ಬಿಜೆಪಿ ಮುಖಂಡನ ಹೇಯ ಕೃತ್ಯಕ್ಕೆ ಬಿಜೆಪಿ ಪಕ್ಷದ ನಿಲುವೇನು? – ಕೆ. ವಿಕಾಸ್ ಹೆಗ್ಡೆ
ಕುಂದಾಪುರ ವಿಧಾನ ಸಭಾ ಕ್ಷೇತ್ರದ ಅಮವಾಸೆಬೈಲ್ ನಲ್ಲಿ ಬಿಜೆಪಿ ಮುಖಂಡ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ನವೀನ್ ಚಂದ್ರ ಶೆಟ್ಟಿ ರಟ್ಟಾಡಿ ಎನ್ನುವವರು ತನ್ನ ಮನೆಗೆ ಕರ್ತವ್ಯ ನಿಮಿತ್ತ ಬಂದ ವಿವಾಹಿತ ಯುವತಿಯ ಮಾನಭಂಗಕ್ಕೆ ಪ್ರಯತ್ನಿಸಿದ್ದು ಒಂದು ಗಂಭೀರ ಹಾಗೂ ನಾಗರೀಕ ಸಮಾಜ ಒಪ್ಪದೇ ಇರುವ ಪ್ರಕರಣ ವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕುಂದಾಪುರ ಕಾಂಗ್ರೆಸ್ ಪಕ್ಷ ಈ ವಿಚಾರದಲ್ಲಿ ರಾಜಕೀಯ ಮಾಡಲು ಇಚ್ಚಿಸುವುದಿಲ್ಲ ಆದರೆ ಬಿಜೆಪಿ ಮುಖಂಡರು ಒಮ್ಮೆ 1999 ರ ಹಿಂದೆ ಕುಂದಾಪುರದಲ್ಲಿ ಕಾಂಗ್ರೆಸ್ ಶಾಸಕರು ಇರುವಾಗ ಎಲ್ಲಾ ಘಟನೆಗಳಿಗೆ ಹೇಗೆ ರಾಜಕೀಯ ಮಾಡುತ್ತಿದ್ದರು ಎನ್ನುವುದನ್ನು ನೆನಪಿಸಿ ಕೊಳ್ಳುವುದು ಉತ್ತಮ ಆದರೆ ನಾವು ಅಂತಾ ರಾಜಕಾರಣ ಮಾಡುವುದಿಲ್ಲ ಆದರೆ ನಮ್ಮ ಪ್ರಶ್ನೆ ಈ ಗಂಭೀರ ಪ್ರಕರಣ ಕುಂದಾಪುರ ಶಾಸಕರ ಸ್ವಂತ ಊರಿನಲ್ಲಿ ಆಗಿದ್ದು, ಪ್ರಕರಣದ ಆರೋಪಿ ಶಾಸಕರ ಆತ್ಮೀಯ ಕೂಡ ಆದುದರಿಂದ ಈ ಪ್ರಕರಣದ ಕುರಿತು ಕುಂದಾಪುರ ಶಾಸಕರು ಹಾಗೂ ಬಿಜೆಪಿ ಪಕ್ಷ ಮೌನವನ್ನು ಮುರಿದು ಜನತೆಗೆ ಅವರ ನಿಲುವಿನ ಬಗ್ಗೆ ಸ್ಪಷ್ಟ ಪಡಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗೃಹಿಸಿದ್ದಾರೆ.