ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ, 26ನೇ ವಾರ್ಷಿಕ ಮಹಾಸಭೆ
ಮುಂಬಯಿ: ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯು ಕಳೆದ 26 ವರ್ಷಗಳಿಂದ ಕರಾವಳಿಯ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು ಇದೀಗ 27 ನೇ ವರ್ಷಕ್ಕೆ ಪದಾರ್ಪಣೆ ಮಾಡಿದ್ದು ಸಮಿತಿಯ ಸಂಸ್ಥಾಪಕರರೊಂದಿಗೆ ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಬೇಕಾಗಿದೆ. ಸಮಿತಿಯ ಪ್ರಾರಂಭದಿಂದಲೇ ಸಮಿತಿಗೆ ನಾನು ನನ್ನಿಂದಾಗುವ ಸೇವೆಯನ್ನು ಮಾಡುತ್ತಿದ್ದು ಸಮಿತಿಯ ಮುಂದಿನ ಯೊಜನೆಗಳನ್ನು ನಾವೆಲ್ಲರೂ ಒಟ್ಟಾಗಿ ಕಾರ್ಯರೂಪಕ್ಕೆ ತರುವಲ್ಲಿ ಕ್ರೀಯಾಶೀಲರಾಗೋಣ ಎಂದು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ನುಡಿದರು.

ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯ 26ನೇ ವಾರ್ಷಿಕ ಮಹಾಸಭೆಯು ಮುಂಬಯಿ ಸಾಕಿನಾಕಾದ, ಪೆನಿನ್ಸುಲಾ ಗ್ರಾಂಡ್ ಹೋಟೆಲು, ಇಲ್ಲಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿ ಯವರ ಉಪಸ್ಥಿತಿಯಲ್ಲಿ, ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಾ ಸಮಿತಿಯ ಬೆಳ್ಳೆ ಹಬ್ಬ ಸಮಾರಂಭವನ್ನು ಮಂಗಳೂರಿನಲ್ಲಿ ಯಶಸ್ಸಿಯಾಗಿ ನಡೆಯಲು ಕಾರಣಕರ್ತರಾದ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತಾ ಸಮಿತಿಯ ಕಾರ್ಯದ ಬಗ್ಗೆ ಹೆಚ್ಚಿನ ರಾಜಕೀಯ ಮುಖಂಡರುಗಳಿಗೆ ತಿಳಿದಿದ್ದು, ನಮ್ಮ ಪರಿಶ್ರಮಕ್ಕೆ ಎಂದೂ ಕುಂದು ಕೊರತೆಯಾಗಲಾರದು. ಜಿಲ್ಲೆಗಳ ಅಭಿವೃದ್ದಿಗಾಗಿ ಎಲ್ಲರೂ ಒಂದಾಗೋಣ ಇದರೊಂದಿಗೆ ಜನಸಾಮಾನ್ಯರಿಗೆ ಪ್ರಯೋಜನಕಾರಿಯಾಗುವ ಸಮಾಜ ಮುಖಿ ಕಾರ್ಯದ ಬಗ್ಗೆ ಚಿಂತಿಸೋಣ ಎಂದರು.
ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಗತವರ್ಷದ ವರದಿ ಹಾಗು ಗತ ಮಹಾಸಭೆಯ ವರದಿಯನ್ನು ಮತ್ತು ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ ಅವರು ಗತ ವರ್ಷದ ಲೆಕ್ಕ ಪತ್ರವನ್ನು ಸಭೆಯಲ್ಲಿ ಮಂಡಿಸಿದರು.
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ, ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡುತ್ತಾ ಎಲ್ಲರೂ ಆತ್ಮೀಯತೆಯಿಂದ ಒಗ್ಗಟ್ಟಾಗಿ ಶ್ರಮಿಸಿದ ಪರಿಣಾಮ ಸಮಿತಿಯ 25ನೇ ವರ್ಷದ ಬೆಳ್ಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಯಿತು. ರಾಜ್ಯದ ಇಬ್ಬರು ಹಿರಿಯ ಸಚಿವರು ಸೇರಿದಂತೆ ಅನೇಕ ರಾಜಕೀಯ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದು, ಜಿಲ್ಲೆಯ ಅಭಿವೃದ್ಧಿಯ ಕುರಿತಾದ ವಿಚಾರಗಳನ್ನು ಅವರ ಗಮನಕ್ಕೆ ತರುವಲ್ಲಿ ಸಮಿತಿ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಯುವಜನತೆಯನ್ನು ಸಮಿತಿಯ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಮಾಡುವುದು ಅಗತ್ಯವಾಗಿದೆ. ಸಮಿತಿಯು ಸರಕಾರೇತರ ಸಂಘಟನೆಯಾಗಿದ್ದು, ಜಿಲ್ಲೆಗಳ ವಿವಿಧ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಕಾರ್ಯವನ್ನು ಕ್ರಮಬದ್ಧವಾಗಿ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸಮಿತಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದು, ಸಮಸ್ಯೆಗಳ ಪರಿಹಾರಕ್ಕೆ ಅಗತ್ಯವಾದ ಮುಂದಿನ ಕ್ರಮಗಳನ್ನು ಕೈಗೊಳ್ಳುವುದು ಸರಕಾರದ ಕೆಲಸ. ಜಿಲ್ಲೆಯಲ್ಲಿ ಸಮಿತಿಯ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿಯವರ ನೇತೃತ್ವದಲ್ಲಿ ಶೇಖಡಾ 80ರಷ್ಟು ಕೆಲಸವನ್ನು ಸಮಿತಿ ಮಾಡಿದ್ದು ಉಳಿದ ಕಾರ್ಯವು ಸರಕಾರದ್ದಾಗಿದ್ದು ಅದನ್ನು ಸರಕಾರವೇ ಪೂರೈಸಬೇಕಾಗಿದೆ. ಕರಾವಳಿ ಪ್ರದೇಶದಲ್ಲಿ ಸಮುದ್ರ ಕೊರೆತ ತಡೆಗೆ ತಡೆಗೋಡೆ ನಿರ್ಮಾಣ, ದಿನದ 24 ಗಂಟೆಯೂ ನಿರಂತರ ವಿದ್ಯುತ್ ಸರಬರಾಜು ಹಾಗೂ ಕೋಮುವಾದದ ನಿರ್ಮೂಲನೆ ಸೇರಿದಂತೆ ಪ್ರಮುಖ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳ ಕುರಿತು ಸೂಕ್ತ ನಿರ್ಣಯಗಳನ್ನು ಅಂಗೀಕರಿಸಲಿದ್ದೇವೆ. ಮುಂದಿನ ಪೀಳಿಗೆಗೆ ಪ್ರಯೋಜನಕಾರಿಯಾಗುವಂತಹ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಹಾಗೂ ಅವುಗಳನ್ನು ಸರಕಾರದ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವಲ್ಲಿ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸಮಿತಿಯು ಮುಂದೆಯೂ ಜನಹಿತ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳಿಗೆ ಆದ್ಯತೆ ನೀಡಲಿದೆ ಎಂದರು.

ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಶೆಟ್ಟಿ ಮಾತನಾಡುತ್ತಾ ಕೇಂದ್ರ ಸಮಿತಿಯು ಜಿಲ್ಲಾ ಸಮಿತಿಯನ್ನು ನೇಮಿಸಿದ್ದು, ಜಿಲ್ಲಾ ಸಮಿತಿಗೆ ನೀಡಿದ ಎಲ್ಲಾ ಜವಾಬ್ಧಾರಿಯನ್ನು ನಿರ್ವಹಿಸುದರಲ್ಲಿ ಜಿಲ್ಲಾ ಸಮಿತಿಯು ಯಶಸ್ಸಿಯಾಗಿ ಕಾರ್ಯ ನಿರ್ವಹಿಸಿದೆ. ಹೆಚ್ಚಿನ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ನಮ್ಮ ಯಾವುದೇ ಯೋಜನೆಗಳನ್ನು ಯಸಸ್ಸಿಯಾಗಿ ಪೂರೈಸಲು ಕೇಂದ್ರ ಸಮಿತಿಯ ಸಹಕಾರ ಅಗತ್ಯ. ಜಿಲ್ಲಾ ಸಮಿತಿಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬಸ್ಸಿನ ವ್ಯವಸ್ಥೆ, ನೇತ್ರಾವತಿ ನೀರು ಸೇರಿ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಕೆಲವು ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು ಅದೆಲ್ಲವನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಯತ್ನ ಯಶಸ್ಸಿಯ ಹಾದಿಯಲ್ಲಿದೆ. ಸಮಿತಿಯ ಬೆಳ್ಳಿ ಹಬ್ಬವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಜಿಲ್ಲಾ ಸಮಿತಿಯ ಕಾರ್ಯ ಸ್ಲಾಘನೀಯ. ಇದಲ್ಲದೆ ಇನ್ನೂ ಹಲವಾರು ಯೋಜನೆಗಳನ್ನು ಈಡೇರಿಸುವಲ್ಲಿ ನಿಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದರು.

ಸಭಿಕರ ಪರವಾಗಿ ಸಮಿತಿಯ ಮಾಜಿ ಅಧ್ಯಕ್ಷ, ಧರ್ಮಪಾಲ್ ಯು. ದೇವಾಡಿಗ, ಸಮಿತಿಯ ಉಪಾಧ್ಯಕ್ಷರುಗಳಾದ ಸಿಎ ಐ. ಅರ್. ಶೆಟ್ಟಿ, ಶ್ರೀನಿವಾಸ್ ಸಾಪಲ್ಯ, ನ್ಯಾ. ಆರ್. ಎಂ. ಭಂಡಾರಿ, ಡಾ. ಸುರೇಂದ್ರಕುಮಾರ್ ಹೆಗ್ಡೆ, ಹಿರಿಯಡ್ಕ ಮೋಹನ್ ದಾಸ್, ಪಿ. ಧನಂಜಯ ಶೆಟ್ಟಿ, ಗೌರವ ಕಾರ್ಯದರ್ಶಿ ಸಿ ಎಸ್ ಗಣೇಶ್ ಶೆಟ್ಟಿ, ನ್ಯಾ. ಮೊರ್ಲ ರತ್ನಾಕರ ಶೆಟ್ಟಿ, ಮೊದಲಾದವರು ಮಾತನಾಡುತ್ತಾ ಸಮಿತಿಯ ಮುಂದಿನ ಕಾರ್ಯಕ್ಕೆ ಸೂಕ್ತ ಸಲಹೆ ಸೂಚನೆಯಿತ್ತರು. ಮಂಗಳೂರು–ಮುಂಬಯಿ ರೈಲು ಸಂಚಾರದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು, ಮುಂಬಯಿ–ಮಂಗಳೂರು–ಮುಂಬಯಿ ವಿಮಾನ ಪ್ರಯಾಣದ ವಿಪರೀತ ದರಗಳು ಸೇರಿದಂತೆ ಹಲವು ಪ್ರಮುಖ ಸಾರ್ವಜನಿಕ ಸಮಸ್ಯೆಗಳನ್ನು ಸಮಿತಿಯ ಗಮನಕ್ಕೆ ತರಲಾಯಿತು. ಈ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಪಟ್ಟವರ ಗಮನ ಸೆಳೆಯುವ ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಅಗತ್ಯದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಮಿತಿಯ ಗೌರವ ಕೋಶಾಧಿಕಾರಿ ಸದಾನಂದ ಎನ್ ಆಚಾರ್ಯ ಮಾತನಾಡುತ್ತಾ ಸಮಿತಿಗೆ ಈಗಾಗಲೇ ಸದಸ್ಯರೆಲ್ಲರೂ ಪ್ರೋತ್ಸಾಹಿಸುತ್ತಿದ್ದು ನಮಗೆ ಹೆಚ್ಚಿನ ಮೊತ್ತದ ದೇಣಿಗೆ ದೊರೆತಲ್ಲಿ ಸಮಿತಿಯ ಎಲ್ಲಾ ಕಾರ್ಯಗಳು ಇನ್ನೂ ಸುಗಮವಾಗಿ ನಡೆಯಲು ಸಾಧ್ಯ. ಆದುದರಿಂದ ಈ ಬಗ್ಗೆ ಎಲ್ಲಾ ಸದಸ್ಯರು ಸಹಕರಿಸಬೇಕೆಂದರು.
ಸಮಿತಿಯ ಸಲಹೆಗಾರರಾದ ಲಕ್ಷ್ಮಣ್ ಪೂಜಾರಿ, ಉಪಾಧ್ಯಕ್ಷರುಗಳಾದ ತೋನ್ಸೆ ವಿಜಯಕುಮಾರ್ ಶೆಟ್ಟಿ ಮತ್ತು ಜಿತೇಂದ್ರ ಗೌಡ, ಗೌರವ ಕಾರ್ಯದರ್ಶಿಗಳಾದ ದೇವದಾಸ್ ಕುಲಾಲ್ ಮತ್ತು ಹ್ಯಾರೀ ಸಿಕ್ವೇರಾ, ಗೌರವ ಜೊತೆ ಕೋಶಾಧಿಕಾರಿಗಳಾದ ರಾಕೇಶ್ ಭಂಡಾರಿ ಮತ್ತು ಮಹೇಶ್ ಕಾರ್ಕಳ, ರವಿ ಎಸ್ ದೇವಾಡಿಗ, ಕರುಣಾಕರ ಪಿ, ಆರ್. ಬಿ. ದೇವಾಡಿಗ, ಎಂ. ಎನ್. ಕರ್ಕೇರ, ತೋನ್ಸೆ ಅಶೋಕ್ ಶೆಟ್ಟಿ, ಚಿತ್ರಾಪು ಕೆ. ಎಂ. ಕೋಟ್ಯಾನ್, ತುಳಸಿದಾಸ್ ಎಲ್. ಅಮೀನ್, ಲೋಕನಾಥ್ ಪೂಜಾರಿ, ಸಂತೋಷ್ ಕುಮಾರ್ ಹೆಗ್ಡೆ, ಉತ್ತಮ್ ಶೆಟ್ಟಿಗಾರ್, ಕೃಷ್ಣ ಕುಮಾರ್ ಬಂಗೇರ, ಜಯರಾಮ ಕೆ ಶೆಟ್ಟಿ, ವಿಜಯ ಕುಮಾರ್, ವಾಸು ದೇವಾಡಿಗ, ಸುರೇಖಾ ದೇವಾಡಿಗ, ಹೇಮಂತ ದೇವಾಡಿಗ, ನಿಟ್ಟೆ ದಾಮೋದರ, ಬೆಳ್ಳಿಪ್ಪಾಡಿ ಸಂತೋಷ್ ರೈ, ಕಿಶೋರ್ ಕುಮಾರ್ ಕುತ್ಯಾರ್, ನ್ಯಾ. ದಯಾನಂದ ಕೆ ಶೆಟ್ಟಿ, ಪದ್ಮನಾಭ ಸಸಿಹಿತ್ತ್ಲು, ಡಾ. ಪ್ರಭಾಕರ ಶೆಟ್ಟಿ ಬೋಳ, ಗಂಗಾಧರ ಎನ್ ಗೌಡ, ಬಾಲಕೃಷ್ಣ ಆಚಾರ್ಯ, ಕೃಷ್ಣ ಕುಮಾರ್, ಸದಾಶಿವ ಪೂಜಾರಿ, ಆರ್. ಎಚ್. ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.
ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ವಂದನಾರ್ಪಣೆ ಮಾಡಿದರು.












