ಮಂಗಳೂರು ಮಹಾನಗರಪಾಲಿಕೆ: ಹೆಣ್ಣು ಮಕ್ಕಳ ಸ್ವಯಂಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ 2026-27 ನೇ ಸಾಲಿನ ಆಯ-ವ್ಯಯದಲ್ಲಿ “ಆಸರೆ- ಹೆಣ್ಣು ಮಕ್ಕಳ ಭರವಸೆಯ ಮಡಿಲು” ಶೀರ್ಷಿಕೆಯಡಿ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 14 ವರ್ಷದೊಳಗಿನ ವಿವಿಧ ರೀತಿಯ ದೌರ್ಜನ್ಯ ಮತ್ತು ಶೋಷಣೆಗೆ ಒಳಗಾದ, ತಂದೆ-ತಾಯಿ ಮತ್ತು ಸಂಬಂಧಿಕರನ್ನು ಕಳೆದುಕೊಂಡು ಅನಾಥರಾಗಿರುವ, ರಸ್ತೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿಕೊಂಡಿರುವ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಪೆÇೀಷಣೆ, ರಕ್ಷಣೆಗೆ ದುಡಿಯುವ ಸಂಸ್ಥೆಗಳಿಗೆ ತಲಾ ರೂ. 15 ಲಕ್ಷಗಳಂತೆ ಒಟ್ಟು ರೂ. 30 ಲಕ್ಷಗಳ ಪೆÇ್ರೀತ್ಸಾಹಧನವನ್ನು ನೀಡಲು ಅನುದಾನ ಕಾದಿರಿಸಿದೆ.
ಆದ್ದರಿಂದ, ಈ ಕಾರ್ಯದಲ್ಲಿ ನಿರತವಾಗಿರುವ ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು ಭಾವಚಿತ್ರಗಳನ್ನೊಳಗೊಂಡ ವಿವರವಾದ ವರದಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ನವೆಂಬರ್ 12 ರೊಳಗಾಗಿ ಮಂಗಳೂರು ಮಹಾನಗರಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶಕ್ಕೆ ಅರ್ಜಿ ಸಲ್ಲಿಸುವಂತೆ ಮಹಾನಗರಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













