ಅಂತರ್ ರಾಷ್ಟ್ರೀಯ ಬ್ಯಾಡ್ಮಿಂಟನ್| ಪುರುಷರ ಸಿಂಗಲ್ಸ್: ಭಾರತದ ರಿತ್ವಿಕ್ ರೌನಕ್ ಚೌಹಾಣ್, ಮಹಿಳಾ ಸಿಂಗಲ್ಸ್ನಲ್ಲಿ ಭಾರತದ ಮಾನ್ಸಿ ಸಿಂಗ್ – ಅಶ್ಮಿತಾ ಚಲಿಯಾ ಫೈನಲ್ಗೆ
ಮಂಗಳೂರು: ನಗರದ ನ್ಯೂ ಉರ್ವಾ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಯೋನೆಕ್ಸ್ – ಸನ್ ರೈಸ್ ಚೀಫ್ ಮಿನಿಸ್ಟರ್ಸ್ ಮಂಗಳೂರು ಇಂಡಿಯಾ ಇಂಟರ್ ನ್ಯಾಶನಲ್ ಚಾಲೆಂಜ್ 2025 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಅಗ್ರ ಶ್ರೇಯಾಂಕದ ರಿತ್ವಿಕ್ ಸಂಜೀವಿ ಸತೀಶ್ ಕುಮಾರ್ ಮತ್ತು ಸ್ವದೇಶದ ರೌನಕ್ ಚೌಹಾಣ್ , ಮಹಿಳಾ ಸಿಂಗಲ್ಸ್ನಲ್ಲಿ ಭಾರತದ ಮಾನ್ಸಿ ಸಿಂಗ್ 4ನೇ ಶ್ರೇಯಾಂಕದ ಅಶ್ಮಿತಾ ಚಲಿಯಾ ಅವರ ಜತೆಗೆ ಅವರು ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಮೊದಲ ಪಂದ್ಯದಲ್ಲಿ- ಮಹಿಳೆಯರ ಸಿಂಗಲ್ಸ್- ಪಂದ್ಯದಲ್ಲಿ 4ನೇ ಶ್ರೇಯಾಂಕಿತ ಭಾರತದ ಅಶ್ಮಿತಾ ಚಲಿತಾ ಅವರು 16ನೇ ಶ್ರೇಯಾಂಕಿತ ಸೂರ್ಯ ಚರಿಷ್ಮಾ ಅವರನ್ನು 21-12, 21-15 ಆಟಗಳಿಂದ ಸೋಲಿಸಿ ಫೈನಲ್ಗೆ ಪ್ರವೇಶಿಸಿದರು.
3ನೇ ಶ್ರೇಯಾಂಕದ ಭಾರತದ ಮಾನ್ಸಿ ಸಿಂಗ್ ಅವರು ಸ್ವದೇಶದ ತನ್ವಿ ಪತ್ರಿ ಅವರನ್ನು 22-10, 21-9 ಆಟಗಳಿಂದ ಸೋಲಿಸಿ ಫೈನಲ್ಗೆ ಆಯ್ಕೆಯಾದರು.
ನಂತರ ನಡೆದ ಮಿಶ್ರ ಡಬಲ್ಸ್ನಲ್ಲಿ ಥಾಯ್ಲೆಂಡ್ನ ತನಾವಿನ್ ಮಾದೀ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿಯು 21-15, 21-19 ಆಟಗಳಿಂದ ತಮ್ಮದೇ ದೇಶದ 5ನೇ ಶ್ರೇಯಾಂಕಿತ ಪೊಂಗಸ್ಕೊರ್ನ್ ತೊಂಗ್ಖಾಮ್ ಮತ್ತು ನನ್ನಪಸ್ ಸುಕ್ಲದ್ ಜೋಡಿಯನ್ನು ಪರಾಭವಗೊಳಿಸಿ ಫೈನಲ್ಗೆ ಅರ್ಹತೆ ಪಡೆದರು.
ಮಿಶ್ರ ಡಬಲ್ಸ್ನಲ್ಲಿ ಎರಡನೇ ಪಂದ್ಯದಲ್ಲಿ ಭಾರತದ 2ನೇ ಶ್ರೇಯಾಂಕದ ಧ್ರುವ್ ರಾವತ್ ಮತ್ತು ಮನೀಶಾ ಕೆ ಜೋಡಿಯು ಸ್ವದೇಶದ ಆಯುಷ್ ಮಖಿಜಾ ಮತ್ತು ಲಿತಿಕಾ ಶ್ರೀವಾಸ್ತವ ಜೋಡಿಯನ್ನು 22-20, 21-17 ಆಟಗಳಿಂದ ಪರಾಭವಗೊಳಿಸಿ ಫೈನಲ್ಗೆ ಏರಿದರು.
ಮಹಿಳಾ ಡಬಲ್ಸ್ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಶ್ರೀನಿಧಿ ನಾರಾಯಣನ್ ಮತ್ತು ರೆಶಿಕಾ ಉತಯಸೂರ್ಯನ್ ಜೋಡಿಯು 21-17, 12-21, 21-16 ಆಟಗಳಿಂದ ಸ್ವದೇಶದ 3ನೇ ಶ್ರೇಯಾಂಕದ ಅಶ್ವಿನಿ ಭಟ್ ಕೆ ಮತ್ತು ಶಿಖಾ ಗೌತಮ್ ಜೋಡಿಯನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದರು.
ಮಹಿಳಾ ಡಬಲ್ಸ್ನ ಎರಡನೇ ಪಂದ್ಯದಲ್ಲಿ 5ನೇ ಶ್ರೇಯಾಂಕದ ಥಾಯ್ಲೆಂಡಿನ ಹತಾಯ್ತಿಪ್ ಮಿಜದ್ ಮತ್ತು ನಪಪಕೊರ್ನ್ ತುಂಗ್ಕಸತಾನ್ ಜೋಡಿಯು ಭಾರತದ ಅದಿತಿ ಭಟ್ ಮತ್ತು ಶರ್ವಾಣಿ ವಾಲೇಕರ್ ಜೋಡಿಯನ್ನು 21-19, 21-7 ಆಟಗಳಿಂದ ಸೋಲಿಸಿ ಫೈನಲ್ಗೆ ಅರ್ಹತೆ ಪಡೆದರು.
ಪುರುಷರ ಸಿಂಗಲ್ಸ್ನ ಮೊದಲ ಸೆಮಿ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಭಾರತದ ಆಟಗಾರ ರಿತ್ವಿಕ್ ಸಂಜೀವಿ ಸತೀಶ್ ಕುಮಾರ್ ಅವರು ಸ್ವದೇಶದ ಎ.ಆರ್. ರೋಹನ್ ಕುಮಾರ್ ಆನಂದಾಸ್ ರಾಜ್ ಕುಮಾರ್ ಅವರನ್ನು 21-12, 21-17 ಆಟಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು.
ಪುರುಷರ ಸಿಂಗಲ್ಸ್ನ ಎರಡನೆ ಪಂದ್ಯದಲ್ಲಿ ಭಾರತದ ರೌನಕ್ ಚೌಹಾಣ್ ಅವರು ಸ್ವದೇಶದ 16ನೇ ಶ್ರೇಯಾಂಕದ ಪ್ರಣಯ್ ಶೆಟ್ಟಿಗಾರ್ ಅವರನ್ನು 21-17, 21-16 ಆಟಗಳಿಂದ ಸೋಲಿಸಿ ಫೈನಲ್ಗೆ ಏರಿದರು.
ಪುರುಷರ ಡಬಲ್ಸ್ನ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕದ ಸಿಂಗಾಪುರದ ಡೊನೊವಾನ್ ವಿಲ್ಲರ್ಡ್ ವೀ ಮತ್ತು ಜಿಯಾ ಹವೋ ಹೊವಿನ್ ವೋಂಗ್ ಜೋಡಿಯು ಥಾಯ್ಲೆಂಡಿನ 2ನೇ ಶ್ರೇಯಾಂಕದ ಚಲೊಯೆಂಪೊನ್ ಚರೊಎನಿಟ ಮೊರ್ನ್ ಮತ್ತು ವೊರ್ರಪೊಲ್ ತೊಂಗ್ಸಂಗ ಜೋಡಿಯನ್ನು 22-2, 21-14 ಆಟಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.
ಪುರುಷರ ಡಬಲ್ಸ್ನ ಎರಡನೇ ಸೆಮಿ ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತ ಸಿಂಗಾಪುರದ ಎಂಗ್ ಕೀಟ್ ವೆಸ್ಲಿ ಕೋಹ್ ಮತ್ತು ಜನ್ಸೂಕ್ ಕುಬೊ ಜೋಡಿಯು 5ನೇ ಶ್ರೇಯಾಂಕದ ಥಾಯ್ಲೆಂಡಿನ ಫರಾನ್ಯು ಕವೊಸಮಾಂಗ್ ಮತ್ತು ತನಾಡೊನ್ ಪುನ್ಪನಿಚ್ ಜೋಡಿಯನ್ನು 21-11, 11-21, 21-13 ಆಟಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.













