ಆಧುನೀಕರಣವನ್ನು ಸ್ವೀಕರಿಸುದರೊಂದಿಗೆ ಪರಂಪರೆಯನ್ನು ಉಳಿಸುವ ಕರ್ತವ್ಯ ನಮ್ಮದಾಗಲಿ – ಡಾ. ಭರತ್ ಕುಮಾರ್ ಪೊಲಿಪು
ಮುಂಬಯಿ : ಯಾವುದೇ ಜಾತಿ ಧರ್ಮಕ್ಕೆ ಸೀಮಿತಿವಾಗಿರದೆ ಎಲ್ಲ ತುಳುವರನ್ನು ಒಗ್ಗೂಡಿಸುವ ಸಂಘಟನೆ ತುಳು ಸಂಘ. ಜಾತಿ ಧರ್ಮ ಅಂತ ಅಲ್ಲಲ್ಲಿ ಗೋಡೆ ಕಟ್ಟಿ ಏಕಾಂಗಿಯಾಗುತ್ತಿರುವ ಈ ಕಾಲದಲ್ಲಿ ತುಳು ಸಂಘದಂತಹ ಸಂಘಟನೆಗೆ ಪ್ರಾಮುಖ್ಯತೆಯಿದೆ. ನಮ್ಮ ತುಳು ಸಂಸ್ಕೃತಿ ನಮ್ಮನ್ನು ಎಳೆಯುತ್ತಿದೆ. ನಮ್ಮ ಸಂಸ್ಕೃತಿಯು ನಮಗೆ ತಿಳಿಯದೇ ಆಧುನೀಕತೆಗೆ ಪಲ್ಲಟವಾಗುತ್ತಿದ್ದು, ಆಧುನೀಕರಣವನ್ನು ಸ್ವೀಕರಿಸುದರೊಂದಿಗೆ ನಮ್ಮ ಪರಂಪರೆಯನ್ನು ಉಳಿಸುವ ಕರ್ತವ್ಯ ನಮ್ಮದಾಗಲಿ ಎಂದು ಕರ್ನಾಟಕ ಸಂಘ ಮುಂಬಯಿಯ ಅಧ್ಯಕ್ಷರೂ, ಖ್ಯಾತ ರಂಗ ನಿರ್ದೇಶಕರೂ ಆದ ಡಾ. ಭರತ್ ಕುಮಾರ್ ಪೊಲಿಪು ತಿಳಿಸಿದರು.
ತುಳು ಸಂಘ, ಬೊರಿವಲಿಯ ವತಿಯಿಂದ ಆಟಿದ ಒಂಜಿ ಕೂಟ ಕಾರ್ಯಕ್ರಮವು ಅ. 3 ರಂದು ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್ ಇವರ ಅಧ್ಯಕ್ಷತೆಯಲ್ಲಿ ಆದಿನಾತ ದಿಗಂಬರ ಜೈನ್ ಟೆಂಪಲ್ ಟ್ರಷ್ಟ್, ಧರ್ಮ ನಗರ, ಬೊರಿವಲಿ ಪಶ್ಚಿಮ ಮುಂಬಯಿ ಇಲ್ಲಿ ಜರಗಿದ್ದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು ನಮ್ಮ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವುದು ನಮ್ಮ ತುಳು ಸಂಸ್ಕೃತಿ, ನಾಟಕ ಯಕ್ಷಗಾನವು ನಮ್ಮ ವ್ಯಕ್ತಿತ್ವಕ್ಕೆ ಪೂರಕ. ಹಿಂದಿನ ಕಾಲದಲ್ಲಿ ಕೂಡು ಕುಟುಂಬ ಪದ್ದತಿಯಿದ್ದು ಆಗ ಯುವ ಜನಾಂಗವು ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡುವ ಸಂಭವವಿರುತ್ತಿರಲಿಲ್ಲ. ಆದುದರಿಂದ ವರ್ಷಕ್ಕೆ ಒಮ್ಮೆ ಇಂತಹ ಆಟಿಯ ಸಮಾರಂಭವನ್ನು ಆಚರಿಸುವ ಮೂಲಕ ಆ ಕಾಲದಲ್ಲಿ ಹಿರಿಯರನ್ನು ಗೌರವಿಸುವ ಪದ್ದತಿ ಬಗ್ಗೆ ನಮ್ಮ ಮುಂದಿನ ಜನಾಂಗಕ್ಕೆ ತಿಳಿಸಬೇಕಾಗಿದೆ. ನಕಾರಾತ್ಮಕ ಚಿಂತನೆಯು ಸಕಾರಾತ್ಮಕವಾಗಿ ಬದಲಾಗಬೇಕು. ಇಂತಹ ಕಾರ್ಯಕ್ರಮಗಳ ಮೂಲಕ ಅದು ಸಾದ್ಯ ಎಂದು ತುಳು ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.
ತುಳು ಸಂಘ, ಬೋರಿವಲಿಯ ಅಧ್ಯಕ್ಷ ಹರೀಶ್ ಮೈಂದನ್ ಎಲ್ಲರನ್ನು ಸ್ವಾಗತಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ತುಳು ಸಂಘ, ಬೋರಿವಲಿಯ ಸ್ಥಾಪಕಾಧ್ಯಕ್ಷ ವಾಸು ಪುತ್ರನ್ ಮತ್ತು ಮಾಜಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪೇಟೆಮನೆ ಮಾತನಾಡುತ್ತಾ ತುಳು ಸಂಘ ಸ್ಥಾಪನೆಯ ಬಗ್ಗೆ ಹಾಗು ಸಂಘ ಸ್ಥಾಪಿಸಿದ ಉದ್ದೇಶದ ಬಗ್ಗೆ ಮಾತನಾಡಿದರು.
