ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ವಿದ್ಯುತ್ ಆಘಾತ; ಯುವಕ ಮೃತ್ಯು

Spread the love

ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ವಿದ್ಯುತ್ ಆಘಾತ; ಯುವಕ ಮೃತ್ಯು

ಉಳ್ಳಾಲ: ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಅದೇ ಮಳಿಗೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ತೊಕ್ಕೊಟ್ಟುವಿನಲ್ಲಿ ರವಿವಾರ ರಾತ್ರಿ ನಡೆದಿದೆ.

ಮೃತರನ್ನು ಮೂಲತಃ ಪಜೀರು ಬೆಂಗೋಡಿ ಪದವು ನಿವಾಸಿ ಹಾಗೂ ಪ್ರಸ್ತುತ ಮಂಗಳೂರಿನ ಪಾಂಡೇಶ್ವರ ಶಿವನಗರದಲ್ಲಿ ವಾಸವಾಗಿದ್ದ ಸಲ್ಮಾನ್ ಫಾರಿಶ್ (20) ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟುವಿನ ಖಾಸಗಿ ವಾಣಿಜ್ಯ ಸಂಕೀರ್ಣದಲ್ಲಿ ಸಲ್ಮಾನ್ ಫಾರಿಶ್ ಮಾಲಕತ್ವದಲ್ಲಿ ನೂತನ ವಸ್ತ್ರಮಳಿಗೆಯನ್ನು ಇದೇ ಶುಕ್ರವಾರ ಉದ್ಘಾಟಿಸಲು ನಿರ್ಧರಿಸಲಾಗಿತ್ತು. ಅದರ ಪೂರ್ವಸಿದ್ಧತಾ ಕಾರ್ಯಗಳ ಭಾಗವಾಗಿ ರವಿವಾರ ರಾತ್ರಿ ಮಳಿಗೆಯಲ್ಲಿ ವಿದ್ಯುತ್ ಸಂಪರ್ಕ ಸೇರಿದಂತೆ ವಿವಿಧ ಕೆಲಸಗಳು ನಡೆಯುತ್ತಿತ್ತು ಎನ್ನಲಾಗಿದೆ.

ಈ ವೇಳೆ ಸಲ್ಮಾನ್ ಫಾರಿಶ್ ಅವರಿಗೆ ಏಕಾಏಕಿ ವಿದ್ಯುತ್ ಆಘಾತವಾಗಿದ್ದು, ಮಳಿಗೆಯಲ್ಲಿದ್ದ ಕಾರ್ಮಿಕರು ತಕ್ಷಣವೇ ಅವರನ್ನು ಆಟೋ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ದಾರಿಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.


Spread the love
Subscribe
Notify of

0 Comments
Inline Feedbacks
View all comments