ಹಿರಿಯಡ್ಕದಲ್ಲಿ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ ಲೋಕಾರ್ಪಣೆ
ಉಡುಪಿ: ಹಿರಿಯಡ್ಕದಲ್ಲಿ ಸುಮಾರು 5 ಎಕರೆ ವಿಶಾಲ ಪ್ರದೇಶದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಉಡುಪಿ ಶ್ಯಾಮಿಲಿ ಸಮೂಹ ಸಂಸ್ಥೆಗಳ ಸಹಸಂಸ್ಥೆ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ ಮಂಗಳವಾರ ಲೋಕಾರ್ಪಣೆಗೊಂಡಿತು.

ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಜಿ. ಶಂಕರ್ ಕುಟುಂಬಸ್ಥರು ಹಾಗೂ ಗಣ್ಯರ ಸಮ್ಮುಖದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ನ ಶಾನ್ವಿಕ ಕನ್ವೆನ್ಷನ್ ಸೆಂಟರ್, ಶನಾಯ ಗ್ರ್ಯಾಂಡ್ ಡೈನಿಂಗ್ ಹಾಲ್, ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್, ಸ್ಪ್ರಿಂಗ್ಸ್ ಪ್ರೀಮಿಯಂ ರೂಮ್ಸ್ಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶಾಸಕ ಯಶಪಾಲ್ ಎ.ಸುವರ್ಣ, ಶಾಲಿನಿ ಜಿ. ಶಂಕರ್, ಶ್ಯಾಮಿಲಿ ನವೀನ್, ನವೀನ್, ಎಸ್.ಕೆ.ಆನಂದ್, ಶಿವ ಎಸ್. ಕರ್ಕೇರ, ಜಗದೀಶ್ ಕಾಂಚನ್, ಗುರುಪ್ರಸಾದ್, ರಾಘವೇಂದ್ರ ಉಪಾಧ್ಯಾಯ, ನಿತಿನ್, ವಿಕಾಸ್, ಶನಾಯ, ಶಾನ್ವಿಕ, ಜ್ಯೋತಿಷ್ಯ ವಿದ್ವಾನ್ ಕಬ್ಯಾಡಿ ಜಯರಾಮ ಆಚಾರ್ಯ, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಉಪಸ್ಥಿತರಿದ್ದರು.

ವೈಶಿಷ್ಟ್ಯತೆಗಳು: ಅತ್ಯಾಧುನಿಕ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಗೂ ಸಂಪೂರ್ಣ ಹವಾನಿಯಂತ್ರಿತ ಶ್ಯಾಮಿಲಿ ಸ್ಪ್ರಿಂಗ್ಸ್ ಲಕ್ಸುರಿ ರೆಸಾರ್ಟ್ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಕನ್ವೆನ್ಷನ್ ಸೆಂಟರ್ಯನ್ನು ಜನ ಸಾಮಾನ್ಯ ರಿಗೂ ಕೈಗೆಟುಕುವ ದರದಲ್ಲಿ ಲಭ್ಯವಾಗಬೇಕೆನ್ನುವ ನಿಟ್ಟಿನಲ್ಲಿ ನಿರ್ಮಿಸಲಾಗಿದೆ ಎಂದು ಜಿ.ಶಂಕರ್ ತಿಳಿಸಿದರು.
ಮದುವೆ, ಸೀಮಂತ, ಸಭೆ, ಸಮಾರಂಭ, ಕಾರ್ಪೋರೇಟ್ ವಲಯದ ಬೋರ್ಡ್ ರೂಮ್, ಪಾರ್ಟಿಗೂ ಅನುಕೂಲ ವಾಗುವ ನಿಟ್ಟಿನಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ. ವಿಶಾಲ ಭೂ ಪ್ರದೇಶದಲ್ಲಿ ಪಾರ್ಕಿಂಗ್, ಮಕ್ಕಳ ಆಟದ ಮೈದಾನ, ತೆರೆದ ಸಭಾಂಗಣಗಳನ್ನು ಹೊಂದಿದೆ.

ಸಂಪೂರ್ಣ ಹವಾನಿಯಂತ್ರಿತ 1000 ಮಂದಿ ಆಸೀನರಾಗುವುದಕ್ಕೆ ಬೇಕಾದ ವ್ಯವಸ್ಥೆವುಳ್ಳ ಶಾನ್ವಿಕ ಕನ್ವೆನ್ಷನ್ ಸೆಂಟರ್, ಊಟಕ್ಕೆ ಪ್ರತ್ಯೇಕವಾಗಿರುವ ಶನಾಯ ಗ್ರ್ಯಾಂಡ್ ಹಾಲ್ಗಳಿವೆ. ವೆಜ್ ಹಾಗೂ ನಾನ್ವೆಜ್ಗೆ ಪ್ರತ್ಯೇಕ ಅಡುಗೆ ಕೋಣೆಯ ವ್ಯವಸ್ಥೆ ಇದೆ. ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಶ್ರೀಪ್ರಸನ್ನ ಗಣಪತಿ ಮಂದಿರವನ್ನು ನಿರ್ಮಿಸಲಾಗಿದೆ. ಅದೇ ರೀತಿ ಆಕರ್ಷಣೀಯವಾಗಿರುವ ಹಚ್ಚಹಸುರಿನ ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್ ಕೂಡ ಇದೆ ಎಂದರು.
ಶ್ಯಾಮಿಲಿ ಸ್ಪ್ರಿಂಗ್ಸ್ನಲ್ಲಿ 28 ಎಸಿ ಡಿಲೆಕ್ಸ್ ರೂಮ್, 2 ಪ್ರತ್ಯೇಕ ವಿಲ್ಲಾಗಳನ್ನು ನಿರ್ಮಿಸಲಾಗಿದೆ. 300ಕ್ಕೂ ಅಧಿಕ ಕಾರುಗಳು/ದ್ವಿಚಕ್ರ ವಾಹನಗಳಿಗೆ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಸ್ವಿಮ್ಮಿಂಗ್ ಪೂಲ್, ರಿಕ್ರಿಯೇಶನ್ ಕ್ಲಬ್, ಜಿಮ್ ಮತುತಿ ಮಕ್ಕಳ ಆಟದ ಮೈದಾನ ಇದೆ. ಕಾರ್ಪೋರೇಟ್ ಸಂಸ್ಥೆಯ ಸಭೆ, ಸಮಾರಂಭಗಳಿಗೆ ಅನುಕೂಲ ವಾಗುವಂತಹ ಬೋರ್ಡ್ ರೂಮ್/ಕಾನರೆನ್ಸ್ ಹಾಲ್ಗಳಿವೆ. ಈಗಾಗಲೇ ಬುಕ್ಕಿಂಗ್ ಆರಂಭ ಗೊಂಡಿದ್ದು, ಮೊ-9448930820 ಸಂಪರ್ಕಿಸಬಹುದು. ಆನ್ಲೈನ್ ಬುಕ್ಕಿಂಗ್ಗೂ ಅವಕಾಶ ಕಲ್ಪಿಸಲಾಗಿದೆ ಎಂದು ಡಾ.ಜಿ. ಶಂಕರ್ ತಿಳಿಸಿದರು.
ಮೊದಲ 25 ಜೋಡಿಗಳಿಗೆ ಉಡುಗೊರೆ
ಶ್ಯಾಮಿಲಿ ಸ್ಪ್ರಿಂಗ್ಸ್ನಲ್ಲಿ ಮದುವೆಗೆ ಈಗಾಗಲೇ ಬುಕ್ಕಿಂಗ್ ಆರಂಭ ಗೊಂಡಿದ್ದು, ಉದ್ಘಾಟನಾ ಸಮಾರಂಭದ ಪ್ರಯುಕ್ತ ನಮ್ಮಲ್ಲಿ ನಡೆಯುವ ಮೊದಲ 25 ಜೋಡಿಗಳಿಗೆ ವಿಶೇಷ ಗಿಫ್ಟ್ಯನ್ನು ನೀಡಲಾಗುವುದೆಂದು ಜಿ.ಶಂಕರ್ ತಿಳಿಸಿದರು.
ಶ್ಯಾಮಿಲಿ ಸ್ಪ್ರಿಂಗ್ಸ್ನಿಂದ ಬರುವ ಆದಾಯದ ಒಂದು ಅಂಶವನ್ನು ಸಮಾಜಮುಖಿ ಕೆಲಸಕ್ಕೆ ಬಳಸಿಕೊಳ್ಳಲಾಗು ವುದು. ಈ ಭಾಗದ ಅರ್ಹರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಹೇಳಿದರು.












