ಉಳ್ಳಾಲ: ಇಂಜಿನ್ ಬಂದ್ ಆಗಿ ಮೀನುಗಾರಿಕಾ ಬೋಟ್ ಪಲ್ಟಿ; ಅಪಾರ ನಷ್ಟ, ಮೀನುಗಾರರು ಪಾರು

Spread the love

ಉಳ್ಳಾಲ: ಇಂಜಿನ್ ಬಂದ್ ಆಗಿ ಮೀನುಗಾರಿಕಾ ಬೋಟ್ ಪಲ್ಟಿ; ಅಪಾರ ನಷ್ಟ, ಮೀನುಗಾರರು ಪಾರು

ಉಳ್ಳಾಲ: ಹಠಾತ್ತನೆ ಇಂಜಿನ್ ಬಂದ್ ಆದ ಪರಿಣಾಮ ಮೀನುಗಾರಿಕಾ ಬೋಟ್ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ ಹೊಡೆದ ಘಟನೆ ಉಳ್ಳಾಲ ಸೀಗ್ರೌಂಡ್‌ನಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಅಶ್ಫಾಕ್ ಎಂಬವರ ಮಾಲಕತ್ವದ ‘ಬುರಾಖ್’ ಹೆಸರಿನ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದೆ. ಈ ಸಂದರ್ಭ ಚಾಲಕ ಸಹಿತ ಬೋಟ್‌ನಲ್ಲಿದ್ದ ಹದಿಮೂರು ಮಂದಿ ಮೀನುಗಾರರು ಈಜಿ ದಡ ಸೇರಿದ್ದಾರೆ.

ಇಂದು ಮುಂಜಾನೆ 2.30 ಗಂಟೆಗೆ ಮಂಗಳೂರಿನ ಧಕ್ಕೆಯಿಂದ ಹದಿಮೂರು ಮಂದಿಯನ್ನು ಹೇರಿಕೊಂಡು ಬೋಟ್ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಉಳ್ಳಾಲ ಸೀಗ್ರೌಂಡ್ ಬಳಿ ಬೋಟ್ ನ ಇಂಜಿನ್ ಹಠಾತ್ತಾಗಿ ಆಫ್ ಆಗಿದೆ. ಇದರಿಂದ ನಿಯಂತ್ರಣ ಕಳಕೊಂಡ ಬೋಟ್ ತೀರ ಪ್ರದೇಶದಲ್ಲಿ ಕಡಲ್ಕೊರೆತದ ತಾತ್ಕಾಲಿಕ ತಡೆಗೆಂದು ಹಾಕಲಾಗಿದ್ದ ಕಲ್ಲುಬಂಡೆಗಳಿಗೆ ಬಡಿದು ಪಲ್ಟಿ ಹೊಡೆದಿದೆ ಎಂದು ಬೋಟ್ ನ ವ್ಯವಸ್ಥಾಪಕ ಖಲೀಲ್ ಮಾಹಿತಿ ನೀಡಿದ್ದಾರೆ.

ಘಟನೆಯಿಂದ ಬೋಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಮೀನಿನ ಬಲೆ,ಇನ್ನಿತರ ಬೆಲೆಬಾಳುವ ಸೊತ್ತು ಸೇರಿ ಸುಮಾರು ಒಂದೂವರೆ ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. .ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments