ನವೆಂಬರ್ 25 ರಂದು ಸಾಣೂರು-ಬಿಕರ್ನಕಟ್ಟೆ ಹೆದ್ದಾರಿ ಭೂ ಸ್ವಾಧೀನ – ಪರಿಹಾರ ಪಾವತಿ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸಾಣೂರು-ಬಿಕರ್ನಕಟ್ಟೆ ವಿಭಾಗದ ರಸ್ತೆ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನಿನ ಮಾಲಿಕರೀಗೆ ಪರಿಹಾರ ಪಾವತಿ ಹಾಗೂ ಕ್ಲೈಮ್‍ಗಳನ್ನು ಪಡೆಯುವ ಅದಾಲತ್ ಕಾರ್ಯಕ್ರಮ ನವೆಂಬರ್ 25 ರಂದು ಬೆಳಿಗ್ಗೆ 10.30 ಗಂಟೆಗೆ ಗುರುಪುರ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಹಾಗೂ ನವೆಂಬರ್ 29 ರಂದು ಮೂಡಬಿದ್ರೆ ತಾಲೂಕು ಆಡಳಿತ ಸೌಧ ಸಭಾಭವನದಲ್ಲಿ ನಡೆಯಲಿದೆ.
ತೆಂಕ ಎಡಪದವು, ಬಡಗ ಎಡಪದವು, ಬಡಗ ಉಳಿಪಾಡಿ, ತೆಂಕ ಉಳಿಪಾಡಿ, ಮೂಡುಪೆರಾರು, ಮೂಳೂರು, ಅಡ್ಡೂರು, ತಿರುವೈಲು, ಕುಡುಪು ಹಾಗೂ ಸಾಣೂರು, ಬೆಳುವಾಯಿ, ಪಡುಮಾರ್ನಾಡು, ಮಾರ್ಪಾಡಿ, ಪುತ್ತಿಗೆ, ಬಡಗಮಿಜಾರು, ತೆಂಕಮಿಜಾರು, ತೋಡಾರು ಗ್ರಾಮಗಳ ಜಮೀನಿನ ಮಾಲೀಕರು ಪರಿಹಾರ ಮೊತ್ತವನ್ನು ಪಡೆಯಬಹುದು.
ಅದಾಲತ್ ಕಾರ್ಯಕ್ರಮದಲ್ಲಿ ಪರಿಹಾರ ಪಡೆಯಲು ಕ್ಲೈಮ್ ಸಲ್ಲಿಸದ ಭೂ ಮಾಲಿಕರು ಅವಾರ್ಡು ನೋಟೀಸಿನಲ್ಲಿ ತಿಳಿಸಿರುವ ದಾಖಲೆಗಳೊಂದಿಗೆ ಹಾಜರಾಗಿ ಕ್ಲೈಮ್ ಸಲ್ಲಿಸುವಂತೆ ಹಾಗೂ ಈಗಾಗಲೆ ಕ್ಲೈಮ್ ಸಲ್ಲಿಸಿದ ಭೂ ಮಾಲಿಕರು ಹಾಜರಾಗಿ ಅಗತ್ಯ ದಾಖಲೆಗಳಿಗೆ ಸಹಿಮಾಡಬೇಕು.
ಈ ಅದಾಲತ್ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂ ಸಂತ್ರಸ್ತರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಮುಹಮ್ಮದ್ ಇಸಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













