ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು

ಅಪಘಾತ ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಗೆ ಗೆಲುವು ಮಸ್ಕತ್:ಒಮನ್ ರಾಜಧಾನಿ ಮಸ್ಕತ್ ಗೆ ಸಮೀಪದ ಸೂರ್ ಜಾಲಾನ್ ಎಂಬಲ್ಲಿಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಂಟ್ವಾಳದ ಮುಸ್ತಫಾ ಎಂಬ ಯುವಕನ ಕುಟುಂಬಕ್ಕೆ ಪರಿಹಾರಮೊತ್ತ ಬಿಡುಗಡೆಗೊಳಿಸುವಲ್ಲಿ ಕೊನೆಗೂ ಇಂಡಿಯನ್ ಸೋಶಿಯಲ್ ಫೋರಮ್ ಮಸ್ಕತ್ ಕರ್ನಾಟಕ ಚಾಪ್ಟರ್ ಯಶಸ್ವಿಯಾಗಿದೆ. ನಿರಂತರ ಎರಡು ವರ್ಷಗಳ ಕಾಲ ಇಂಡಿಯನ್ ಸೋಶಿಯಲ್ ಫೋರಮ್ನಡೆಸಿದ ಕಾನೂನು ಹೋರಾಟದ ಫಲವಾಗಿ ಅನಾಥವಾಗಿದ್ದ ಕುಟುಂಬಕ್ಕೆ ಪರಿಹಾರ ಮೊತ್ತವಾಗಿ25,16,866 ರೂಪಾಯಿಗಳ ಚೆಕ್ ಹಸ್ತಾಂತರವಾಗಿದೆ. 2017ರ ಆಗಸ್ಟ್ 31ರಂದು ಪರಿಹಾರ ಮೊತ್ತದಚೆಕ್ ಕೈ ಸೇರಿರುವುದಾಗಿ ಮೃತ ಮುಸ್ತಫಾರವರ ತಾಯಿ ಬೀಫಾತಿಮಾ ಅವರು ಇಂಡಿಯನ್ ಸೋಶಿಯಲ್ಫೋರಮ್ ನಿಯೋಗಕ್ಕೆ ಖಾತರಿಪಡಿಸಿದ್ದಾರೆ. ಮೃತ ಮುಹಮ್ಮದ್ ಮುಸ್ತಾಫ ಮೂವರು ಸಹೋದರಿ ಮತ್ತು ಅಸ್ವಸ್ಥೆ ತಾಯಿಯನ್ನು ಹೊಂದಿದ್ದರು. ತೀರಾಬಡ ಕುಟುಂಬದ ಏಕೈಕ ಆಸರೆಯಾಗಿದ್ದ ಮುಸ್ತಫಾ ಉದ್ಯೋಗಕ್ಕಾಗಿ ಒಮನ್ ನ ಮಸ್ಕತ್ ಗೆ ಬಂದಿದ್ದರು. 2015ರಲ್ಲಿ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಸರಕಾರಿರಜೆ ಇದ್ದರೂ ಇಂಡಿಯನ್ ಸೋಶಿಯಲ್ ಫೋರಮ್ ನ ಕ್ಷಿಪ್ರ ಕಾರ್ಯಾಚರ್ಣೆಯಿಂದಾಗಿ ಎರಡುದಿನಗಳೊಳಗಾಗಿ ಮೃತದೇಹವು ತವರೂರಾದ ಪರ್ಲಿಯಾಕ್ಕೆ ತಲುಪಿತ್ತು. ಮೃತರ ಪರಿಹಾರ ಮೊತ್ತಕ್ಕಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಇಂಡಿಯನ್ ಸೋಶಿಯಲ್ ಫೋರಮ್ನಿರಂತರವಾಗಿ ಅಧಿಕಾರಿಗಳನ್ನು, ರಾಯಭಾರಿ ಕಚೇರಿಯನ್ನು ಹಾಗೂ ವಿಮಾ ಕಂಪೆನಿಯ ವಕೀಲರನ್ನು  ಸಂಪರ್ಕಿಸಿ ಕಾನೂನು ಹೋರಾಟವನ್ನು ನಡೆಸಿತ್ತು. ಅದೇ ರೀತಿ ಊರಿನಿಂದಲೂ ಅದಕ್ಕೆ ಬೇಕಾದದಾಖಲೆಗಳನ್ನೂ ತರಿಸಿಕೊಂಡು ಪರಿಹಾರ ಮೊತ್ತ ಪಡೆಯುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿತ್ತು. ಇದೀಗಇಂಡಿಯನ್ ಸೋಶಿಯಲ್ ಫೋರಮ್ ನ ನಿರಂತರ ಪರಿಶ್ರಮಕ್ಕೆ ಜಯ ಸಿಕ್ಕಿದೆ. ಇಂಡಿಯನ್ ಸೋಶಿಯಲ್ ಫೋರಮ್ ನ ಕಾನೂನು ಹೋರಾಟದ ನಿಯೋಗದಲ್ಲಿ ನಝೀರ್ ಕೋಡಿಂಬಾಡಿ, ಅನ್ವರ್ ಮೂಡಬಿದ್ರೆ ಹಾಗೂ ಸಲಾಮ್ ತುಂಬೆ ಸಹಕರಿಸಿದ್ದರು.

ಉಳ್ಳಾಲ ಗಲಭೆ ಮೂವರ ಬಂಧನ; ಸೆಕ್ಷನ್ ಮುಂದುವರಿಕೆ

ಮಂಗಳೂರು: ಉಳ್ಳಾಲ ಕೊಲೆಯತ್ನ ಹಾಗೂ ಗಲಭೆಗೆ ಸಂಬಂಧಿಸಿ ಸಿಸಿಬಿ ಪೋಲಿಸ್ ವೆಲೆಂಟಿನ್ ಡಿ'ಸೋಜಾ ನೇತೃತ್ವದ ತಂಡ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಪೋಲಿಸ್ ಕಮೀಷನರ್ ಚಂದ್ರಶೇಖರ್...

ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನೊಂದಾವಣೆ ಅಭಿಯಾನ

ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನೊಂದಾವಣೆ ಅಭಿಯಾನ ಮಂಗಳೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಛತ್ರಪತಿ ಶಾಖೆ ಮರೋಳಿ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ಸಹಯೋಗದಲ್ಲಿ ಬಿಪಿಎಲ್ ಕುಟುಂಬಗಳಿಗೆ 25...

ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ

ಅನಂತ್ ಕುಮಾರ್ ನಿಧನ: ಜೆಡಿಎಸ್ ಸಂತಾಪ   ಕೇಂದ್ರದ ಸಚಿವರು ಹಾಗೂ ರಾಜ್ಯದ ಸಂಸದ್ ಸದಸ್ಯರು ಆದ ಶ್ರೀ ಅನಂತ್ ಕುಮಾರ್ ನಿಧನಕ್ಕೆ ಜೆಡಿಎಸ್ ಜಿಲ್ಲಾ ಜನತಾದಳವು ಸಂತಾಪವನ್ನು ವ್ಯಕ್ತಪಡಿಸಿದೆ. ಒಳ್ಳೆಯ ಸಜ್ಜನತೆಯ ಉತ್ತಮ ಸಂಸದೀಯ ಪಟುಗಳಾಗಿ...

ಜೂನ್14 ವಿಶ್ವ ರಕ್ತದಾನಿಗಳ ದಿನ – ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು

ಜೂನ್14 ವಿಶ್ವ ರಕ್ತದಾನಿಗಳ ದಿನ - ಅರ್ಥಪೂರ್ಣವಾಗಿಸಿದ ಮೊಗವೀರ್ಸ್ ಯು.ಎ.ಇ. ರಕ್ತದಾನಿಗಳು ಯು.ಎ.ಇ: ವಿಶ್ವಾದಾದ್ಯಂತ ಪ್ರತಿ ವರ್ಷ ಜೂನ್14ನೇ ತಾರೀಕಿನಂದು "ವಿಶ್ವ ರಕ್ತದಾನಿಗಳ ದಿನ" ಆಚರಿಸಲಾಗುತಿದೆ ಈ ಬಾರಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪವಿತ್ರ...

ಆಳ್ವಾಸ್‍ನಲ್ಲಿ ಸಾಮೂಹಿಕ ಯೋಗ

ಆಳ್ವಾಸ್‍ನಲ್ಲಿ ಸಾಮೂಹಿಕ ಯೋಗ ಮೂಡುಬಿದಿರೆ: ಪ್ರಕೃತಿ ಚಿಕಿತ್ಸಾ ಸಪ್ತಾಹದ ಅಂಗವಾಗಿ ಸಾಮೂಹಿಕ ಯೋಗಾಭ್ಯಾಸವನ್ನು ಗುರುವಾರ ಆಳ್ವಾಸ್ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಲಾಯಿತು. ...

ಪೊಲೀಸ್ ದೌರ್ಜನ್ಯ ಖಂಡಿಸಿ ಶನಿವಾರ ಕಡಬ ಬಂದ್

ಪೊಲೀಸ್ ದೌರ್ಜನ್ಯ ಖಂಡಿಸಿ ಶನಿವಾರ ಕಡಬ ಬಂದ್ ಮಂಗಳೂರು: ವಾಟ್ಸಾಪ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವ್ಯಕ್ತಿ ಪೋಲಿಸರಿಗೆ ಶರಣಾಗಿದ್ದರೂ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಪ್ರಕರಣದಲ್ಲಿ ಸಿಲುಕಿಸಿ ದಬ್ಬದಾಳಿಗೆ ನಡೆಸುತ್ತಿದ್ದು, ಇದರ ವಿರುದ್ದ ಅಕ್ಟೋಬರ್ 28...

ಬೆಂಗಳೂರಿನಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತಾಚರಣೆ

ಬೆಂಗಳೂರಿನಲ್ಲಿ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಚಾತುರ್ಮಾಸ್ಯ ವ್ರತಾಚರಣೆ ಬೆಂಗಳೂರು: ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ 42ನೇ ಚಾತುರ್ಮಾಸ್ಯ ವ್ರತಾಚರಣೆ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ 31ರಿಂದ ಆರಂಭಗೊಳ್ಳುವ ಶ್ರೀಗಳ ಚಾತುರ್ಮಾಸ್ಯ ವ್ರತ...

ಡಿಸೆಂಬರ್ 15ರೊಳಗೆ ಅನಿಲಭಾಗ್ಯ ವಿತರಣೆಗೆ ಕ್ರಮ- ಪ್ರಮೋದ್ ಮಧ್ವರಾಜ್

ಡಿಸೆಂಬರ್ 15ರೊಳಗೆ ಅನಿಲಭಾಗ್ಯ ವಿತರಣೆಗೆ ಕ್ರಮ- ಪ್ರಮೋದ್ ಮಧ್ವರಾಜ್ ಉಡುಪಿ: ರಾಜ್ಯ ಸರ್ಕಾರದ ಜನಪರ ಯೋಜನೆ ‘ಮುಖ್ಯಮಂತ್ರಿ ಅನಿಲಭಾಗ್ಯ’ವನ್ನು ಅರ್ಹರಿಗೆ ಒದಗಿಸುವ ನಿಟ್ಟಿನಲ್ಲಿ ಫಲಾನುಭವಿಗಳ ಪಟ್ಟಿಯನ್ನು ನವೆಂಬರ್ 20ರೊಳಗೆ ಅಂತಿಮಪಡಿಸಿ ಒದಗಿಸಲು ಮೀನುಗಾರಿಕೆ, ಯುವಜನ...

ಮಿತ್ತೂರಿನಲ್ಲಿ ಬ್ಯಾರಿ ಸಾಹಿತ್ಯ ಸಾಹಿತ್ಯ ಕಮ್ಮಟ

ಮಿತ್ತೂರಿನಲ್ಲಿ ಬ್ಯಾರಿ ಸಾಹಿತ್ಯ ಸಾಹಿತ್ಯ ಕಮ್ಮಟ ಬಂಟ್ವಾಳ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಾಣಿ ದಾರುಲï ಇರ್ಶಾದ್ ಎಜುಕೇಶನ್ ಸೆಂಟರ್ ಸಹಯೋಗದಲ್ಲಿ ಬ್ಯಾರಿ ಸಾಹಿತ್ಯ ಕಮ್ಮಟ ಮತ್ತು ಬ್ಯಾರಿ ಪ್ರತಿಭಾ ಸ್ಪರ್ಧೆ ಮಿತ್ತೂರಿನ...

Members Login

Obituary

Congratulations