ಉಚ್ಚಿಲ ದಸರಾ, ಪೊಣ್ಣು ಪಿಲಿ ನಲಿಕೆ: ದರ್ಪಣ ಉಡುಪಿ ತಂಡ ಪ್ರಥಮ
ಉಡುಪಿ: ಉಡುಪಿ-ಉಚ್ಚಿಲ ದಸರಾ 2025 ಪ್ರಯುಕ್ತ ಉಡುಪಿ ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ ವತಿಯಿಂದ ಶನಿವಾರ ಜರುಗಿದ ಮೂರನೇ ವರ್ಷದ ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯನ್ನು ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ವೆ|ಮೂ|ರಾಘವೇಂದ್ರ ಉಪಾಧ್ಯಾಯ ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿದ್ದ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ ಉಡುಪಿ – ಉಚ್ಚಿಲ ದಸರಾ ಕಾಪು ಕ್ಷೇತ್ರದ ಪ್ರಸಿದ್ಧಿಯನ್ನು ಹೆಚ್ಚಿಸಿದ್ದು ಎಲ್ಲಾ ವರ್ಗದ ಪ್ರತಿಭಾನ್ವಿತರಿಗೂ ಅವರವರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡುವ ಮೂಲಕ ಎಲ್ಲರ ದಸರಾ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಮಹಾಲಕ್ಷ್ಮೀ ಕೋ ಅಪರೇಟಿವ್ ಬ್ಯಾಂಕ್ ಅಧ್ಯಕ್ಷ ಮತ್ತು ಉಡುಪಿ ಶಾಸಕ ಯಶಪಾಲ ಸುವರ್ಣ ಮಾತನಾಡಿ ಉಚ್ಚಿಲ ದಸರಾದಲ್ಲಿ ಸ್ಪರ್ಧೆಗಳನ್ನು ನಡೆಸಲು ನಮಗೂ ಅವಕಾಶ ಮಾಡಿಕೊಡುವ ಮೂಲಕ ಜಿ.ಶಂಕರ್ ಅವರು ಶ್ರೇಷ್ಠತೆಯನ್ನು ಪ್ರದರ್ಶಿಸಿದ್ದಾರೆ. ಇಂತಹ ಸ್ಪರ್ಧೆಗಳ ಆಯೋಜನೆಯಿಂದ ತೆರೆಮರೆಯಲ್ಲಿ ಉಳಿದಿರುವ ಪ್ರತಿಭೆಗಳನ್ನು ಮುಂಚೂಣಿಗೆ ತರಲು ಸಾಧ್ಯವಾಗುತ್ತದೆ ಎಂದರು.
ದಕ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್, ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ನಿರ್ದೇಶಕರಿ ಶ್ಯಾಮಿಲಿ ನವೀನ್, ವಿದುಷಿ ದೀಕ್ಷಾ ವಿ ಬ್ರಹ್ಮಾವರ, ಗಣ್ಯಶರಾದ ನಿರುಪಮಾ ಪ್ರಸಾದ್ ಶೆಟ್ಟಿ, ಶಿಲ್ಪಾ ಜಿ ಸುವರ್ಣ, ಅಜಿತ್ ಸುವರ್ಣ ಮುಂಬೈ, ಉಡುಪಿ-ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ್ ಕರ್ಕೆರಾ, ಮಹಿಳಾ ಸಂಚಾಲಕಿ ಸಂಧ್ಯಾ ದೀಪ ಸುನಿಲ್, ಮಹಿಳಾ ಸಂಘದ ಅಧ್ಯಕ್ಷೆ ಉಷಾರಾಣಿ, ಸತೀಶ್ ಕುಂದರ್, ಬ್ಯಾಂಕಿನ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ನಿರ್ದೇಶಕರಾದ ಅಜಿತ್ ಕೊಡವೂರು, ಶಶಿಕಾಂತ್ ಪಡುಬಿದ್ರಿ, ಶೋಭೇಂದ್ರ ಸಸಿಹಿತ್ಲು, ವನಜಾ ಪುತ್ರನ್, ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್ ಶೆಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕಿ ಶಾರಿಕಾ ಕಿರಣ್ ಉಪಸ್ಥಿತರಿದ್ದರು.
ವಿಜೇತರ ವಿವರ
ಉಡುಪಿ ದರ್ಪಣ ತಂಡ – ಪ್ರಥಮ ರೂ. 30000.00
ಡಿ ಡಿ ಗ್ರೂಪ್ ನಿಟ್ಟೂರು – ದ್ವಿತಿಯ ರೂ 20000.00
ಫ್ರೆಂಡ್ಸ್ ಕೊರಂಗ್ರಪಾಡಿ – ತೃತೀಯ ರೂ 15000.00
ವೈಯುಕ್ತಿ ವಿಭಾಗ
ಸೌಮ್ಯ ಸುರೇಂದ್ರ – ಪ್ರಥಮ ರೂ 6000.00
ತನಿಷ್ಕಾ ಭಂಡಾರಿ – ದ್ವಿತೀಯ ರೂ 4000.00
ರಮ್ಯಾ ರೂಪೇಶ್ – ತೃತೀಯ ರೂ 3000.00
ಭಾಗವಹಿಸಿದ ಎಲ್ಲಾ ತಂಡಗಳಿಗೂ ರೂ 5 ಸಾವಿರ ಪ್ರೊತ್ಸಾಹ ಧನ ನೀಡಿ ಗೌರವಿಸಲಾಯಿತು. ನಾಡೋಜ ಡಾ| ಜಿ ಶಂಕರ್ ಸಹಿತ ಗಣ್ಯರು ಪ್ರಶಸ್ತಿ ವಿತರಿಸಿದರು.
ಅವಿಭಜಿತ ದಕ ಜಿಲ್ಲಾ ಮಟ್ಟದ 20 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಸುಧಾಕರ್ ಬೈಲಕೆರೆ, ಪಾಂಡುರಂಗ ಪಡ್ಡಾಂ ತೀರ್ಪುಗಾರರಾಗಿ ಸಹಕರಿಸಿದರು. ವಿಜೇತಾ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.