ಮಂಗಳೂರಿನಲ್ಲಿ ಅಬಕಾರಿ ದಾಳಿ: ನಕಲಿ ವೈನ್ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತು ಜಪ್ತಿ

Spread the love

ಮಂಗಳೂರಿನಲ್ಲಿ ಅಬಕಾರಿ ದಾಳಿ: ನಕಲಿ ವೈನ್ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತು ಜಪ್ತಿ

ಮಂಗಳೂರು: ಮಂಗಳೂರು ದಕ್ಷಿಣ ವಲಯ-1 ವ್ಯಾಪ್ತಿಯ ಕದ್ರಿ, ಲೋಬೊ ಲೇನ್ನಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ನಕಲಿ ವೈನ್ ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಅಬಕಾರಿ ಜಂಟಿ ಆಯುಕ್ತ (ಮಂಗಳೂರು ವಿಭಾಗ) ಹಾಗೂ ಅಬಕಾರಿ ಉಪ ಆಯುಕ್ತ (ದ.ಕ. ಜಿಲ್ಲೆ, ಮಂಗಳೂರು) ಅವರ ಮಾರ್ಗದರ್ಶನದಲ್ಲಿ, ಮಂಗಳೂರು ಉಪ ವಿಭಾಗ-1ರ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ, ಮಂಗಳೂರು, ತಲಪಾಡಿ ತನಿಖಾ ಠಾಣೆ ಹಾಗೂ ಮಂಗಳೂರು ದಕ್ಷಿಣ ವಲಯ-1ರ ಅಬಕಾರಿ ನಿರೀಕ್ಷಕರು ಮತ್ತು ಸಿಬ್ಬಂದಿಗಳು ದಾಳಿ ನಡೆಸಿದರು.

ಮೈಕಲ್ ಬ್ಲೈಸ್ ಮಿನೀಜಸ್ ಎಂಬುವವರ ಮನೆಯಲ್ಲಿ ಪಂಚಸಾಕ್ಷಿಗಳ ಸಮ್ಮುಖದಲ್ಲಿ ದಾಳಿ ನಡೆಸಿದಾಗ, ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸಲು ಬಳಸುತ್ತಿದ್ದ ಕೊಳೆ – 1,500 ಲೀಟರ್,ಮದ್ಯ – 3.180 ಲೀಟರ್, ನಕಲಿ ವೈನ್ ತಯಾರಿಸಲು ಬಳಸುತ್ತಿದ್ದ ವಿವಿಧ ಸಲಕರಣೆಗಳು ವಶಪಡಿಸಿಕೊಳ್ಳಲಾಗಿದೆ

ಆರೋಪಿ ಮೈಕಲ್ ಬ್ಲೈಸ್ ಮಿನೀಜಸ್ ಅವರನ್ನು ಸ್ಥಳದಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಸಂಬಂಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 13(1)(a), 13(1)(f), 14, 15, 32(1), 32(2)(e), 34, 38(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಪ್ತಿಯಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂ. 5,57,690/- ಎಂದು ಅಬಕಾರಿ ಉಪ ನಿರೀಕ್ಷಕ ಹರೀಶ್ ಪಿ. ಅವರು ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments