ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸಂಚಾರ 

Spread the love

ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸಂಚಾರ 

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭವಾದ ಕರಾವಳಿ ಉತ್ಸವ 2025 ರ ಅಂಗವಾಗಿ ಆಯೋಜಿಸಲಾದ ಹೆಲಿಕಾಪ್ಟರ್ ಪ್ರಯಾಣ ‘ಹೆಲಿರೈಡ್’ಗೆ ಚಾಲನೆ ದೊರೆತಿದೆ.

ಪ್ರತಿ ವ್ಯಕ್ತಿಗೆ 3500 ರೂ. ದರ ನಿಗಧಿಯಾಗಿದ್ದು, ಪ್ರತೀ ಪ್ರಯಾಣದಲ್ಲಿ 5 ಸದಸ್ಯರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರತಿ ಹಾರಾಟದ ಅವಧಿ ಸುಮಾರು 7 ನಿಮಿಷಗಳು ಆಗಿದ್ದು, ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5 ಗಂಟೆಯವರೆಗೆ ಸವಾರಿಗಳು ಲಭ್ಯವಿರುತ್ತದೆ.

ದೈನಂದಿನ ಒತ್ತಡಕ್ಕೆ ಸಣ್ಣ ವಿರಾಮ ಕೊಟ್ಟು, ಹೆಲಿಕಾಪ್ಟರ್ ರೈಡ್‍ನಲ್ಲಿ ಕರಾವಳಿ ಸೌಂದರ್ಯದ ವಿಹಂಗಮ ಚಿತ್ರಣವನ್ನು ಕಣ್ತುಂಬಿಕೊಳ್ಳಲು ಇರುವ ಒಂದೊಳ್ಳೆ ಅವಕಾಶ. ಹೆಲಿಕಾಪ್ಟರ್ ಪ್ರಯಾಣದಿಂದ ಮಂಗಳೂರಿನ ಕಡಲ ಕಿನಾರೆ, ರಮಣೀಯ ತಾಣಗಳನ್ನು ಹಾಗೂ ಕರಾವಳಿಯ ಭೂದೃಶ್ಯದ ವಿಶಾಲ ನೋಟವನ್ನು ಆನಂದಿಸಬಹುದು. ಆಕಾಶದ ಎತ್ತರಕ್ಕೆ ಹಾರಿ ನಗರದ ಸೌಂದರ್ಯವನ್ನು ಆಸ್ವಾದಿಸುವ ಉತ್ತಮ ಅನುಭವ ಸಿಗಲಿದೆ. ಸಾರ್ವಜನಿಕರಿಗೆ ಕರಾವಳಿಯ ಸುಂದರ ನೋಟವನ್ನು ಆನಂದಿಸಲು ಇದೊಂದು ಉತ್ತಮ ವ್ಯವಸ್ಥೆಯಾಗಿದೆ.

ಹೆಲಿಕಾಪ್ಟರ್ ರೈಡ್ ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದು, ಹೆಲಿಕಾಪ್ಟರ್ ಪ್ರಯಾಣ ಮಾಡಲು ಬಯಸುವ ಆಸಕ್ತರು ವೆಬ್‍ಸೈಟ್ https://heli.dakshinakannada.org ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments
Inline Feedbacks
View all comments