ಬೆಂಗಳೂರು: ಪೋಕ್ಸೊ ಪ್ರಕರಣದ ಆರೋಪಿಗೆ 24 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

Spread the love

ಬೆಂಗಳೂರು: ಪೋಕ್ಸೊ ಪ್ರಕರಣದ ಆರೋಪಿಗೆ 24 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಂಗಳೂರು: ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಾಸವಾಗಿದ್ದ ಸುಮಾರು 32 ವರ್ಷ ವಯೋಮಾನದ ಆರೋಪಿ ದಿನೇಶ್ ಎಂಬಾತನು ಬೆಂಗಳೂರು ನಗರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ರಿಸರ್ವೇಶನ್ ಕೌಂಟರ್ ಬಳಿ ವಾಸವಾಗಿದ್ದ ದಿನಾಂಕ 10.10.2020 ರಂದು ರಾತ್ರಿ ಸುಮಾರು 11-00 ಗಂಟೆ ಸಮಯದಲ್ಲಿ ಮಳೆ ಬರುತ್ತಿದ್ದರಿಂದ ತನ್ನ ತಂದೆ ತಾಯಿಯೊಂದಿಗೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ರಿಸರ್ವೇಷನ್ ಬುಕಿಂಗ್ ಕೌಂಟರ್ನ ಕಟ್ಟಡದಲ್ಲಿ ಗಾಢ ನಿದ್ರೆಯಲ್ಲಿ ಮಲಗಿದ್ದ ಲೈಂಗಿಕ ಹಲ್ಲೆಗೆ ಒಳಗಾದ ಅಪ್ರಾಪ್ತ ನೊಂದ ಬಾಲಕಿಯ ಬಾಯಿಯನ್ನು ಮುಚ್ಚಿ ಎತ್ತಿಕೊಂಡು ಹೋಗಿ ಶ್ರೀರಾಂಪುರ ಠಾಣಾ ವ್ಯಾಪ್ತಿಯ ಬ್ರಿಟಾನಿಯಾ ಫ್ಯಾಕ್ಟರಿ ಬಳರುವ ಚಿಕ್ಕದಾಗಿರುವ ತಗಡಿನ ಡಬ್ಬದ ಪಕ್ಕದಲ್ಲಿ ಮಲಗಿಸಿ ಲೈಂಗಿಕ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿರುವ ಬಗ್ಗೆ ಶ್ರೀರಾಂಪುರ ಪೋಲಿಸ್ ಠಾಣೆ ಮೊ.ಸಂ.113/2020 ರಲ್ಲಿ ಪೋಕೋ ಕಾಯ್ದೆ-2012 ದಾಖಲಾಗಿದ್ದು, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಶೂಟ್ಔಟ್ ಮಾಡುವ ಮೂಲಕ ದಸ್ತಗಿರಿಪಡಿಸಿ, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿರುತ್ತದೆ.

ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮಾನ್ಯ 2ನೇ ಎಫ್.ಟಿ.ಎಸ್ ನ್ಯಾಯಾಲಯವು ಆರೋಪಿಗೆ ಪೋಕೋ ಕಾಯ್ದೆ ಅಡಿಯಲ್ಲಿನ ಕಲಂ 6 ರಲ್ಲಿನ ಅಪರಾಧಕ್ಕೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು ರೂ. 1 ಲಕ್ಷ ಮೊತ್ತದ ಅಡಿ ದಂಡವನ್ನು ಹಾಗೂ ಕಲಂ 366 ರಡಿಯಲ್ಲಿ ಅಪಹರಣ ಆರೋಪದಡಿ 4 ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ರೂಪಾಯಿಗಳ ಗಳ ದಂಡ ವಿಧಿಸಿ ಆದೇಶ ಹೊರಡಿಸಿದ್ದು, ಜೊತೆಗೆ Victim’s Compensation Fund (Karnataka Victim Compensation Scheme 2011 ಈ ಪ್ರಕರಣದ ಅಪ್ರಾಪ್ತ ನೊಂದ ಬಾಲಕಿಗೆ ರೂ. 5 ಲಕ್ಷ ಮೊತ್ತದ ಪರಿಹಾರ ಮೊತ್ತವನ್ನು ಈ ಆದೇಶ ಹೊರಡಿಸಿದ 30 ದಿನಗಳ ಒಳಗೆ ನೀಡುವಂತೆ ತೀರ್ಪು ನೀಡಿರುತ್ತದೆ.

ಈ ಪ್ರಕರಣದಲ್ಲಿ ಅಭಿಯೋಗದ ಪರವಾಗಿ 2ನೇ ಎಫ್.ಟಿ.ಎಸ್.ಸಿ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ  ಎ.ವಿ.ಮಧುರವರು ಸಾಕ್ಷಿಗಳ ವಿಚಾರಣೆ ನಡೆಸಿದ್ದು, ಜಹೀದಾ ಬಾನು ಡಿ. ಕನ್ನೊಳ್ಳಿ ರವರು ವಾದ ಮಂಡಿಸಿದ್ದರು. ಪ್ರಕರಣದ ತನಿಖೆಯನ್ನು ರಾಂಪುರ ಪೊಲೀಸ್ ಠಾಣೆಯ ಹಿಂದಿನ ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿದ್ದ ಸುನಿಲ್ ವೈ. ನಾಯಕ್ ಅವರು ತನಿಖೆ ಕೈಗೊಂಡು ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments