ಜೂನ್‌ನಲ್ಲಿ ರಾಜಕೀಯ ಶಿಕ್ಷಣ ಒದಗಿಸುವ ಕಾಲೇಜ್ ಆರಂಭ: ಬಸವರಾಜ ಹೊರಟ್ಟಿ

Spread the love

ಜೂನ್‌ನಲ್ಲಿ ರಾಜಕೀಯ ಶಿಕ್ಷಣ ಒದಗಿಸುವ ಕಾಲೇಜ್ ಆರಂಭ: ಬಸವರಾಜ ಹೊರಟ್ಟಿ

ಮಂಗಳೂರು : ಡಾ.ಶಿವರಾಮ ಕಾರಂತರು ನೇರ ನಡೆ ನುಡಿಯ ಸಾಹಿತಿ. ಅವರ ಹೆಸರಲ್ಲಿ ನೀಡಿದ ಪ್ರಶಸ್ತಿಯು ತಮಗೆ ಈ ವರೆಗೆ ಸಿಕ್ಕಿದ ಎಲ್ಲ ಪ್ರಶಸ್ತಿಗಳಿಗಿಂತಲೂ ದೊಡ್ಡದು ಎಂದು ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಕಲ್ಕೂರ ಪ್ರತಿಷ್ಠಾನದ ವತಿಯಿಮದ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ನಡೆದ ಕಾರಂತ ಹುಟ್ಟು ಹಬ್ಬ- ಸಂಸ್ಮರಣಾ ಕಾರ್ಯಕ್ರಮದಲ್ಲಿ ‘ಕಾರಂತ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.

ಇವತ್ತು ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಕಾರಂತರಂತಹ ಶ್ರೇಷ್ಠ ಸಾಹಿತಿಗಳ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಹೆಚ್ಚು ಮೌಲ್ಯ ಇರುವಂತದ್ದು, ಕಾರಂತರ ಆನೇಕ ಕಾದಂಬರಿಗಳನ್ನು ಓದಿದ್ದೇನೆ. ಅವರ ಮೇಲಿನ ಅಭಿಮಾನದಿಂದಾಗಿ ಅವರ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಕೊಂಡು ಬಂದಿದ್ದೇನೆ ಎಂದರು.

ಶಿವರಾಮ ಕಾರಂತರು ಸಾಹಿತ್ಯದಲ್ಲಿ ಮಾಡಿದಷ್ಟು ಕೆಲಸವನ್ನು ಯಾರಿಗೂ ಮಾಡಲು ಸಾಧ್ಯವಿಲ್ಲ ಎಂದು ಅವರು ಶ್ಲಾಘಿಸಿದರು.

ನಿತ್ಯ ಸಭಾಪತಿ ಹೊರಟ್ಟಿ: ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹಂಪಿ ವಿವಿಯ ವಿಶ್ರಾಂತ ಉಪಕುಲಪತಿ , ಹಿರಿಯ ಸಾಹಿತಿ ಡಾ. ಬಿ.ಎ.ವಿವೇಕ ರೈ ಅವರು ಮಾತನಾಡಿ‘ ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕ ದಲ್ಲಿ ಆನೇಕ ಮನೆಗಳಿಗೆ ಬೆಳಕು ತೋರಿಸಿದವರು. ಐದು ದಶಕಗಳ ರಾಜಕಾರಣದಲ್ಲಿ ಕಪ್ಪುಚುಕ್ಕೆ ಇಲ್ಲದ ಪ್ರಾಮಾಣಿಕ ವ್ಯಕ್ತಿ. ನಡೆನುಡಿಯಲ್ಲಿ ಮೌಲ್ಯವನ್ನು ಕಾಪಾಡಿಕೊಂಡವರು. ಅವರೊಬ್ಬ ‘ ನಿತ್ಯ ಸಭಾಪತಿ’ . ಶಿಕ್ಷಣದ ಮಹಾಮೇಧಾವಿ ಹೊರಟ್ಟಿಗೆ ಕಾರಂತ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ ಎಂದು ಬಣ್ಣಿಸಿದರು.

ಕಾರಂತ ಸಂಸ್ಮರಣೆ ಮಾಡಿದ ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅವರು ‘ ಕಾರಂತರು ಸಾಹಿತ್ಯಕ್ಕೆ ಮಾತ್ರವಲ್ಲ ಯಕ್ಷಗಾನಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಯಕ್ಷಗಾನದ ಆಚಾರ್ಯ ಪುರುಷರು. ಕಟುವಾದ , ಸ್ಪಷ್ಟವಾದ ಧೋರಣೆಯ ಕಾರಂತರು ಕಳೆದ ಶತಮಾನದ ಧ್ವನಿಯಾಗಿದ್ದರು. ಅವರ ಬದುಕೇ ಬೆಳಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಮಂಗಳೂರು ನಗರದ ದಕ್ಷಿಣ ಕ್ಷೇತ್ರದ ಶಾಕ ಡಿ.ವೇದವ್ಯಾಸ್ ಕಾಮತ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕಾರಂತ ಹೆಸರಲ್ಲಿ ನಡೆಸಲಾದ ಪ್ರಬಂಧ ಸ್ಪರ್ಧೆ ವಿಜೇತರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಬಹುಮಾನ ವಿತರಿಸಿದರು. ಚಿತ್ರ ಸ್ಪರ್ಧೆ ವಿಜೇತರಿಗೆ ಸಂತ ಅಲೋಶಿಯೆಸ್ ಪ್ರೌಢಶಾಲೆಯ ಪ್ರಾಂಶುಪಾಲ ಫಾ. ಜಾನ್‌ಸನ್ ಪಿಂಟೊ ಎಸ್.ಜೆ. ವಿತರಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು , ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಹಿರಿಯ ಸಾಹಿತಿ ಡಾ.ಲೀಲಾ ಉಪಾಧ್ಯಾಯ, ದ.ಕ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಮುಂಬೈನ ಅಂತರ್‌ರಾಷ್ಟ್ರೀಯ ಕೇಶ ವಿನ್ಯಾಸಗಾರ ಡಾ.ಶಿವರಾಮ ಕೆ. ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿ ವಂದಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ವರ್ಷದ ಜೂನ್‌ನಲ್ಲಿ ರಾಜಕೀಯ ಶಿಕ್ಷಣ ಒದಗಿಸುವ ಕಾಲೇಜ್ ಆರಂಭ: ಬಸವರಾಜ ಹೊರಟ್ಟಿ

ಮಾಲ್ಯಾಧಾರಿತ ರಾಜಕಾರಣದ ಶಿಕ್ಷಣ ನೀಡುವ ಕರ್ನಾಟಕ ವಿಧಾನ ಮಂಡಲದ ವತಿಯಿಂದ ಆರಂಭಿಸಲು ಉದ್ದೇಶಿಸಲಾಗಿರುವ ಮೂರು ವರ್ಷಗಳ ರಾಜಕೀಯ ಪದವಿ ಕಾಲೇಜ್ 2026ರ ಜೂನ್‌ನಲ್ಲಿ ಪ್ರಾರಂಭಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.  ರಾಜಕೀಯ ಪದವಿ ತರಗತಿಗಳಿಗೆ ಸಂಬಂಧಿಸಿ ಪಠ್ಯ ಕ್ರಮ ತಯಾರಿಸಲು ತಜ್ಞರನ್ನು ಕೇಳಿಕೊಳ್ಳಲಾಗಿದೆ. ಹಿರಿಯ ರಾಜಕೀಯ ಮುತ್ಸದ್ದಿಗಳು, ರಾಜಕೀಯ ತಜ್ಞರು, ನಿವೃತ್ತ ಪ್ರಾಧ್ಯಾಪಕರು ಪಠ್ಯಕ್ರಮವನ್ನು ರೂಪಿಸಲಿದ್ದಾರೆ. ಈ ಬಗ್ಗೆ ಒಂದು ತಿಂಗಳಿನ ಒಳಗಾಗಿ ಸ್ಪಷ್ಟ ಚಿತ್ರಣ ಲಭಿಸಲಿದೆ ಎಂದು ಮಾಹಿತಿ ನೀಡಿದರು.

ತಾನು ಮತ್ತು ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಅವರು ಈ ಬಗ್ಗೆ ಚರ್ಚೆ ನಡೆಸಿ , ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮಾತನಾಡಿದ್ದೇವೆ. ಅವರು ಸರಕಾರದ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ ಎಂದರು.

ಮಾಧ್ಯಮ ಶಾಲೆಗಳು ಬಡವಾಗುತ್ತಿವೆ. ಸರಕಾರ ನಡೆಸುವವರು ತೆಗೆದುಕೊಳ್ಳುವ ತೀರ್ಮಾನವೂ ಇದಕ್ಕೆ ಕಾರಣವಾಗಿದೆ. ಅಧ್ಯಾಪಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುತ್ತಿಲ್ಲ ಅವರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ ಎಂಬ ಆರೋಪವು ಇದೆ ಎಂದರು.

ಹೆಚ್ಚು ಅನುಭವ ಇರುವವರಿಗೆ ಶಿಕ್ಷಣ ಖಾತೆಯ ಹೊಣೆ ನೀಡಿದರೆ ಉತ್ತಮ. ನಾನು ಶಿಕ್ಷಣ ಸಚಿವನಾಗಿದ್ದಾಗ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುತ್ತಿದ್ದ ರಾಜ್ಯದ 417 ಶಾಲೆಗಳನ್ನು ಬಂದ್ ಮಾಡಿಸಿದ್ದೆ. ಆಗ 17 ಮಂದಿ ಶಾಸಕರು ತನ್ನ ವಿರುದ್ಧ ಹೋರಾಟ ನಡೆಸಿದ್ದರು. ಈಗ ಕನ್ನಡ ಮಾಧ್ಯಮಕ್ಕೆ ಅನು ಮತಿ ಪಡೆದು ಇಂಗ್ಲಿಷ್ ಮಾಧ್ಯಮ ನಡೆಸುವ ಶಾಲೆಗಳೂ ನಮ್ಮಲ್ಲಿ ಇವೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರವೂ ಜಾಸ್ತಿಯಾಗಿದೆ ’ಎಂದು ಹೇಳಿದರು.

ವಿಶ್ವವಿದ್ಯಾನಿಲಯಗಳಲ್ಲಿ ಗೆಸ್ಟ್ ಲೆಕ್ಚರ್‌ಗಳೇ ತುಂಬಿಕೊಂಡಿದ್ದಾರೆ. ರಾಜ್ಯದಲ್ಲಿ 29 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. 1,900 ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು ಇದ್ದಾರೆ. ಶಿಕ್ಷಣ ಇಲಾಖೆಯ ಸುಧಾರಣೆಗೆ ಸಚಿವ ಮಧು ಬಂಗಾರಪ್ಪ ಅವರು ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ ಎಂದರು.


Spread the love
Subscribe
Notify of

0 Comments
Inline Feedbacks
View all comments