ಉಡುಪಿ ಜಿಲ್ಲೆಯಲ್ಲಿ ಎಫ್ ಎಂ ಸುಲಲಿತವಾಗಿ ಸಿಗುವಂತಾಗಲಿ : ವಿಕಾಸ್ ಹೆಗ್ಡೆ
ಕುಂದಾಪುರ: ಎಫ್ ಎಂ ರೇಡಿಯೋಗಳು ಉಡುಪಿ ಜಿಲ್ಲೆಯಲ್ಲೂ ಅತ್ಯಂತ ಉತ್ತಮವಾಗಿ ಕೇಳುಗರಿಗೆ ದೊರೆಯುವಂತೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯರು ಪ್ರಯತ್ನ ಪಡಲಿ ಎಂದು ಎಫ್ ಎಂ ಕೇಳುಗರ ಪರವಾಗಿ ಕುಂದಾಪುರದ ನ್ಯಾಯವಾದಿ ಕೆ. ವಿಕಾಸ್ ಹೆಗ್ಡೆ ಆಗ್ರಹ ಮಾಡಿದ್ದಾರೆ.
ಹಲವಾರು ಎಫ್ ಎಂ ರೇಡಿಯೋ ಚಾನಲ್ ಗಳು ಮಂಗಳೂರಿನಲ್ಲಿ ಪ್ರಾರಂಭವಾಗಿ ಹಲವು ವರ್ಷಗಳೇ ಕಳೆದರೂ ಸಹ ಉಡುಪಿ ಜಿಲ್ಲೆಯಲ್ಲಿ ಮಂಗಳೂರಿನ ಎಫ್ ಎಂ ರೇಡಿಯೋ ತರಂಗಾಂತರಗಳು ಸುಲಲಿತವಾಗಿ ಕೇಳುಗರಿಗೆ ಸಿಗುತ್ತಿಲ್ಲ. ಬ್ರಹ್ಮಾವರದಲ್ಲಿನ ಮಂಗಳೂರು ಆಕಾಶವಾಣಿ ಕೇಂದ್ರವು ಎಫ್ ಎಂ ರೇಡಿಯೋ ತರಂಗಾಂತರಳನ್ನು ಉಡುಪಿ ಜಿಲ್ಲೆಯ ಕೇಳುಗರಿಗೆ ಸುಲಲಿತವಾಗಿ ಸಿಗುವಂತೆ ಮಾಡಬೇಕು ಹಾಗೂ ಇದರಿಂದ ಉಡುಪಿ ಜಿಲ್ಲೆ ಮಾತ್ರವಲ್ಲದೆ ಪಕ್ಕದ ಉತ್ತರ ಕನ್ನಡ ಜಿಲ್ಲೆಯ ಹಾಗೂ ಶಿವಮೊಗ್ಗ ಜಿಲ್ಲೆಯ ಹಲವು ತಾಲ್ಲೂಕುಗಳಿಗೂ ಇದರಿಂದ ಉಪಯುಕ್ತವಾಗುತ್ತದೆ. ಈ ಬಗ್ಗೆ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಕ್ರಮವಹಿಸಬೇಕು ಎಂದು ಎಫ್ ಎಂ ಕೇಳುಗರ ಪರವಾಗಿ ಕುಂದಾಪುರದ ನ್ಯಾಯವಾದಿ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹ ಮಾಡಿದ್ದಾರೆ.