ಎಸ್.ಕೆ.ಪಿ.ಎ. ಕುಂದಾಪುರ ವಲಯ ಸಮಿತಿ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ
ಕುಂದಾಪುರ : ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಶಿಯೇಶನ್ ಕುಂದಾಪುರ ತಾಲೂಕು ಸಮಿತಿ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಆಗಮಿಸಿದ ಹೆಸರಾಂತ ಛಾಯಾಗ್ರಾಹಕ ಗುರುದತ್ ಕಾಮತ್ ಅವರು ವಿಶ್ವ ಛಾಯಾಗ್ರಹಣ ದಿನಾಚರಣೆ ಶುಭಾಶಯಗಳನ್ನು ತಿಳಿಸುವುದರೊಂದಿಗೆ ಛಾಯಾಗ್ರಹಣವಿಲ್ಲ ದ ಪ್ರಪಂಚವನ್ನು ನಾವಿಂದು ಊಹಿಸಲೂ ಸಾಧ್ಯವಿಲ್ಲ. ಇತಿಹಾಸ ದಾಖಲೀಕರಣಕ್ಕೆ ಛಾಯಾಚಿತ್ರ ಮಾಧ್ಯಮ ಅತ್ಯಗತ್ಯ. ವೃತ್ತಿಯಲ್ಲಿ ಸೇವಾ ಮನೋಭಾವ ದೊಂದಿಗೆ ವ್ಯವಹರಿಸಿದರೆ ಯಶಸ್ಸು ಖಂಡಿತ ಎಂದರು. ಇದೇ ವೇಳೆ ಗುರುದತ್ ಕಾಮತ್ ಅವರು ಗೋಡೆ ವೀಡಿಯೊ ಸೆಂಟರ್ ಕುಂದಾಪುರ ಇವರ ವೆಬ್ಸೈಟನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಎಸ್ ಕೆ ಪಿ ಎ ಕುಂದಾಪುರ ವಲಯದ ಪದಾಧಿಕಾರಿಗಳಾದ ಅಶೋಕ್ ಶೆಟ್ಟಿ, ಪ್ರಮೋದ್ ಅಂಚನ್, ಗಣೇಶ್ ಬೆನಕ, ಫೋರ್ತ್ ಫೋಕಸ್ ವೆಬ್ಸೈಟ್ ವಿನ್ಯಾಸ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕರೂ ಆದ ಗೌತಮ್ ನಾವಡ, ಗೋಡೆ ವೀಡಿಯೋ ಇದರ ದಿನೇಶ್ ಗೋಡೆ ಉಪಸ್ಥಿತರಿದ್ದರು.