ಅತ್ತೂರು ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವದ ನೊವೆನಾ ಪ್ರಾರ್ಥನೆಗೆ ಚಾಲನೆ

Spread the love

ಅತ್ತೂರು ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವದ ನೊವೆನಾ ಪ್ರಾರ್ಥನೆಗೆ ಚಾಲನೆ

ಕಾರ್ಕಳ: ಸಂತ ಸೆಬಾಸ್ಟಿಯನ್ ಹಬ್ಬದ ಅಂಗವಾಗಿ ಹಾಗೂ ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವ–2026ರ ಪೂರ್ವಭಾವಿಯಾಗಿ ಅತ್ತೂರು ಸಂತ ಲೋರೆನ್ಸರ ಬಸಿಲಿಕೆಯಲ್ಲಿ ನವದಿನಗಳ ಪ್ರಾರ್ಥನಾ ಮಹೋತ್ಸವಕ್ಕೆ ಭಕ್ತಿಪೂರ್ವಕವಾಗಿ ಚಾಲನೆ ನೀಡಲಾಯಿತು.

ಉಡುಪಿ ಧರ್ಮಪ್ರಾಂತ್ಯದ ಐಸಿವೈಎಂ–ವೈಸಿಎಸ್ ಯುವ ನಿರ್ದೇಶಕರಾದ ವಂದನೀಯ ಸ್ಟೀವನ್ ಫರ್ನಾಂಡಿಸ್ ಅವರು ದೀಪ ಬೆಳಗಿಸುವ ಮೂಲಕ ನವದಿನಗಳ ಪ್ರಾರ್ಥನಾ ಮಹೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಮೂಲಕ ಸಂತ ಲೋರೆನ್ಸರ ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆಯಲಿರುವ ಪೂಜಾ–ಪ್ರಾರ್ಥನಾ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ಆರಂಭಗೊಂಡವು.

ಕಾರ್ಯಕ್ರಮದಲ್ಲಿ ಸಂತ ಲೋರೆನ್ಸರ ಪುಣ್ಯಕ್ಷೇತ್ರದ ಅನೇಕ ಭಕ್ತಾಧಿಗಳು ಭಾಗವಹಿಸಿ ಪ್ರಾರ್ಥನೆಯಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಅತ್ತೂರು ಸಂತ ಲೋರೆನ್ಸರ ಪುಣ್ಯಕ್ಷೇತ್ರದ ನಿರ್ದೇಶಕರಾದ ರೆವ. ಫಾದರ್ ಆಲ್ಬನ್ ಡಿಸೋಜಾ, ಸಹಾಯಕ ಧರ್ಮಗುರು ವಂದನೀಯ ಫಾದರ್ ರಾಬಿನ್ ಸಾಂತ್ಮಯೆರ್, ಉಪಾಧ್ಯಕ್ಷ ಸಂತೋಷ್ ಡಿಸಿಲ್ವಾ, ಕಾರ್ಯದರ್ಶಿ ರೊನಾಲ್ಡ್ ನೊರೊನ್ನಾ, ನೂತನ ಉಪಾಧ್ಯಕ್ಷ ವಂದೀಶ್ ಮತ್ತಾಯಸ್ ಹಾಗೂ ನೂತನ ಕಾರ್ಯದರ್ಶಿ ಮೆಲ್ವಿನ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು.

ಸಂತ ಲೋರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2026 ಜನವರಿ 25, 26, 27, 28 ಹಾಗೂ 29ರಂದು ಜರಗಲಿರುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಕೊಂಕಣಿ ಭಾಷೆಯಲ್ಲಿ 36 ಹಾಗೂ ಕನ್ನಡ ಭಾಷೆಯಲ್ಲಿ 9 ಹೀಗೆ ಒಟ್ಟು 45 ದಿವ್ಯ ಪೂಜೆಗಳನ್ನು ಅರ್ಪಿಸಲಾಗುವುದು. ವಾರ್ಷಿಕ ಮಹೋತ್ಸವದ ದಿನಗಳಲ್ಲಿ ಉಡುಪಿ, ಮಂಗಳೂರು, ಕಾರವಾರ, ಅಲಹಾಬಾದ್, ಅಜೀರ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಮತ್ತು ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರು ಇಲ್ಲಿಗೆ ಆಗಮಿಸಿ ದಿವ್ಯ ಪೂಜೆಯನ್ನು ಅರ್ಪಿಸುವರು.


Spread the love
Subscribe
Notify of

0 Comments
Inline Feedbacks
View all comments