ಶಾಸಕ ವೇದವ್ಯಾಸ ಕಾಮತ್ಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸವಾಲು

Spread the love

ಶಾಸಕ ವೇದವ್ಯಾಸ ಕಾಮತ್ಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಸವಾಲು

ಮಂಗಳೂರು : ಆಗ್ನೆಸ್ ಕಾಲೇಜಿನ ಪರೀಕ್ಷಾ ವಿವಾದಕ್ಕೆ ಸಂಬಂಧಿಸಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜ ಅವರು ಪೊಲೀಸರಿಗೆ ಹೇಳಿ ವಿದ್ಯಾರ್ಥಿ ಗಳಿಗೆ ಹೊಡೆಸಿದ್ದಾರೆ ಎಂದು ಹೇಳಿರುವ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಈ ಹೇಳಿಕೆಯನ್ನು ಪ್ರೂವ್ ಮಾಡಬೇಕು. ಇಲ್ಲವಾದರೆ ಕ್ಷಮೆ ಯಾಚಿಸಬೇಕು ಎಂದು ವಿಧಾನ ಪರಿಷತ್ ಶಾಸಕ ಐವನ್ ಡಿ ಸೋಜ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಜೀವಮಾನದಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ನನ್ನ ಮನಸ್ಸಿಗೆ ಇದರಿಂದ ತುಂಬಾ ನೋವಾಗಿದೆ. ನಾವು ಯಾವತ್ತೂ ವಿದ್ಯಾರ್ಥಿ ಪರವಾಗಿರುವವನು. ಬರುತ್ತೀರಾ ಕಾಮತರೇ ನೀವು …

ಪ್ರತಿಯೊಂದು ವಿಚಾರದಲ್ಲಿ ಸುಳ್ಳು ಹೇಳುವುದು, ಸುಳ್ಳು ವಿಚಾರಗಳನ್ನು ಮಾತನಾಡುವುದು, ಜನರನ್ನು ದಾರಿ ತಪ್ಪಿಸುವುದು ಶಾಸಕ ವೇದವ್ಯಾಸ ಕಾಮತ್ ಅವರ ಜಾಯಮಾನ ಎಂದು ನುಡಿದರು.

‘ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಕೆಲಸವನ್ನು ಶಾಸಕ ಕಾಮತರು ಮಾಡುತ್ತಿದ್ದಾರೆ. ಆಗ್ನೆಸ್ ಕಾಲೇಜಿನ ವಿಚಾರದಲ್ಲಿ ಅವರು ಮಾಡಿದ್ದು ಅಕ್ಷಮ್ಯ ಅಪರಾಧ. ಇದು ನಿಮ್ಮ ಕೆಲಸವಲ್ಲ. ನೀವು ಎಲ್ಲರನ್ನು ಒಂದೇ ರೀತಿ ನೋಡಬೇಕು ” ಎಂದರು.

ಕಾಲೇಜಿನ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುವುದು ತಪ್ಪು ಎಂದು ನಾನು ಹೇಳುವುದಿಲ್ಲ. ವಿದ್ಯಾರ್ಥಿಗಳು ತಮ್ಮ ಹಕ್ಕನ್ನು ಕೇಳಿದ್ದಾರೆ. ಅದನ್ನು ತೀರ್ಮಾನ ಮಾಡುವುದು ಆ ಕಾಲೇಜಿನ ಮ್ಯಾನೇಜ್ ಮೆಂಟ್ಗೆ ಬಿಟ್ಟ ವಿಚಾರ. ಯಾವುದೇ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮಾತನಾಡುವ ಹಕ್ಕು ಇಲ್ಲ ಎಂದು ನಾವು ಹೇಳಿಲ್ಲ ಎಂದರು.

ಶಾಸಕ ವೇದವ್ಯಾಸ ಕಾಮತ್ ಅವರು ಪೊಲೀಸ್ ಠಾಣೆಯಲ್ಲಿ ಕುಳಿತುಕೊಂಡು ವಿದ್ಯಾರ್ಥಿಗಳನ್ನು ಕಾಲೇಜಿನ ಮ್ಯಾನೇಜ್ ಮೆಂಟ್ ವಿರುದ್ಧ ಎತ್ತಿ ಕಟ್ಟಿದ್ದು, ವಿದ್ಯಾರ್ಥಿಗಳಿಗೆ ಪ್ರತಿಭಟನೆಗೆ ಪ್ರೋತ್ಸಾಹ ನೀಡಿ ಪರೀಕ್ಷೆ ನೀವು ಬರೆಯಬೇಡಿ, ನಾನು ಇದ್ದೇನೆ, ನಾನು ನೋಡಿಕೊಳ್ಳುತ್ತೇನೆ ಎಂದು ಯಾವ ಉದ್ದೇಶ ಕ್ಕಾಗಿ ಹೇಳಿದ್ದಾರೆ ಎಂದು ಪ್ರಶ್ನಿಸಿದರು.

ಒಂದು ವೇಳೆ ಶಾಸಕ ವೇದವ್ಯಾಸ ಕಾಮತ್ ಉದ್ದೇಶ ದಸರಾ ವೇಳೆ ಪರೀಕ್ಷೆ ನಡೆಸಲೇಬಾರದು ಎಂಬ ಧೋರಣೆ ಇದ್ದರೆ,ಇದೇ ವೇಳೆ ಮಂಗಳೂರಿನ ಉಳಿದ ಕಾಲೇಜುಗಳಲ್ಲಿ ನಡೆಯುತ್ತಿದ್ದ ಪರೀಕ್ಷೆಯ ಬಗ್ಗೆ ಯಾಕೆ ಪ್ರಶ್ನಿಸಿಲ್ಲ. ಆಗ್ನೆಸ್ ಕಾಲೇಜಿನ ಬಗ್ಗೆ ಮಾತ್ರ ಇಂತಹ ಗೊಂದಲ ಉಂಟು ಮಾಡಿದ್ದು ಯಾಕೆ ? ಎಂದು ಪ್ರಶ್ನೆ ಮಾಡಿದರು.


Spread the love
Subscribe
Notify of

0 Comments