ಇಡಿ ಇಲಾಖೆ ದುರ್ಬಳಕೆ ಮಾಡಿದ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆ -ಐವನ್ ಡಿಸೋಜ
ಮಂಗಳೂರು: “ಇಡಿ ಇಲಾಖೆಯನ್ನು ರಾಜಕೀಯ ದುರುದ್ದೇಶಕ್ಕೆ ಬಳಸಿರುವ ಬಿಜೆಪಿ ದೇಶದ ಸಂವಿಧಾನವನ್ನು ಗಾಳಿಗೆ ತೂರಿದೆ ಬಿಜೆಪಿಗೆ ದೇಶದಲ್ಲಿ ಆಡಳಿತ ನಡೆಸಲು ಅರ್ಹತೆ ಇಲ್ಲ. ಸುಪ್ರೀಂ ಕೋರ್ಟ್ ಇಡಿ ದುರ್ಬಳಕೆ ಮಾಡಿರುವುದನ್ನು ಹೇಳಿದ್ದರಿಂದ ಬಿಜೆಪಿ ಸಪಬರಹ ಜಗಜ್ಜಾಹೀರಾಗಿದೆ ಎಂದು ವಿಧಾನ ಪರಿಷತ್ ಶಾಸಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು
ಇಡಿಯನ್ನು ಮುಂದಿಟ್ಟುಕೊಂಡು ಮುಡಾ ಹಗರಣದಲ್ಲಿ ಮುಖ್ಯಮಂತ್ರಿಯವರ ಶ್ರೀಮತಿಯವರ ಹೆಸರನ್ನು ದುರ್ಬಳಕೆ ಮಾಡಲಾಯಿತು. ಮುಡಾ ಪ್ರಕರಣದಲ್ಲಿ ಮನಿ ಲ್ಯಾಂಡಿಂಗ್ ನಡೆದಿಲ್ಲ, ಹಣ ತೆಗೆದುಕೊಂಡ ದೂರಿಲ್ಲ ಹೀಗಿರುವಾಗ ಮುಖ್ಯಮಂತ್ರಿಯವರ ಶ್ರೀಮತಿ ವಿರುದ್ಧ ಆರೋಪ ಮಾಡಿದ್ದು ಹೇಗೆ? ಸಿವಿಲ್ ಪ್ರಕರಣದಲ್ಲಿ ಇಡಿ ಮಧ್ಯಪ್ರವೇಶ ಮಾಡುವ ಹಕ್ಕು ಹೊಂದಿಲ್ಲ ಇದನ್ನು ಸುಪ್ರೀಂ ಕೋರ್ಟ್ ಒತ್ತಿ ಹೇಳಿದೆ. ಹೀಗಿರುವಾಗ ಕಾಂಗ್ರೆಸ್ ನಾಯಕರಾದ ಡಿಕೆಶಿವಕುಮಾರ್ ಜಿ ಪರಮೇಶ್ವರ್ ವಿರುದ್ಧ ಇಡಿ ತನಿಖೆ ಹೇಗೆ ಆಯ್ತು? ಇಡಿ ದುರ್ಬಳಕೆ ಮಾಡಿರುವ ಕೇಂದ್ರ ಸರಕಾರದ ವಿರುದ್ಧ ಕೋರ್ಟ್ ಮೆಟ್ಟಿಲು ಎರುತ್ತೇವೆ. ಇದಕ್ಕೆ ದೇಶದ ಗೃಹ ಸಚಿವ ಮತ್ತು ಪ್ರಧಾನಿ ಅವರೇ ನೇರ ಹೊಣೆ” ಎಂದು ಐವನ್ ಡಿಸೋಜ ಕಿಡಿಕಾರಿದ್ದಾರೆ.
“ನಾವು ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತೇವೆ, ಈಗ ನಡೆಯುತ್ತಿರುವ ಸಂಸತ್ ಕಲಾಪದಲ್ಲಿ ಈ ಕುರಿತ ಚರ್ಚೆಗೆ ಅವಕಾಶ ನೀಡಬೇಕು. ಜೆಡಿಎಸ್ ಬಿಜೆಪಿ, ನಾಯಕರು ಮಾನ ಮರ್ಯಾದೆ ಇದ್ದರೆ ಕ್ಷಮೆ ಯಾಚಿಸಬೇಕು, ಅಧಿಕಾರದಲ್ಲಿ ಇದ್ದವರು ರಾಜೀನಾಮೆ ನೀಡಬೇಕು” ಎಂದರು.