ಮೀನುಗಾರಿಕಾ ದೋಣಿಗಳಿಗೆ ಅಗತ್ಯ ಪ್ರಮಾಣದ ಡಿಸೇಲ್ ಪೂರೈಕೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ಮೀನುಗಾರಿಕೆ ಸಚಿವರಿಗೆ ಮನವಿ 

Spread the love

ಮೀನುಗಾರಿಕಾ ದೋಣಿಗಳಿಗೆ ಅಗತ್ಯ ಪ್ರಮಾಣದ ಡಿಸೇಲ್ ಪೂರೈಕೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ಮೀನುಗಾರಿಕೆ ಸಚಿವರಿಗೆ ಮನವಿ 

ಉಡುಪಿ: ಮೀನುಗಾರಿಕಾ ದೋಣಿಗಳಿಗೆ ಅಗತ್ಯ ಪ್ರಮಾಣದ ಡಿಸೇಲ್ ಪೂರೈಕೆಗೆ ವಿಶೇಷ ಕ್ರಮ ವಹಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕ್ಯಾಪ್ಟನ್ ಬ್ರಿಜೇಶ್ ಚೌಟ ನೇತೃತ್ವದಲ್ಲಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಕೇಂದ್ರ ಪೆಟ್ರೋಲಿಯಂ ಸಚಿವರಾದ ಹರ್ದೀಪ್ ಸಿಂಗ್ ಪುರಿ ಹಾಗೂ ಮೀನುಗಾರಿಕೆ ಸಚಿವರಾದ ರಾಜೀವ್ ರಂಜನ್ ಸಿಂಗ್ ರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಲಾಯಿತು.

ಕರಾವಳಿ ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆಗೆ ಕಳೆದ ಕೆಲವು ದಿನಗಳಿಂದ ಮಧ್ಯ ಪ್ರಾಚ್ಯ ದೇಶಗಳ ಯುದ್ಧದ ಪರಿಣಾಮದಿಂದ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯಗೊಂಡು ಮೀನುಗಾರಿಕಾ ಬೋಟ್ ಗಳಿಗೆ ಡೀಸೆಲ್ ಕೊರತೆಯಿಂದ ಬಹುತೇಕ ಮೀನುಗಾರಿಕೆ ಚಟುವಟಿಕೆ ಸ್ತಬ್ಧಗೊಂಡಿದೆ.

ಡಿಸೇಲ್ ಕೊರತೆಯಿಂದ ಮೀನುಗಾರಿಕೆ ಚಟುವಟಿಕೆ ಸ್ತಬ್ಧಗೊಂಡಲ್ಲಿ ಮೀನುಗಾರರು ಸಹಿತ ಮೀನುಗಾರಿಕೆಯನ್ನೇ ಪರೋಕ್ಷವಾಗಿ ಅವಲಂಬಿಸಿರುವ ಲಕ್ಷಾಂತರ ಮಂದಿಯ ಜನಜೀವನಕ್ಕೆ ಸಮಸ್ಯೆಯಾಗಲಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವರು ದೇಶದ ಡೀಸೆಲ್ ದಾಸ್ತಾನು ಪ್ರಮಾಣಕ್ಕೆ ಅನುಗುಣವಾಗಿ ಮೀನುಗಾರಿಕಾ ವಲಯಕ್ಕೆ ಅಗತ್ಯ ಪ್ರಮಾಣದ ನಿರಂತರ ಡಿಸೇಲ್ ಪೂರೈಕೆಗೆ ವಿಶೇಷ ಆದ್ಯತೆ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಪೆ ಯಾರ್ಡ್ ಸಹಕಾರಿ ಸಂಘದ ಉಪಾಧ್ಯಕ್ಷರಾದ ಶಿವಪ್ರಸಾದ್ ಕೋಟ್ಯಾನ್ ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments