ಕಲಾಪ್ರತಿಭೋತ್ಸವ: ಅರ್ಜಿ ಆಹ್ವಾನ

Spread the love

ಕಲಾಪ್ರತಿಭೋತ್ಸವ: ಅರ್ಜಿ ಆಹ್ವಾನ

ಮಂಗಳೂರು: ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಮಕ್ಕಳು ಮತ್ತು ಯುವಜನರಲ್ಲಿರುವ ಕಲಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಉತ್ತೇಜನ ನೀಡುವ ಮತ್ತು ಅವರು ತಮ್ಮ ಕಲಾ ನೈಪುಣ್ಯವನ್ನು ವೃದ್ಧಿಗೊಳಿಸುವಂತೆ ಪ್ರೋತ್ಸಾಹಿಸಲು ಕಲಾಪ್ರತಿಭೋತ್ಸವವನ್ನು ಏರ್ಪಡಿಸಿದ್ದು, ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ.

ಬಾಲಪ್ರತಿಭೆ, ಕಿಶೋರ ಪ್ರತಿಭೆ, ಯುವಪ್ರತಿಭೆ
1) ಬಾಲ ಪ್ರತಿಭೆ : 8 ವರ್ಷ ತುಂಬಿರಬೇಕು ಹಾಗೂ 14 ವರ್ಷದ ಒಳಗಿರಬೇಕು.
2) ಕಿಶೋರ ಪ್ರತಿಭೆ : 14 ವರ್ಷ ತುಂಬಿರಬೇಕು 18 ವರ್ಷದ ಒಳಗಿರಬೇಕು.
3) ಯುವ ಪ್ರತಿಭೆ : 18 ವರ್ಷ ತುಂಬಿರಬೇಕು, ಹಾಗೂ 30 ವರ್ಷಕ್ಕಿಂತ ಕಡಿಮೆ ಇರಬೇಕು.
4) ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ, ಸ್ಥಾನ ಪಡೆದವರನ್ನು ವಲಯಮಟ್ಟಕ್ಕೆ ಕಳುಹಿಸಿ ಕೊಡಲಾಗುತ್ತದೆ. ವಲಯಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.(ಜಿಲ್ಲಾ ಮತ್ತು ವಲಯ ಮಟ್ಟದಲ್ಲಿ ಯಾವುದೇ ನಗದು ಪುರಸ್ಕಾರ ಇರುವುದಿಲ್ಲ, ವಲಯ ಮತ್ತು ರಾಜ್ಯ ಮಟ್ಟದಲ್ಲಿ ಭಾಗವಹಿಸುವವರಿಗೆ ಪ್ರಯಾಣ ವೆಚ್ಚವನ್ನು ನೀಡಲಾಗುತ್ತದೆ.)

ಜಿಲ್ಲಾ ಮಟ್ಟದ ಸ್ಪರ್ಧೆಯು ನಡೆಯುವ ದಿನಾಂಕವನ್ನು ತಿಳಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ವಯಸ್ಸಿನ ದೃಢೀಕರಣಕ್ಕಾಗಿ ದಾಖಲೆಗಳನ್ನು ತಾವು ವ್ಯಾಸಂಗ ಮಾಡುತ್ತಿರುವ ವಿದ್ಯಾ ಸಂಸ್ಥೆಯಿಂದ ಪಡೆದು ಅರ್ಜಿಯ ಜೊತೆಗೆ (ಅರ್ಜಿಗೆ ನಿಗದಿತ ನಮೂನೆ ಇರುವುದಿಲ್ಲ: ಬಿಳಿ ಹಾಳೆಯಲ್ಲಿ ಸ್ವವಿವರಗಳನ್ನು ಬರೆದಿರಬೇಕು.) ಲಗತ್ತಿಸಬೇಕು. ಚಿತ್ರಕಲಾ ಸ್ಪರ್ಧಿಗಳು ತಮಗೆ ಬೇಕಾದ ಬಣ್ಣ ಇತ್ಯಾದಿಗಳನ್ನು ತಾವೇ ತರಬೇಕು.

ನೃತ್ಯ ಪ್ರದರ್ಶನವನ್ನು ಲೈವ್ ಅಥವಾ ರೆಕಾರ್ಡ್ ಮೂಲಕ ಪ್ರದರ್ಶಿಸಬಹುದು (ಸ್ಪರ್ಧಿಗಳು ಪೆನ್ ಡ್ರೈವ್, ಅಥವಾ ಸಿ. ಡಿ.ಯನ್ನು ತಾವೇ ತರುವುದು, ಮೊಬೈಲ್ಗೆ ಜಾಕ್ ಸೌಲಭ್ಯವನ್ನು ಒದಗಿಸಲಾಗುತ್ತದೆ.) ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಒಬ್ಬರಿಗೆ ಒಂದು ಕಲಾ ಪ್ರಕಾರದಲ್ಲಿ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ.

