ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಯಶವಂತ್ ಸುವರ್ಣ ಆಯ್ಕೆ
ಉಡುಪಿ: ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ಯಶವಂತ್ ಸುವರ್ಣ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ವಾಲಿಬಾಲ್ ಕ್ರೀಡಾಪಟುಗಳಿಗೆ ವಿಶೇಷ ಪ್ರೋತ್ಸಾಹದ ಜೊತೆಗೆ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಸ್ಥಾಪನೆಗೊಂಡ ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಮುಂದಿನ ದಿನಗಳಲ್ಲಿ ವಾಲಿಬಾಲ್ ಕ್ರೀಡಾಪಟುಗಳ ಸಾಧನೆಗೆ ಸಹಕಾರ ನೀಡಲಿದೆ.
ಅಸೋಸಿಯೇಷನ್ ಗೌರವಾಧ್ಯಕ್ಷರಾಗಿ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ರಾಹುಲ್ ಡಿ. ಶೆಟ್ಟಿ, ಕಾರ್ಯದರ್ಶಿಯಾಗಿ ಮಂಜುನಾಥ್ ಪಾಟ್ಕರ್, ಜೊತೆ ಕಾರ್ಯದರ್ಶಿಗಳಾಗಿ ಸ್ಟೀಫನ್ ಎಸ್. ಪಿಂಟೋ, ಸಚಿನ್ ಸುವರ್ಣ, ಖಜಾಂಚಿಯಾಗಿ ಸಚಿನ್, ಪದಾಧಿಕಾರಿಗಳಾಗಿ ಪ್ರತೀಕ್ಷಾ ಕೆ., ಕೌಶಲ್ಯ ಬಂಗೇರ, ಅಕ್ಷಯ ಶೆಟ್ಟಿ, ಸುಮನ್ ಕುಮಾರ್, ಸಚಿನ್ ಪೂಜಾರಿ, ಜಾಯ್ ಸಂದೀಪ್ ಗೊನ್ಸಾಲ್ವಿಸ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ತಿಕ್, ಭಾಸ್ಕರ್, ಪ್ರಜ್ಞಾ ಜನಾರ್ದನ ಕೊಡವೂರು, ಸುಶಾಂತ್, ಸತ್ಯ ಕುಮಾರ್, ವಿನಯ್ ಶೇಟ್ ಆಯ್ಕೆಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













