ಉಡುಪಿ ಜಿಲ್ಲೆಯನ್ನು ನಾಲೆಡ್ಜ್ ಹಬ್ ಆಗಿ ಪರಿವರ್ತನೆ ಮಾಡಬೇಕು : ಕೆ ಅಣ್ಣಾಮಲೈ

Spread the love

ಉಡುಪಿ ಜಿಲ್ಲೆಯನ್ನು ನಾಲೆಡ್ಜ್ ಹಬ್ ಆಗಿ ಪರಿವರ್ತನೆ ಮಾಡಬೇಕು : ಕೆ ಅಣ್ಣಾಮಲೈ

ಉಡುಪಿ : ಕರ್ನಾಟಕವು ಕೇವಲ ಬೆಂಗಳೂರನ್ನಷ್ಟೇ ಅವಲಂಬಿಸದೆ, ಉಡುಪಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳನ್ನು ಒಟ್ಟಿಗೆ ಬೆಳೆಸಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅಭಿಪ್ರಾಯಪಟ್ಟರು.

ಉಡುಪಿಯ ಪುರಭವನದಲ್ಲಿ ಶನಿವಾರ ನಡೆದ ಸಂವಾದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು ಉಡುಪಿ ಜಿಲ್ಲೆಯ ಜನ ಶಿಕ್ಷಿತರು, ಸುಸಂಸ್ಕೃತರು, ಪ್ರಾಮಾಣಿಕರು. ಆದರೆ ಇಲ್ಲಿಗೆ ಯಾವುದೇ ದೊಡ್ಡ ಕಂಪೆನಿಗಳು ಬರುತ್ತಿಲ್ಲ. ಜನಪ್ರತಿನಿಧಿಗಳು ಈ ಬಗ್ಗೆ ಇನ್ನಷ್ಟು ಶ್ರಮ ಹಾಕಿ ಉಡುಪಿ ಜಿಲ್ಲೆಯಲ್ಲಿ ನಾಲೆಡ್ಜ್ ಹಬ್ ಆಗಿ ಪರಿವರ್ತನೆ ಮಾಡಬೇಕು ಎಂದು ಅಭಿಪ್ರಾಯ ಪಟ್ಟರು.

ದೇಶದಲ್ಲಿರುವ ಎಲ್ಲಾ ನಗರಪಾಲಿಕೆಗಳು ಮತ್ತು ಕಾರ್ಪೊರೇಷನ್ಗಳು ಕಳಪೆ ನಿರ್ವಹಣೆಯಿಂದ ಕೂಡಿವೆ ಹಾಗೂ ನೈರ್ಮಲ್ಯವನ್ನು ಕಾಪಾಡಲು ಸಹ ಹಣವಿಲ್ಲದಂತಹ ಅವ್ಯವಸ್ಥೆಯಲ್ಲಿವೆ. ರಾಜಕೀಯವು ಕೇವಲ ಉಚಿತ ಕೊಡುಗೆಗಳ ಘೋಷಣೆಗಳ ಪೈಪೋಟಿಯಾಗಬಾರದು. ಬದಲಿಗೆ ಹೆಚ್ಚು ಜವಾಬ್ದಾರಿಯಿಂದ ಕೂಡಿರಬೇಕು.

ಪಕ್ಷದ ಕಾರ್ಯಕರ್ತರು ‘ಮುಖ್ಯಮಂತ್ರಿ ಬರುತ್ತಿದ್ದಾರೆ’ ಎಂಬ ಪೋಸ್ಟರ್ ಗಳನ್ನು ಹಾಕುವುದನ್ನು ಬಿಟ್ಟು, ತಮ್ಮ ಸರ್ಕಾರವು ಆ ವಾರ್ಡ್ಗೆ ಅಥವಾ ಊರಿಗೆ ಏನು ಅಭಿವೃದ್ಧಿ ಮಾಡಿದೆ ಎಂಬುದನ್ನು ತೋರಿಸುವ ಸ್ಪರ್ಧಾತ್ಮಕ ರಾಜಕೀಯ ಸಂಸ್ಕೃತಿ ಬರಬೇಕು ಮುಖ್ಯಮಂತ್ರಿ ಅಥವಾ ಶಾಸಕರಾಗುವ ಬದಲು, ಮೊದಲು ಸ್ಥಳೀಯ ಸಂಸ್ಥೆಗಳಿಗೆ ಅರ್ಹ ನಾಯಕರನ್ನು ನಾವು ಕಳುಹಿಸಬೇಕು. ಅಲ್ಲಿ ಅವರಿಗೆ ಪ್ರದೇಶದ ಸುರಕ್ಷತೆ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವಿರಬೇಕು.

ಯುಪಿಐ ವ್ಯಾಪಾರಿ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕದ ಬಗ್ಗೆ ಸರಕಾರ ನಿರ್ಧಾರ ತೆಗೆದುಕೊಳ್ಳುವಾಗ ಸಮಾತೋಲನ ಕಾಪಾಡಬೇಕಾಗಿತ್ತು. 50ಲಕ್ಷ ಕೋಟಿ ಬಜೆಟ್ ಮಂಡಿಸುವ ಕೇಂದ್ರ ಸರಕಾರಕ್ಕೆ ಎಂಡಿಆರ್ ಶುಲ್ಕದ ಮೂಲಕ ಬರುವ 15ಸಾವಿರ ಕೋಟಿ ರೂ. ದೊಡ್ಡ ವಿಷಯ ಅಲ್ಲ. ಹಾಗಾಗಿ ಕೇಂದ್ರ ಸರಕಾರ ಕಾರ್ಪೊರೇಟ್ ಕಂಪೆನಿಗಳಿಗೆ ತೆರಿಗೆ ವಿನಾಯಿತಿ ನೀಡುವ ರೀತಿಯಲ್ಲಿಯೇ ಚಿಲ್ಲರೆ ವ್ಯಾಪಾರಿಗಳಿಗೂ ಇದರಿಂದ ವಿನಾಯಿತಿ ನೀಡಬೇಕು ಎಂದು ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸರಕಾರ ಎಲ್ಲರಿಗೂ ತೃಪ್ತಿಯಾ ಗುವ ರೀತಿ ಯೋಜನೆ ತರಲು ಆಗುವುದಿಲ್ಲ. ಕೆಲವೊಮ್ಮೆ ಸರಕಾರ ನಿರ್ಧಾರ ಕೂಡ ತಪ್ಪು ಇರುತ್ತದೆ. ನಾವು ಯಾವುದೇ ಪಕ್ಷದಲ್ಲಿ ಇರಬಹುದು. ಆದರೆ ಸರಕಾರದ ಯೋಜನೆ ಯಿಂದ ನಮಗೆ ತೊಂದರೆ ಆಗುವುದಾದರೆ ನಾವು ಅದನ್ನು ವಿರೋಧ ಮಾಡಬೇಕು. ಇದು ಒಳ್ಳೆಯ ಪ್ರಜಾಪ್ರಭುತ್ವದ ಲಕ್ಷಣವಾಗಿದೆ. ಮತ ಹಾಕುವಾಗ ನಾವು ಎಲ್ಲ ರೀತಿಯಲ್ಲೂ ಯೋಚನೆ ಮಾಡುತ್ತೇವೆ. ಅದೇ ರೀತಿ ನಾವು ಸರಕಾರದ ಯೋಜನೆಯಿಂದ ನಮಗೆ ಸಮಸ್ಯೆ ಆಗುವುದಾದರೆ ನಾವೆಲ್ಲ ಪಕ್ಷ ಬಿಟ್ಟು ಒಂದಾಗಬೇಕು ಎಂದರು.

ನಮ್ಮ ದೇಶದಲ್ಲಿ ಇಂದು ಪ್ರತಿದಿನ ಚಿಲ್ಲರೆ ವ್ಯಾಪಾರ ಎಂಬುದು ನೆಲಕಚ್ಚುತ್ತಿವೆ. ಸರಕಾರ ಇದನ್ನು ಬಹಳ ಗಂಭೀರ ವಾಗಿ ಪರಿಗಣಿಸಬೇಕು. ಬಂಡವಾಳಶಾಹಿ ಕಂಪೆನಿಗಳಲ್ಲಿ ಶೇ.50ಕ್ಕಿಂತ ಅಧಿಕ ವಿದೇಶಿ ಹೂಡಿಕೆ ಇದೆ. ಇದು ಅಪಾಯಕಾರಿ ಹೂಡಿಕೆ ಆಗಿದೆ. ನಮ್ಮ ನೆಲದ ಕಂಪೆನಿಗಳು ಇಲ್ಲದ ಕಾರಣ ವಿದೇಶಿ ಕಂಪೆನಿಗಳು ನಮ್ಮ ಕಡೆ ಬರುತ್ತಿದೆ. ಇದು ಮುಂದೆ ದೇಶದ ಭದ್ರತೆಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ ಎಂದು ಅವರು ತಿಳಿಸಿದರು.

