ಬಂಟ್ವಾಳ: ಪಿ.ಎಸ್‌.ಐ ಖೀರಪ್ಪ ಆತ್ಮಹತ್ಯೆ

Spread the love

ಬಂಟ್ವಾಳ: ಪಿ.ಎಸ್‌.ಐ ಖೀರಪ್ಪ ಆತ್ಮಹತ್ಯೆ

ಬಂಟ್ವಾಳ : ಬಂಟ್ವಾಳ ನಗರ ಠಾಣೆಯ ಪಿ.ಎಸ್‌.ಐ (ಕ್ರೈಮ್ ವಿಭಾಗ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ರವಿವಾರ ಸಂಜೆ ಬೆಳಕಿಗೆ ಬಂದಿದೆ.

ಮೃತ ಪೊಲೀಸ್ ಅಧಿಕಾರಿಯನ್ನು ಉತ್ತರ ಕನ್ನಡ ಮೂಲದ ಖೀರಪ್ಪ (54) ಎಂದು ಗುರುತಿಸಲಾಗಿದೆ.

ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕಳೆದ ನಾಲ್ಕು ತಿಂಗಳುಗಳಿಂದ ತನಿಖಾ ಪಿ.ಎಸ್‌.ಐ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಖೀರಪ್ಪ (55) ಎಂಬವರು, ಅವರ ವೈಯಕ್ತಿಕ ಹಾಗೂ ಹಣಕಾಸಿನ ಸಮಸ್ಯೆಗಳಿಂದ ದಿನಾಂಕ 20.07.2025 ರಂದು ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿ ಆ ಬಳಿಕ ಬಂಟ್ವಾಳದಲ್ಲಿ ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಸದ್ರಿಯವರು ಉತ್ತರ ಕನ್ನಡದ ಕಾರವಾರ ಮೂಲದವರಾಗಿದ್ದು, ದಿನಾಂಕ 19.07.2025 ರಂದು ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸಿ, ಇಂದು ಕರ್ತವ್ಯಕ್ಕಾಗಿ ಠಾಣೆಯಿಂದ ದೂರವಾಣಿ ಕರೆ ಮಾಡಿದಾಗ ಸ್ಪಂದಿಸದ ಹಿನ್ನೆಲೆಯಲ್ಲಿ, ಠಾಣಾ ಸಿಬ್ಬಂದಿಗಳು ಮನೆಗೆ ತೆರಳಿ ಪರಿಶೀಲಿಸಿದಾಗ ಪ್ರಕರಣ ತಿಳಿದುಬಂದಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ


Spread the love