Spread the love
ಮಂಗಳೂರು: ಕಂಟೈನರ್ ಡಿಕ್ಕಿ, ಸ್ಕೂಟರ್ ಸವಾರ ಸ್ಥಳದಲ್ಲೇ ಮೃತ್ಯು
ಮಂಗಳೂರು: ಬಂಗ್ರ ಕೂಳೂರು ವಿ ಆರ್ ಎಲ್ ಮುಂಭಾಗ ಸ್ಕೂಟರ್ ಗೆ ಹಿಂಭಾಗದಿಂದ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆ ಬಿದ್ದಿದ್ದು ಈ ವೇಳೆ ಲಾರಿ ಚಕ್ರ ಸವಾರನ ಮೇಲೆಯೇ ಚಳಿಸಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪರುವ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಸದಾನಂದ ಶೆಟ್ಟಿಗಾರ್ ಎಂದು ಗುರುತಿಸಲಾಗಿದೆ.
ಸದಾನಂದ ಅವರು ತಮ್ಮ ಇವಿ ಸ್ಕೂಟರ್ ನಲ್ಲಿ ಕೂಳೂರಿನಲ್ಲಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ.
ಪಣಂಬೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Spread the love













