಾಮಂದಿರ ಉಡುಪಿ ಇವರಿಂದ ಪಿಲಿ ನಾಟಕ, ಜನವರಿ 6 ರಂದು ರಂಗ ಮಿಲನ, ಮುಂಬಯಿ ಇವರಿಂದ ನಾಗ ಸಂಪಿಗೆ ನಾಟಕ, ಜನವರಿ 7 ರಂದು ಶ್ರೀ ವಿಷ್ಣು ಕಲಾವಿದರ್ ಮದ್ದಡ್ಕ ಇವರಿಂದ ಕಾಶಿತೀರ್ಥ ನಾಟಕ, ಜನವರಿ 8 ರಂದು ಕರಾವಳಿ ಕಲಾವಿದರು (ರಿ.) ಮಲ್ಪೆ, ಉಡುಪಿ ಇವರಿಂದ ಮುಗಿಯಂದಿ ಕಥೆ ನಾಟಕ, ಜನವರಿ 9ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಟಿ ಇವರಿಂದ ನೆಲ ನೀರ್ದ ದುನಿಪು ನಾಟಕ, ಜನವರಿ.10 ರಂದು ಸುಮನಸಾ (ರಿ.) ಕೊಡವೂರು, ಉಡುಪಿ ಇವರಿಂದ ಯೇಸ ನಾಟಕ, ಜನವರಿ 11 ರಂದು ಸಂಗಮ ಕಲಾವಿದೆರ್ ಮಣಿಪಾಲ (ರಿ.) ಇವರಿಂದ ಮಾಯೊಕದ ಮಣ್ಣಕರ ನಾಟಕ ಪ್ರದರ್ಶನಗೊಳ್ಳಲಿದೆ.

ವಿಜೇತ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ರೂ.20,000.00, ರೂ. 15,000.00, ರೂ. 10,000.00 ನಗದು ಬಹುಮಾನ, ಅಲ್ಲದೇ ನಿರ್ದೇಶನ, ಸಂಗೀತ, ರಂಗವಿನ್ಯಾಸ, ಬೆಳಕು, ನಟ, ನಟಿ ವಿಭಾಗಗಳಲ್ಲಿ ಪ್ರಥಮ ರೂ. 1,000.00 ಮತ್ತು ದ್ವಿತೀಯ, ತೃತೀಯ ಬಹುಮಾನ ಕೊಡಲಾಗುವುದು. ಸ್ಪರ್ಧೆಗೆ ಆಯ್ಕೆಯಾದ ರಾಜ್ಯದೊಳಗಿನ ತಂಡಗಳಿಗೆ ರೂ. 5,000.00 ಹಾಗೂ ಹೊರರಾಜ್ಯದ ತಂಡಗಳಿಗೆ ರೂ. 10,000.00 ಭತ್ಯೆಯೊಂದಿಗೆ ಊಟ ಉಪಚಾರ ಮತ್ತು ಉತ್ತಮ ಸೌಕರ್ಯಗಳನ್ನು ಒದಗಿಸಲಾಗುತ್ತದೆ. ಉಡುಪಿ ತುಳುಕೂಟದ ಪ್ರತಿಷ್ಠಿತ ಹಾಗೂ ಯಶಸ್ವಿ ಕಾರ್ಯಕ್ರಮವಾದ ಕನ್ನೂರು ತುಳು ನಾಟಕ ಪರ್ಬವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಎಂ.ಜಿ.ಎಂ. ಕಾಲೇಜು ಉಡುಪಿ, ಅಖಿಲ ಭಾರತ ತುಳುಕೂಟ (ರಿ.) ಕುಡ್ಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ಇವರ ಸಹಯೋಗದೊಂದಿಗೆ ಆಯೋಜನೆ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಗಂಗಾಧರ ಕಿದಿಯೂರು, ನಾಟಕ ಸ್ಪರ್ಧೆಯ ಸಂಚಾಲಕ ಬಿ. ಪ್ರಭಾಕರ ಭಂಡಾರಿ, ಭುವನ ಪ್ರಸಾದ್ ಮಾಧ್ಯಮ ಸಂಚಾಲಕಿ ಭಾರತಿ ಟಿ.ಕೆ, ಯಶೋದ ಕೇಶವ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments