ಮನೆಯೇ ಅಕ್ರಮ ಕಸಾಯಿ ಖಾನೆ! ಪೊಲೀಸ್ ದಾಳಿ, 3 ಮಂದಿ ಬಂಧನ : ಆರೋಪಿ ಮನೆ ಮುಟ್ಟು ಗೋಲು ಹಾಕಲು ಕ್ರಮ

Spread the love

ಮನೆಯೇ ಅಕ್ರಮ ಕಸಾಯಿ ಖಾನೆ! ಪೊಲೀಸ್ ದಾಳಿ, 3 ಮಂದಿ ಬಂಧನ: ಆರೋಪಿ ಮನೆ ಮುಟ್ಟು ಗೋಲು ಹಾಕಲು ಕ್ರಮ

ಸುರತ್ಕಲ್: ಮಂಗಳೂರು ತಾಲೂಕು ಕಾಟಿಪಳ್ಳ ಗ್ರಾಮದ 8ನೇ ಬ್ಲಾಕ್ ಚೊಕ್ಕಬೆಟ್ಟುವಿನ ಅಂಚೆ ಕಛೇರಿ ರಸ್ತೆಯ ಅಬ್ದುಲ್ ಖಾದರ್ ರವರ ಮನೆಯಲ್ಲಿ ಅಕ್ರಮವಾಗಿ ದನ ವಧೆಯನ್ನು ಮಾಡುತ್ತಿದ್ದ ಬಗ್ಗೆ ಮಾಹಿತಿಯನ್ನು ಪಡೆದು ಸುರತ್ಕಲ್ ಪೊಲೀಸ್ ಠಾಣೆ ಪಿಎಸ್‌ಐ ರಘುನಾಯಕ್ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಚೊಕ್ಕಬೆಟ್ಟುವಿನ ಅಜೀಜ್ ಅಹಮ್ಮದ್, (55) ಇಮ್ಮಿಯಾಜ್ (41), ಎ ಕೆ ಆಶೀಕ್ (22) ಬಂಧಿತ ಆರೋಪಿಗಳು. ಇನ್ನೊರ್ವ ಆರೋಪಿ ಬಶೀರ್ ಚೊಕ್ಕಬೆಟ್ಟು ಎಂಬಾತನು ತಲೆಮರೆಸಿಕೊಂಡಿದ್ದಾನೆ. ಆರೋಪಿ ಇಮ್ಮಿಯಾಜ್ ನು ತಂದಿದ್ದ 2 ಹೆಣ್ಣು ಕರುಗಳನ್ನು ಬಶೀರ್ ಹಾಗೂ ಅಶಿಕ್ ಇವರೊಂದಿಗೆ ಸೇರಿಕೊಂಡು ವಧೆ ಮಾಡಿ ಕೆ.ಜಿ ಗೆ 300/- ರೂ ರಂತೆ ಸುಮಾರು 233.89 ಕೆಜಿ ದನದ ಮಾಂಸವನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದರು.

ಅಕ್ರಮ ಕಸಾಯಿ ಖಾನೆ, ಅಕ್ರಮ ವಧೆ ಕಾನೂನಿನಡಿ ದನಗಳನ್ನು ವಧೆ ಮಾಡಿ, ಯಾವುದೇ ದಾಖಲಾತಿಗಳು ಇಲ್ಲದೇ ದನದ ಮಾಂಸವನ್ನು ಮಾರಾಟ ಮಾಡಲು ತಯಾರಿ ಮಾಡುತ್ತಿದ್ದವರ ಕೇಸು ದಾಖಲಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯಾದ ಇಮ್ಮಿಯಾಜ್ ಮೇಲೆ ಮಂಗಳೂರು ನಗರದ ಬರ್ಕೆ, ಮೂಡಬಿದ್ರೆ, ಪಣಂಬೂರು, ಸುರತ್ಕಲ್ ಠಾಣೆ ಸೇರಿದಂತೆ ಉಡುಪಿ ಜಿಲ್ಲೆಯ ಕಾಪು, ಕುಂದಾಪುರ, ಕಾರ್ಕಳ ಠಾಣೆಯಲ್ಲಿ ಸುಮಾರು 09 ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿರುತ್ತದೆ.

ಅಝೀಜ್ ಅಹಮ್ಮದ್ ನು ಈ ಕೃತ್ಯಕ್ಕೆ ನಡೆಸಿದ ಮನೆಯನ್ನು ಮುಟ್ಟುಗೋಲು ಹಾಕುವ ಬಗ್ಗೆ ಮಾನ್ಯ ಸಹಾಯಕ ಆಯುಕ್ತರು, ಮಂಗಳೂರು ತಾಲೂಕು ಇವರಿಗೆ ವರದಿ ಮಾಡಲಾಗಿದೆ.

ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಸೂಚನೆ ಮೇರೆಗೆ ಡಿಸಿಪಿ ಮಿಥುನ್ ಹೆಚ್ ಎನ್, ಡಿಸಿಪಿ ರವಿಶಂಕರ್ನಿದೇ್ರಶನದಂತೆ, ಸಹಾಯಕ ಪೊಲೀಸ್ ಅಯುಕ್ತ ಶ್ರೀಕಾಂತ್ ಕೆ ರವರ ಮಾರ್ಗದರ್ಶನದಲ್ಲಿ, ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘುನಾಯಕ, ರಾಘವೇಂದ್ರ ನಾಯ್ಕ, ಜನಾರ್ಧನ ನಾಯ್ಡ್, ಶಶಿಧರ ಶೆಟ್ಟಿ, ಎಎಸ್.ಐ ರವರಾದ ತಾರನಾಥ, ಸುಕೇತ್ ಹಾಗೂ ಸಿಬ್ಬಂದಿಯವರಾದ ರಾಜೇಂದ್ರ ಪ್ರಸಾದ್, ಸೈಫುಲ್ಲಾ, ಸತೀಶ್ ಸತ್ತಿಗೇರಿ, ಮಂಜುನಾಥ ಆಯಟ್ಟಿ, ಅಂಜಿನಪ್ಪ, ಮೊಹಮ್ಮದ್ ಅನೀಸ್, ಶೈನ್ ಜಾನ್, ರವರು ಆರೋಪಿ ಪತ್ತೆಯ ಬಗ್ಗೆ ಹಾಗೂ ತನಿಖೆಯ ಬಗ್ಗೆ ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments