ಉಳ್ಳಾಲ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Spread the love

ಉಳ್ಳಾಲ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಉಳ್ಳಾಲ: ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಮಾಸ್ತಿಕಟ್ಟೆಯ ನಿವಾಸಿ ಮಹಮ್ಮದ್ ನವಾಝ್ (34) ಬಂಧಿತ ಆರೋಪಿ.

ಬಬ್ಬುಕಟ್ಟೆಯ ಖಾಸಗಿ ಶಾಲೆಯ ಸ್ಕೂಲ್ ಬಸ್ಸು ಚಾಲಕನಾಗಿದ್ದ ನವಾಝ್ ವಿರುದ್ಧ ಆತನ ಮೊದಲ ಪತ್ನಿ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಜೀವನಾಂಶದ ದಾವೆ ಹೂಡಿದ್ದರೆನ್ನಲಾಗಿದೆ. ಪತ್ನಿಗೆ ಜೀವನಾಂಶವನ್ನು ನೀಡದೆ, ತಲೆಮರೆಸಿಕೊಂಡಿದ್ದ ಆರೋಪಿ ನಮಾಝ್‌ ನನ್ನು ಉಳ್ಳಾಲ ಠಾಣೆ ವ್ಯಾಪ್ತಿಯ ಕೋಟೆಕಾರು ಪನೀರು ಸಮೀಪದ ಕಾಯರ್ ಪಳಿಕೆ ಎಂಬಲ್ಲಿನ ಮನೆಯೊಂದರಲ್ಲಿ ಆರೋಪಿ ನವಾಝ್ ಇರುವ ಬಗ್ಗೆ ಖಚಿತ ಪಡಿಸಿದ ಉಳ್ಳಾಲ ಪೊಲೀಸರು ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ. ಪೊಲೀಸರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ನವಾಝ್‌ ನ ತಾಯಿ ಹಾಗೂ ವಕೀಲರ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.


Spread the love