ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಜಿತಕಾಮಾನಂದ ಸ್ವಾಮಿ ಕರೆ
ಮಂಗಳೂರು : ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣವೆಂಬ ಭಾವನೆಯಿಂದ ಈ ಸ್ಪರ್ಧೆಗಳನ್ನು ಎದುರಿಸಲು ಮುಂದಾಗು ವವ ಮಂಗಳೂರಿಗರ ಸಂಖ್ಯೆ ಕಡಿಮೆಯಾಗಿರುತ್ತದೆ. ಆದರೆ ದೃಢ ಸಂಕಲ್ಪ ಮತ್ತು ಸೂಕ್ತ ಮಾರ್ಗದರ್ಶನವಿದ್ದಲ್ಲಿ ಯಶಸ್ಸು ಸಾಧ್ಯ ಎಂದು ಮಂಗಳೂರು ರಾಮಕೃಷ್ಣ ಮಿಷನ ನ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಅಭಿಪ್ರಾಯಿಸಿದ್ದಾರೆ.
ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಹಾಗೂ ಮಂಗಳೂರು ಐಎಎಸ್ ಸಂಸ್ಥೆಯು ಮಂಗಳೂರು ರಾಮಕೃಷ್ಣ ಮಿಷನ್‌ನ ಸಹಯೋಗದಲ್ಲಿ ರಾಮಕೃಷ್ಣ ಮಿಷನ್‌ನಲ್ಲಿ ರವಿವಾರ ಆಯೋಜಿಸಿದ್ದ ‘ಮಾರ್ಗದರ್ಶಿ ಕ್ರ್ಯಾಕಿಂಗ್ ದಿ ಯುಪಿಎಸ್ಸಿ ಎಕ್ಸಾಮಿನೇಷ’ ಎಂಬ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಗುರಿ ಹೊಂದುವುದು ಮಾತ್ರ ಸಾಕಾಗುವುದಿಲ್ಲ. ಅದನ್ನು ತಲುಪುವ ಮಾರ್ಗವನ್ನೂ ಬಲಪಡಿಸಬೇಕು ಎಂದು ಹೇಳಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ರಾಮಕೃಷ್ಣ ಮಿಷನ್‌ನಲ್ಲಿ ವಿಶೇಷ ಓದುಗ ಕೊಠಡಿ (ರೀಡಿಂಗ್ ರೂಂ) ವ್ಯವಸ್ಥೆ ಮಾಡಲಾಗಿದ್ದು, ಅನೇಕ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ರಾವ್, ಯುಪಿಎಸ್ಸಿ ಮಾಸ್ಟರ್ ತರಬೇತು ದಾರರಾದ ಮೋಹನ್ ಕೃಷ್ಣಮೂರ್ತಿ ಹಾಗೂ ೀ ಚಂದ್ರಮೋಹನ್ ಇನಗಂಟಿ, ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಸುಮನಾ ಬಿ., ಹಾಗೂ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನ ಜಾಗತಿಕ ಪ್ರಮಾಣಿತ ಶಿಕ್ಷಣತಜ್ಞ ಡಾನ್ ಪ್ರಕಾಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಯಾನ್ ಇಂಟರ್‌ನ್ಯಾಷನಲ್ ಶಾಲೆಯ ಪ್ರಾಂಶುಪಾಲೆ ವೈಜಯಂತಿ ಹೆಗ್ಡೆ, ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಡಾ. ಸಿ. ಕಮಲಕಣ್ಣನ್, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್‌ನ ನಿರ್ದೇಶಕ ಫಾ. ರೋಷನ್ ರೊಸಾರಿಯೊ, ರಚನಾ ಕಾರ್ಯದರ್ಶಿ ಅಲ್ರಾನ್ ರೊಡ್ರಿಗಸ್ ಹಾಗೂ ಸದಸ್ಯರಾದ ವಿಲಿಯಂ ಡಿಸೋಜಾ, ಎಡ್ವರ್ಡ್ ಫೆರ್ನಾಂಡಿಸ್ ಮತ್ತು ನವೀನ್ ಲೋಬೊ ಭಾಗವಹಿಸಿದ್ದರು.
ಅತಿಥಿಗಳನ್ನು ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಸ್ವಾಗತಿಸಿ, ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡುವ ಉದ್ದೇಶದಿಂದ ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದರು. ಮಂಗಳೂರು ಐಎಎಸ್ ಸಂಸ್ಥಾಪಕ ಸಂತೋಷ್ ರಾವ್ ವಂದಿಸಿದರು.
ಜಾಸ್ಮಿನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.












