Spread the love
ಎಸ್ ಕೆ ಪಿ ಎ ಉಡುಪಿ ವಲಯದ ವತಿಯಿಂದ ವಿಶ್ವ ಛಾಯಗ್ರಹಣ ದಿನಾಚರಣೆ
ಉಡುಪಿ: ಸೌತ್ ಕೆನರ ಫೋಟೋಗ್ರಾಫರ್ ಅಸೋಸಿಯೇಷನ್ (ರಿ) ಉಡುಪಿ ವಲಯದ ವತಿಯಿಂದ 186 ನೇ ವಿಶ್ವ ಛಾಯಗ್ರಹಣ ದಿನಾಚರಣೆ ಪ್ರಯುಕ್ತ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಪ್ರಸಾದ್ ನೇತ್ರಾಲಯ ಸಹಭಾಗಿತ್ವದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಹಿರಿಯ ಛಾಯಾಗ್ರಾಹಕರಾದ ಪಾಡಿಗಾರು ಲಕ್ಷ್ಮಿನಾರಾಯಣ ಉಪಾಧ್ಯಾಯರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ಡಾ. ಕೃಷ್ಣಪ್ರಸಾದ್ ರವರನ್ನು ಸನ್ಮಾನಿಸಲಾಯಿತು ಮತ್ತು ಸದಸ್ಯರ ಆರೋಗ್ಯಕ್ಕೆ ಸಹಾಯಧನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ವಲಯದ ಅಧ್ಯಕ್ಷರಾದ ಸುಧೀರ್ ಎಂ ಶೆಟ್ಟಿ. ಜಿಲ್ಲಾ ಉಪಾಧ್ಯಕ್ಷರಾದ ಪ್ರವೀಣ್. ಉಡುಪಿ ವಲಯದ ಗೌರವ ಅಧ್ಯಕ್ಷರಾದ ನವೀನ್ ಬಳ್ಳಾಲ್. ಕಾರ್ಯದರ್ಶಿಗಳಾದ ದಿವಾಕರ್ ಹಿರಿಯಡ್ಕ. ರಮೇಶ್ ಭಟ್ ಉಪಸ್ಥರಿದ್ದರು.
ಶಿಬಿರದಲ್ಲಿ 70ಕ್ಕೂ ಮಿಕ್ಕಿ ಸದಸ್ಯರು ಭಾಗವಹಿಸಿದ್ದರು.
Spread the love