ಅಮಾಯಕ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆಗೊಳಿಸಿ; ಸಿಎಫ್ಐ ಒತ್ತಾಯ

Spread the love

ಅಮಾಯಕ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆಗೊಳಿಸಿ; ಸಿಎಫ್ಐ ಒತ್ತಾಯ

ಮಂಗಳೂರು: ಶ್ರೀನಿವಾಸ್ ಕಾಲೇಜಿನ ಘಟನೆಯಲ್ಲಿ ಬಂಧಿತರಾದ ಅಮಾಯಕ ವಿದ್ಯಾರ್ಥಿಗಳನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಒತ್ತಾಯಿಸಿದೆ.

ನಗರದ ಹೋಟೆಲ್ ವುಡ್ ಲ್ಯಾಂಡ್ ಹೋಟೆಲಿನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಫ್ ಐ ರಾಜ್ಯಾಧ್ಯಕ್ಷ ಮಹಮ್ಮದ್ ತೌಫಿಲ್ ಕಳೆದ ಮೂರು ವರುಷಗಳಿಂದ ಶ್ರೀನಿವಾಸ್ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಮೇಲೆ ನಡೆಯುತ್ತಿರುವ ಆಡಳಿತ ಮಂಡಳಿಯ ದೌರ್ಜನ್ಯಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ. ಹಲವು ರೀತಿಯ ಪ್ರತಿಭಟನೆಗಳನ್ನು ವಿದ್ಯಾರ್ಥಿಗಳು ನಡೆಸಿದ್ದು, ಆಡಳಿತ ಮಂಡಳಿ ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಕೊನೆಗೆ ಸಿಎಫ್ಐ ಸಂಘಟನೆ ಮಧ್ಯ ಪ್ರವೇಶಿಸಿ ಆಡಳಿತ ಮಂಡಳಿಯೊಂದಿಗೆ ಮಾತನಾಡಿ ಸಮಸ್ಯೆ ಸರಿಪಡಿಸಲು ಪ್ರಯತ್ನಿಸಿತ್ತು.

image001cfi-pressmeet-20160910-001 image002cfi-pressmeet-20160910-002 image003cfi-pressmeet-20160910-003 image004cfi-pressmeet-20160910-004 image005cfi-pressmeet-20160910-005

ಬಿಫಾರ್ಮಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ದೂರು ನೀಡಿದ್ದು, 23 ಮಂದಿ ಕೊನೆಯ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗಳು ಅವರಿಗೆ ರ್ಯಾಗಿಂಗ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು. ಇದರ ಆಧಾರದ ಮೇಲೆ ಕಾಲೇಜಿನ ಪ್ರಾಂಶುಪಾಲ ಡಾ ಎ ಆರ್ ಶಬಾರಾಯ ಅವರು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಇತ್ತೀಚೆಗೆ ಕಾಲೇಜು ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿರವಸ್ತ್ರವನ್ನು ಧರಿಸುವುದಕ್ಕೆ ನಿರ್ಬಂಧ ಹೇರಿದ್ದು ಸಣ್ಣ ಪುಟ್ಟ ವಿಷಯಗಳಿಗೆ ವಿದ್ಯಾರ್ಥಿಗಳಿಗೆ ದಂಡ ವಿಧಿಸಿತ್ತಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾಗಿ ಪ್ರಾಂಶುಪಾಲರು ಹಾಗೂ ಇತರ ಉಪನ್ಯಾಸಕರು ಬೆದರಿಕೆ ಹಾಕಿದ್ದು ಫಲಿತಾಂಶವನ್ನು ತಡೆಹಿಡಿಯುತ್ತಿದ್ದಾರೆ.

ಕಾಲೇಜಿನ ಪ್ರಾಂಶುಪಾಲರು ಬಿ ಫಾರ್ಮಾ ವಿಭಾಗದ 9ವಿದ್ಯಾರ್ಥಿಗಳನ್ನು ಕರೆದು ದೂರು ನೀಡುವಂತೆ ಒತ್ತಾಯಿಸಿದ್ದರು. ವಿದ್ಯಾರ್ಥಿಗಳು ಇದಕ್ಕೆ ಒಪ್ಪದೆ ಹೋದಾಗ ಅವರುಗಳಿಗೂ ಬೆದರಿಕೆ ಹಾಕಿದ್ದಾರೆ. ಇದರಿಂದ ಬೆದರಿದ ವಿದ್ಯಾರ್ಥಿಗಳಿ ಪ್ರಾಂಶುಪಾಲರ ಒತ್ತಾಯಕ್ಕೆ ಮಣಿದು ದೂರು ನೀಡಿದ್ದಾರೆ. ಅವರ ದೂರಿನಂತೆ ಪ್ರಾಂಶುಪಾಲರು ಪೋಲಿಸರಿಗೆ ದೂರು ನೀಡಿದ್ದು ಅದರಂತೆ ಪೋಲಿಸರು ಮೂರು ಮಂದಿ ಕಣ್ನೂರು ಕೇರಳದ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿಗಳ ಬಂಧನವಾದಂತೆ ನಮ್ಮ ಸಂಘಟನೆ ಮಂಗಳೂರು ಗ್ರಾಮಾಂತರ ಠಾಣೆಗೆ ಮನವಿ ಸಲ್ಲಿಸಲು ತೆರಳಿದಾಗ ಪೋಲಿಸರು ನಮಗೆ ಠಾಣೆಯ ಒಳಗೆ ಪ್ರವೇಶಿಸಲು ಕೂಡ ಅವಕಾಶ ನೀಡದೆ ನಮ್ಮ ಮೇಲೆ ಲಾಠಿ ಜಾರ್ಜ್ ಮಾಡಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲರು ಹಾಗೂ ಮೂರು ಮಂದಿ ಉಪನ್ಯಾಸಕರನ್ನು ಈ ಕೂಡಲೇ ಕಾಲೇಜಿನಿಂದ ಅಮಾನತು ಮಾಡಬೇಕು ಎಂದು ತೌಫಿಲ್ ಒತ್ತಾಯಿಸಿದರು. ನಾಲ್ಕು ಮಂದಿಯೂ ಕೂಡ ಕಾಲೇಜಿನ ವಿದ್ಯಾರ್ಥಿಗಳನ್ನು ಧರ್ಮದ ಆಧಾರದ ಮೇಲೆ ಒಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇದೇ ಘಟನೆ ಮುಂದುವರೆದಲ್ಲಿ ಸಮಸ್ಯೆ ಇನ್ನೂ ಬಿಗಡಾಯಿಸಲಿದೆ. ಮೇಲಿನ ಎಲ್ಲಾ ಘಟನೆಗಳಿಗೆ ಪ್ರಾಂಶುಪಾಲರೇ ನೇರ ಹೊಣೆ ಯಾಗಿದ್ದು, ಬಂಧಿತ ವಿದ್ಯಾರ್ಥಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಇಮ್ರಾನ್, ಮಹಮ್ಮದ್ ರಿಯಾಜ್, ಮಹಮ್ಮದ ಅತಾವುಲ್ಲಾ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.


Spread the love