ಪಿಎಸ್ಐ ವೈಲೆಟ್ ಫೆಮಿನಾ ಅವರಿಗೆ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ

Spread the love

ಪಿಎಸ್ಐ ವೈಲೆಟ್ ಫೆಮಿನಾ ಅವರಿಗೆ ರಾಷ್ಟ್ರಪತಿಗಳ ವಿಶೇಷ ಸೇವಾ ಪದಕ

ಉಡುಪಿ: ಮಲ್ಪೆ ಕರಾವಳಿ ಕಾವಲು ಪೊಲೀಸ್ ಇಲ್ಲಿನ ಪಿಎಸ್ ಐ ವೈಲೆಟ್ ಫೆಮಿನಾ ಅವರಿಗೆ ಗಣರಾಜ್ಯೋತ್ಸವದ ಪ್ರಯುಕ್ತ ನೀಡಲಾಗುವ ರಾಷ್ಟ್ರಪತಿಗಳ 2025 ನೇ ಸಾಲಿನ ವಿಶೇಷ ಸೇವಾ ಪದಕ ಲಭಿಸಿದೆ.

ಪ್ರಸ್ತುತ ಅವರು ಕರ್ನಾಟಕ ರಾಜ್ಯ ಸರಕಾರ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನೇಮಕ ಮಾಡಿರುವ ಎಸ್ ಐ ಟಿ ತಂಡದಲ್ಲಿ ಸಲ್ಲಿಸುತ್ತಿದ್ದಾರೆ.

ವೈಲೆಟ್ ಫೆಮೀನಾ ಅವರು ಉಡುಪಿ, ಮಣಿಪಾಲ, ಕುಂದಾಪುರ, ಕಾರ್ಕಳ, ಹೊನ್ನಾವರಗಳಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಸೇವೆಸಲ್ಲಿಸಿದ್ದಾರೆ.

ಅಲ್ಲದೆ ರಾಜ್ಯದಲ್ಲಿ ಸುದ್ದಿ ಮಾಡಿದ್ದ ಪ್ರಜ್ವಲ್ ರೇವಣ್ಣ ಪ್ರಕರಣದ ಎಸ್ ಐ ಟಿ ತಂಡದಲ್ಲಿ ಕೂಡ ಕರ್ತವ್ಯ ನಿರ್ವಹಿಸಿದ್ದರು


Spread the love
Subscribe
Notify of

0 Comments
Inline Feedbacks
View all comments