ಮಂಗಳೂರು: ಹೆದ್ದಾರಿ ಭೂಸ್ವಾಧೀನ- ಪರಿಹಾರ ಪಾವತಿ ಪಡೆಯಲು ಸೂಚನೆ
ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಸಾಣೂರು-ಬಿಕರ್ನಕಟ್ಟೆ ವಿಭಾಗದ ರಸ್ತೆ ನಿರ್ಮಾಣ/ ಅಗಲೀಕರಣಕ್ಕಾಗಿ ಭೂಸ್ವಾಧೀನ ಪಡಿಸಲಾದ ಜಮೀನುಗಳ ಪರಿಹಾರ ಪಾವತಿ ಕೋರಿ ದಾಖೆಯೊಂದಿಗೆ ಕ್ಲೈಮ್ ಸಲ್ಲಿಸಿದ ಅರ್ಹ ಭೂಮಾಲಿಕರಿಗೆ ಪರಿಹಾರ ಮೊತ್ತವನ್ನು “ಭೂಮಿ ರಾಶಿ” ತಂತ್ರಾಶದ ಮೂಲಕ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಪರಿಹಾರ ಪಡೆಯಲು ಬಾಕಿ ಉಳಿದಿರುವ ಭೂಮಾಲಿಕರು ಕೂಡಲೇ 3ಜಿ ನೋಟೀಸಿನಲ್ಲಿ ತಿಳಿಸಿರುವ ದಾಖೆಗಳೊಂದಿಗೆ ನಗರದ ಹಂಪನಕಟ್ಟೆ ರಾಷ್ಟ್ರೀಯ ಹೆದ್ದಾರಿ ಕ್ಲಾಕ್ ಟವರ್ ಹತ್ತಿರ ಇರುವ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧೀಕಾರಿಗೆ ಶೀಘ್ರವಾಗಿ ಹಾಜರುಪಡಿಸಬೇಕು.
2024-25ನೇ ಸಾಲಿನಲ್ಲಿ ಭೂಪರಿವರ್ತನೆಗೊಂಡ ಜಮೀನು ಮತ್ತು ಕಟ್ಟಡಗಳ ಪರಿಹಾರ ಪಾವತಿಯಲ್ಲಿ ಟಿ.ಡಿ.ಎಸ್ (ಖಿ.ಆ.S.) ಕಟಾಯಿಸಿದ ಬಗ್ಗೆ ನಮೂನೆ 16ಂ ಕಚೇರಿಯಲ್ಲಿ ಲಭ್ಯವಿದ್ದು, ಪಡೆಯದವರು ಕಚೇರಿ ವೇಳೆಯಲ್ಲಿ ಪಡೆಯುವಂತೆ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.