ಮಹಿಳೆಯರು ತುಳುನಾಡಿನ ಆಟಿಯ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ತಮ್ಮ ಮನೆಯಲ್ಲೇ ಮಾಡಿ ತಂದಿದ್ದು ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಸುಮತಿ ಸಾಲ್ಯಾನ್ ಪ್ರಥಮ, ಮಾಲವಿಕಾ ಮೊಯಿಲಿ ದ್ವೀತೀಯ ಹಾಗೂ ಅಮಿತಾ ರೈ ತೃತೀಯ ಬಹುಮಾನವನ್ನು ಪಡೆದರು. ತೀರ್ಪುಗಾರರಾಗಿ ಸುರೇಂದ್ರಕುಮಾರ್ ಮಾರ್ನಾಡ್, ಸಚಿತ ಶ್ರೀಯಾನ್ ಮತ್ತು ಸುಧಾ ಶೆಟ್ಟಿ ಸಹಕರಿಸಿದರು.
ಅತಿಥಿ ಮತ್ತು ತೀರ್ಪುಗಾರರನ್ನು , ಕೃಷ್ಣರಾಜ್ ಸುವರ್ಣ, ಅನಿಲ್ ಶೆಟ್ಟಿ, ವಿಜಯಲಕ್ಷ್ಮೀ ದೇವಾಡಿಗ ಮತ್ತು ಶೋಭಾ ಶೆಟ್ಟಿ, ಪರಿಚಯಿಸಿದರು.
ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಶೆಟ್ಟಿ ಪ್ರಾರ್ಥನೆ ಮಾಡಿದರು.
ತೀರ್ಪುಗಾರರಾದ ಸುರೇಂದ್ರಕುಮಾರ್ ಮಾರ್ನಾಡ್, ಸಚಿತ ಶ್ರೀಯಾನ್ ಮತ್ತು ಸುಧಾ ಶೆಟ್ಟಿ ಯವರು ಮಾತನಾಡಿ ಸಂಘದ ಮಹಿಳೆಯರ ಆಟಿಯ ಅಡುಗೆಯ ರುಚಿಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಸಂಘದ ಉಪಾಧ್ಯಕ್ಷ ರಜಿತ್ ಸುವರ್ಣ ಅವರೂ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಸಂಘದ ಇತರ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿಕೃಷ್ಣರಾಜ್ ಸುವರ್ಣ, ಗೌ. ಕೋಶಾಧಿಕಾರಿ ದಿವಾಕರ ಕರ್ಕೇರ , ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಜೊತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್ ಶೆಟ್ಟಿ, ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ., ಮೊದಲಾದವರು ಉಪಸ್ಥಿತರಿದ್ದರು.
ನಿತ್ಯ ಸುವರ್ಣ, ವಸುಧಾ ಪೈ, ಶೋಭಾ ಪೂಜಾರಿ, ವೇದಾ ಶೆಟ್ಟಿ, ವಿಜಯಲಕ್ಷ್ಮೀ ದೇವಾಡಿಗ, ಪ್ರಿಯ ಉಪ್ಪೂರು, ಹರ್ಷಿಕಾ ಎಂ. ಆರ್ ಮತ್ತು ಮಹಿಷಾ ಮರ್ಧಿನಿ ದೇವಸ್ಥಾನದ ಕಲಾವಿದರು, ವಿವಿಧ ನೃತ್ಯ ಕಾರ್ಯಕ್ರಮ ನೀಡಿದ್ದು, ಚಿತ್ರಾರ್ಥ್ ಎಂ. ಆರ್., ಇವರಿಂದ ಸಂಗೀತ ಕಾರ್ಯಕ್ರಮ, ಲಕ್ಷ್ಮೀ ದೇವಾಡಿಗ ಇವರಿಂದ ತುಳು ಗಾದೆಗಳು, “ತುಳುನಾಡ ಐಸಿರ” , ತುಳು ಕಿರು ನಾಟಕ ವನ್ನು ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಇತರ ಸದಸ್ಯರು ಸಾದರ ಪಡಿಸಿದರು.
ಆಟಿ ಕಾರ್ಯಕ್ರಮದ ನಿಮಿತ್ತ ಆಟಿ ಕಳಿಂಜದ ಪ್ರವೇಶವೂ ಇತ್ತು, ವಿವಾನ್ ಶೇರಿಗಾರ್ ನಲ್ಲಸೋಪಾರ ಕಳಿಂಜನಾಗಿದ್ದು ಲಕ್ಷ್ಮೀ ದೇವಾಡಿಗ ಸಹಕರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಕೃಷ್ಣರಾಜ್ ಸುವರ್ಣ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಮಹಿಳೆಯರು ತಯಾರಿಸಿದ ಸುಮಾರು ಮೂವತ್ತೈದು ಬಗೆಯ ಆಟಿಯ ತಿಂಡಿ ತಿನಿಸುಗಳ ಸವಿರುಚಿಯನ್ನು ಉಪಸ್ಥಿತರಿದ್ದ ಎಲ್ಲಾ ತುಳು ಕನ್ನಡಿಗರು ಪಡೆದರು. ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಕಾರ್ಯಕ್ರಮವನ್ನು ನಿರ್ವಹಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಕಾರ್ಯಕಾರಿ ಸಮಿತಿ, ಹಾಗೂ ಉಪಸಮಿತಿಗಳ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ದಾನಿಗಳು ಸಹಕರಿಸಿದರು.