Spread the love
ಮನೆಮನೆಗೆ ತೆರಳಿ ಮೀನು ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಗೆ ಕೊರೋನಾ ಪಾಸಿಟಿವ್
ಮಂಗಳೂರು: ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಇದೀಗ ಮೀನುಗಳನ್ನು ಮನೆಮನೆಗೆ ತೆರಳಿ ವ್ಯಾಪಾರ ನಡೆಸುತ್ತಿದ್ದ ಮಂಗಳೂರಿನ ಎಕ್ಕೂರು ನಿವಾಸಿಗೆ ಕೊರೋನಾ ಸೋಂಕು ಆವರಿಸಿರುವುದು ಪರೀಕ್ಷೆಯಲ್ಲಿ ದೃಢವಾಗಿದೆ.
ಬಂದರಿನ ಮೀನು ವ್ಯಾಪಾರದ ಸ್ಥಳಕ್ಕೆ ತೆರಳಿ, ಅಲ್ಲಿಂದ ಮೀನುಗಳನ್ನು ತಂದು ಮನೆಮನೆಗೆ ಮೀನು ಮಾರಾಟ ಮಾಡುತ್ತಿದ್ದ ಎಕ್ಕೂರಿನ 27 ವರ್ಷದ ಯುವಕ ಶೀತದ ಸಮಸ್ಯೆಯಿಂದಾಗಿ ಸ್ಥಳೀಯ ಆಸ್ಪತ್ರೆಯಲ್ಲಿ ಸ್ವಯಂ ಪರೀಕ್ಷೆಗೊಳಪಟ್ಟಿದ್ದನು. ಈ ವೇಳೆ ಆತನ ಗಂಟಲ ದ್ರವ ಮಾದರಿ ಪರೀಕ್ಷೆಗೊಳಪಡಿಸಿದ್ದು, ಸದ್ಯ ಆತನಿಗೆ ಕೊರೋನಾ ಸೋಂಕು ಇರುವುದು ದೃಢವಾಗಿದೆ.
Spread the love














What area? Can u highlight.