ಮನಸ್ಸಿನ ಸಮತೋಲನಕ್ಕೆ ರುದ್ರ ದೇವರ ಆರಾಧನೆ ಅವಶ್ಯ- ಕಾಣಿಯೂರು ಶ್ರೀ
ಉಡುಪಿ: ಮನಸ್ಸನ್ನು ಆಳುವ ದೇವರು ಮಹಾರುದ್ರ ದೇವರು, ಮನುಷ್ಯನ ಜೀವನದಲ್ಲಿ ಮನಸ್ಸಿನ ಧೈರ್ಯ ಅತಿ ಮುಖ್ಯ. ಮನಸ್ಸು ಶಾಂತವಾಗಿದ್ದರೆ ಬದುಕು ಸುಖಮಯವಾಗುವುದು. ಅಶಾಂತ ಮನಸ್ಸು ಜೀವನವನ್ನು ಮನಸ್ಸನ್ನು ಸಮತೋಲನದಲ್ಲಿ ಇಡುವ ಶಕ್ತಿ ನೀಡುವ ದೇವರಾದ ಮಹಾರುದ್ರನನ್ನು ನಾವು ಭಕ್ತಿಯಿಂದ ಆರಾಧಿಸಬೇಕು ಎಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ತಿಳಿಸಿದರು.

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕಸಭೆ ಉದ್ಘಾಟಿಸಿ ಶ್ರೀಪಾದರು ಮಾತನಾಡಿದರು.
ದೇವಸ್ಥಾನದ ಪ್ರಧಾನ ಅರ್ಚಕ ಪಿ. ವಾಸುದೇವ ಉಪಾಧ್ಯ, ಪರಿಚಾರಕಿ ರಾಮಕೃ ಅವರನ್ನು ಡಾ| ಜಿ. ಶಂಕರ್ ಸಮಾನಿಸಿದರು. ಮೋಹನದಾಸ ನಾಯಕ್ ಪರ್ಕಳ ಅವರನ್ನು ಗೌರವಿಸಲಾಯಿತು.
ವಾಸ್ತುತಜ್ಞ ಏ। ಜಿ. ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಪ್ರಸ್ತಾವನೆಗೈದು, ಈ ಪರಿಸರದಲ್ಲಿರುವ ಅತೀ ದೊಡ್ಡ ದೇವಸ್ಥಾನ ಇದಾಗಿದ್ದು 8 ಮಾಗಣೆಗೆ ಸಂಬಂಧಿಸಿದೆ. ದೊಡ್ಡ ಊರಾದ ಇಲ್ಲಿಗೆ ಪಡುಮುನ್ನೂರು ಎಂಬುದು ಪ್ರಾಚೀನ ಹೆಸರು ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮ ಆಯೋಜನೆಗೆ ಸಳಾವಕಾಶದ ಕೊರತೆಯಿದೆ. ಸ್ಥಳ ಖರೀದಿ ಕಾರ್ಯ ಯಶಸ್ವಿಯಾಗಿ ನೆರವೇರಲಿ ಎಂದು ಅನುಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಡಾ| ಜಿ. ಶಂಕರ್ ಮಾತನಾಡಿ, ದೇವಸ್ಥಾನದಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಭಕ್ತರು ಪಾಲ್ಗೊಳ್ಳುವುದರೊಂದಿಗೆ ತನು, ಮನ, ಧನಾದಿಗಳಿಂದ ಸಹಕರಿಸಬೇಕು. ಜಾಗೃತ ದೇವರಾದ ಶಿವನ ದೇವರ ಸೇವೆಗೈಯುತ್ತಾ ಅವನಲ್ಲಿ ಪ್ರಾರ್ಥನೆ ಸಲ್ಲಿಸಿದಾಗ ನಮ್ಮಮನೋಕಾಮನೆಗಳು ಈಡೇರಲಿವೆ ಎಂದರು.
ಉಜ್ವಲ್ ಡೆವಲಪರ್ಸ್ ಪುರುಷೋತ್ತಮ ಪಿ. ಶೆಟ್ಟಿ ದ. ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ರಮೇಶ್ ಕಾಂಚನ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ವ್ಯವಸ್ಥಾಪನ ಸಮಿತಿ ಸದಸ್ಯರಾದ ದಿನೇಶ್ ಪುತ್ರನ್, ಎಂ. ಪ್ರಭಾಕರ ಶೆಟ್ಟಿ ಶೇಖರ ಶೆಟ್ಟಿ ಯು, ಸುದೇಶ್ ಶೇಟ್, ರಾಜೇಶ್ ಬಿ., ವಿದ್ಯಾಲತಾ ಯು. ಶೆಟ್ಟಿ ಶಮಿತಾ ಎಸ್. ಭಂಡಾರಿ ಉಪಸ್ಥಿತರಿದ್ದರು.
ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಮಾಧವ ಪೂಜಾರಿ ಸ್ವಾಗತಿಸಿದರು. ಅರ್ಪಿತಾ ಪ್ರಶಾಂತ ಶೆಟ್ಟಿ ನಿರೂಪಿಸಿ, ವಂದಿಸಿದರು.
ಬ್ರಹ್ಮಕಲಶೋತ್ಸವದ ಅಂಗವಾಗಿ ಎ. 16ರಂದು ಬೆಳಗ್ಗೆ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಗಣಪತಿ ಹೋಮ, ನವಗ್ರಹ ಹೋಮ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ರಾಕ್ಷೋಘ್ನ ಹೋಮ, ವಾಸ್ತುಪೂಜೆ, ವಾಸ್ತುಬಲಿ, ಪ್ರಕಾರ ಬಲಿ ಸೇವೆ ನಡೆಯಿತು.
ಮಧ್ಯಾಹ್ನ ಜಿಲ್ಲೆಯ ಜಿಲ್ಲೆಯ ಪ್ರಮುಖ ಮಹಿಳಾ ಭಜನಾ ಭಜನಾ ತಂಡದಿಂದ ಶಿವ ಪ್ರೇರಣಿ ಸಹಸ ಕಂತ ಗಾಯನ ಜರಗಿತು. 500ಕ್ಕೂ ಅಧಿಕ ಮಹಿಳೆಯರು ಏಕ ಕಾಲದಲ್ಲಿ ದಾಸರ ಪದದ ಗಾಯನದೊಂದಿಗೆ ಯಕ್ಷಗಾನ, ಭರತನಾಟ್ಯ, ಕುಣಿತ ಭಜನೆಯನ್ನು ಪ್ರಸ್ತುತ ಪಡಿಸಿದರು. ಸಾಹಿತಿ ಡಾ| ನಿಕೇತನ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಉಷಾ ಹೆಬ್ಬಾರ್ ಅವರು ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇಂದು ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ
ಬೆಳಗ್ಗೆ 108 ಕಾಯಿ ಗಣಪತಿ ಹೋಮ, 10.30ರಿಂದ ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದವರಿಂದ ವಿಷ್ಣು ಸಹಸ್ರ ಸಾಮ ಪಾರಾಯಣ, ಮಧ್ಯಾಹ್ನ 12.30ರಿಂದ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3ರಿಂದ ಕಡಿಯಾಳಿ ಪ್ರಶಾಂತ್ ಮತ್ತು ಗ್ರೂಪ್ ಡ್ಯಾನ್ಸ್ ಅಕಾಡೆಮಿಯ ಸಂಯೋಜನೆಯಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ‘ನೃತ್ಯೋಂ 2026’ ನಡೆಯಲಿದೆ. ಸಂಜೆ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್,ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೆ. ರಘುಪತಿಭಟ್, ಪ್ರಮೋದ್ ಮಧ್ವರಾಜ್ ಪಾಲ್ಗೊಳ್ಳಲಿರುವರು. ರಾತ್ರಿ 8ರಿಂದ ಮಂಗಳೂರು ಕಲಾ ಸಂಗಮ ಕಲಾವಿದರಿಂದ ಶಿವದೂತ ಗುಳಿಗೆ ನಾಟಕ ನಡೆಯಲಿದೆ.