ಶಾಲಾ ಮುಖ್ಯಸ್ಥರು ತಮ್ಮ ಶಾಲಾ ಮೂಲಕ ಸ್ಪರ್ಧಿಗಳು ಅರ್ಜಿ ಸಲ್ಲಿಸುವಾಗ ಪ್ರತಿ ಪ್ರಕಾರ (ಸಂಗೀತ, ನೃತ್ಯ ಇತರೆ) ಹಾಗೂ ಪ್ರತಿ ವಿಭಾಗದ ಸ್ಪರ್ಧಿಗಳ ಜನ್ಮ ದಿನಾಂಕವನ್ನು ದೃಢೀಕರಿಸಿ, ಪಟ್ಟಿಯನ್ನು ಪ್ರತ್ಯೇಕವಾಗಿ ಕಳುಹಿಸುವುದು, ಖಾಸಗಿ ಸ್ಪರ್ಧಿಯಾಗಿದ್ದಲ್ಲಿ ಶಾಲಾ ಕಾಲೇಜಿನ ಜನ್ಮ ದಿನಾಂಕ ದೃಢೀಕರಣ ಪತ್ರ ಅಥವಾ ಪಂಚಾಯತ್, ಪುರಸಭೆ, ನಗರಸಭೆಗಳಿಂದ ನೀಡುವ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ರಾಜ್ಯಮಟ್ಟದ ಸ್ಪರ್ಧಿಗಳಲ್ಲಿ ಪ್ರತಿ ಪ್ರಕಾರದಲ್ಲೂ ಪ್ರಥಮ, ದ್ವಿತೀಯ, ಹಾಗೂ ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನವಾಗಿ ತಲಾ ರೂ. 15,000, ರೂ. 10,000, ರೂ. 7,500 ನಗದು ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ. ಯುವ ಪ್ರತಿಭೆ ಸ್ಪರ್ಧೆಯ ಸಮೂಹ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡದ ಸದಸ್ಯರ ಸಂಖ್ಯೆ ಕನಿಷ್ಠ 10 ಇರಬೇಕು ಮತ್ತು ಗರಿಷ್ಠ 15 ನ್ನು ಮೀರಬಾರದು. ರಾಜ್ಯಮಟ್ಟದ ಅಂತಿಮ ಸಮೂಹ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳಿಗೆ (ತಂಡಕ್ಕೆ) ಕ್ರಮವಾಗಿ ರೂ.50000, ರೂ.40000 ಹಾಗೂ ರೂ.30000 ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಬಾಲಪ್ರತಿಭೆ/ ಕಿಶೋರ ಪ್ರತಿಭೆ: ಏಕ ವ್ಯಕ್ತಿ ಸ್ಪರ್ಧೆಯ ಕಲಾ ಪ್ರಕಾರಗಳ ವಿವರ: ಶಾಸ್ತ್ರೀಯ ನೃತ್ಯ-10 ನಿಮಿಷ, ಸುಗಮ ಸಂಗೀತ – 7 ನಿಮಿಷ, ಚಿತ್ರಕಲೆ- 120 ನಿಮಿಷ, ಜನಪದ ಗೀತೆ -7 ನಿಮಿಷ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ-7 ನಿಮಿಷ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ-7 ನಿಮಿಷ.

ಯುವಪ್ರತಿಭೆ ಸ್ಪರ್ಧೆಯ ಏಕ ವ್ಯಕ್ತಿಯ ಕಲಾ ಪ್ರಕಾರಗಳ ವಿವರ: ನನ್ನ ಮೆಚ್ಚಿನ ಸಾಹಿತಿ (ಆಶುಭಾಷಣ) -7 ನಿಮಿಷ, ಶಾಸ್ತ್ರೀಯ ನೃತ್ಯ -10 ನಿಮಿಷ, ಸುಗಮ ಸಂಗೀತ- 7 ನಿಮಿಷ, ಕರ್ನಾಟಕ/ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ-7 ನಿಮಿಷ, ಚಿತ್ರಕಲೆ -120 ನಿಮಿಷ, ಕರ್ನಾಟಕ/ ಹಿಂದೂಸ್ತಾನಿ ವಾದ್ಯ ಸಂಗೀತ-7 ನಿಮಿಷ, ಯುವ ಪ್ರತಿಭೆ ವಿಭಾಗದ ಸಮೂಹ ಸ್ಪರ್ಧೆಗಳು: ನಾಟಕ- 45 ನಿಮಿಷ.

ಸ್ಪರ್ಧೆಗಳಿಗೆ ಭಾಗವಹಿಸುವವರು ಅರ್ಜಿಯನ್ನು ಅಕ್ಟೋಬರ್ 28 ರೊಳಗಾಗಿ ನಗರದ ಉರ್ವಾಸ್ಟೋರ್ ತುಳು ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಛೇರಿಗೆ ಅಂಚೆಯ ಮೂಲಕ ಅಥವಾ ಖುದ್ದಾಗಿ ಭೇಟಿ ನೀಡಿ (ದೂರವಾಣಿ : 0824-2951327) ಸಲ್ಲಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments