ಮಂಗಳೂರು ಸಿಟಿ ವಲಯ: ವಂ.ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಪ್ರಧಾನ ಗುರುವಾಗಿ ನೇಮಕ

Spread the love

ಮಂಗಳೂರು ಸಿಟಿ ವಲಯ: ವಂ.ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಪ್ರಧಾನ ಗುರುವಾಗಿ ನೇಮಕ

ಮಂಗಳೂರು: ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು,ವಂ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರನ್ನು ಮಂಗಳೂರು ಧರ್ಮ ಪ್ರಾಂತ್ಯದ ಮಂಗಳೂರು ಸಿಟಿ ವಲಯದ ಪ್ರಧಾನ ಧರ್ಮಗುರುಗಳಾಗಿ ನೇಮಕ ಮಾಡಲಾಗಿದೆ.

ಮಂಗಳೂರು ಸಿಟಿ ವಲuಯ ವ್ಯಾಪ್ತಿಯಲ್ಲಿ ಪಾಲ್ದನೆ, ಕುಲಶೇಖರ, ವಾಮಂಜೂರು, ಬಜ್ಜೋಡಿ, ಬಿಜೈ, ಬೋಂದೆಲ್, ಫೆರ್ಮಾಯಿ, ಕೆಲರಾಯ್, ನೀರುಮಾರ್ಗ, ದೇರೆಬೈಲ್, ಆಂಜೆಲೋರ್, ಶಕ್ತಿನಗರ ಎಂಬ 12 ಚರ್ಚ್ ಗಳು ಬರುತ್ತವೆ.

ವಂ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಕೆಲವು ಚರ್ಚ್ ಗಳಲ್ಲಿ ಧರ್ಮಗುರುಗಳಾಗಿ, ಬಳಿಕ ಸುಮಾರು 15 ವರ್ಷಗಳ ಕಾಲ ಕಂಕನಾಡಿ ಫಾದರ್ ಮುಲ್ಲರ್ ಸಮೂಹ ಸಂಸ್ಥೆಗಳ ನಿರ್ದೇಶಕರಾಗಿ, ಸೇವೆ ಸಲ್ಲಿಸಿದ್ದು, ಪ್ರಸ್ತುತ 2025 ರಿಂದ ಪಾಲ್ದನೆ ಚರ್ಚ್ ನ ಪ್ರಧಾನ ಧರ್ಮಗುರು ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


Spread the love
Subscribe
Notify of

0 Comments