‘ಪ್ರಧಾನಿ ಮೆಕ್ ಇನ್ ಇಂಡಿಯಾ ಘೋಷಣೆ ಮಾಡಿ ಆರು ವರ್ಷ ಗಳಾಯಿತು. ಇನ್ನು ಮೆಕ್ ಫಾರ್ ಇಡಿಯಾ ಘೋಷಣೆ ಮಾಡಬೇಕು. ಚೀನಾ ಅದನ್ನೇ ಮಾಡಿ ಆರ್ಥಿಕವಾಗಿ ಬೆಳೆದುನಿಂತಿದೆ. ಹಾಗಾಗಿ ಅವರು ಯಾರ ಕೈಗೂ ಸಿಗುತ್ತಿಲ್ಲ. ಅಮೆರಿಕಾಕ್ಕೂ ಹೆದರುವುದಿಲ್ಲ. ಸ್ಥಳೀಯವಾಗಿ ನಾವು ಉತ್ಪಾದನೆ ಮಾಡಬೇಕು. ಈ ಬಗ್ಗೆ ಜನ ಸಮುದಾಯ ಚರ್ಚೆ ಆರಂಭಿಸಬೇಕು. ಆಗ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳುತ್ತದೆ’ ಎಂದರು.

ಚಿಲ್ಲರೆ ವ್ಯಾಪಾರಿಗಳಿಂದ ಸ್ಥಳೀಯವಾಗಿ ಉದ್ಯೋಗ ಸಿಗುತ್ತದೆ. ಇದರಿಂದ ಸಾಮಾಜಿಕ ರಚನೆ ಉತ್ತಮವಾಗಿ ರುತ್ತದೆ. ಈ ಮೂಲಕ ಸ್ಥಳೀಯ ಪ್ರದೇಶಗಳು ಆರ್ಥಿಕ ಪ್ರಗತಿ ಹೊಂದಲು ಅನುಕೂಲವಾಗುತ್ತದೆ. ಈ ದೇಶದಲ್ಲಿ ಎಲ್ಲವೂ ಹಣ, ತೆರಿಗೆ ಅಲ್ಲ, ಜನರ ಬದುಕು ಕೂಡ ಮುಖ್ಯ. ಅದರ ಬಗ್ಗೆಯೂ ಸರಕಾರ ಗಮನಹರಿಸಬೇಕು ಎಂದು ಹೇಳಿದರು.

ಚಿಲ್ಲರೆ ವ್ಯಾಪಾರದಿಂದ ಸ್ಥಳೀಯ ಆರ್ಥಿಕತೆಗೆ ಪ್ರೋತ್ಸಾಹ ದೊರೆತರೆ, ಬಂಡವಾಳಶಾಹಿ ಕಂಪೆನಿಗಳ ಹಣ ನೇರ ವಾಗಿ ವಿದೇಶಕ್ಕೆ ಹೋಗುತ್ತದೆ. ಇದರಿಂದ ಸ್ಥಳೀಯ ಆರ್ಥಿಕತೆಗೆ ಯಾವುದೇ ಪ್ರಯೋಜನ ಇಲ್ಲ. ಇದು ಭವಿಷ್ಯದ ಅಪಾಯ. ಆದುದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ಪ್ರೋತ್ಸಾಹ ನೀಡಬೇಕು. ವಿತ್ತ ಸಚಿವರು, ವಾಣಿಜ್ಯ ಸಚಿವರು ಪ್ರತ್ಯೇಕವಾಗಿರದೆ ಎಲ್ಲರೂ ಒಂದಾಗಿ ಈ ಬಗ್ಗೆ ಚಿಂತನೆ ಮಾಡಬೇಕು ಎಂದರು.


Spread the love
Subscribe
Notify of

0 Comments