ಮೇ 17 : ಕೊಡವೂರಿನಲ್ಲಿ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ

Spread the love

ಮೇ 17 : ಕೊಡವೂರಿನಲ್ಲಿ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮೇ 17 ಶನಿವಾರದಂದು ಉಡುಪಿಯ ಕೊಡವೂರು ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನದ ವಸಂತ ಮಂಟಪದಲ್ಲಿ ನಡೆಯಲಿದೆ. ಬೆಳಗ್ಗೆ 8:15 ರಿಂದ ರಾತ್ರಿ 8:15 ರವರೆಗೆ ನಿರಂತರ 12 ಗಂಟೆಗಳ ಕಾರ್ಯಕ್ರಮದಲ್ಲಿ ಮಲ್ಪೆಯ ಸಿಟಿಜನ್ ಸರ್ಕಲ್ ನಿಂದ ಮೆರವಣಿಗೆಯೊಂದಿಗೆ ಸಮ್ಮೇಳನಾಧ್ಯಕ್ಷರಾದ ಪ್ರೊ. ಎಂ.ಎಲ್. ಸಾಮಗ ಅವರನ್ನು ಸ್ವಾಗತಿಸಲಾಗುವುದು. 9:25ಕ್ಕೆ ಧ್ವಜಾರೋಹಣ, ಹಾಗೂ ಪರಿಷತ್ ಧ್ವಜಾ ರೋಹಣ ನಡೆಯಲಿ ರುವುದು ಎಂದು ತಾಲೂಕು ಅಧ್ಯಕ್ಷರಾದ ರವಿರಾಜ್ ಹೆಚ್ ಪಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು 9:30ಕ್ಕೆ ನೃತ್ಯನಿಕೇತನ ಕೊಡವೂರು ಇವರಿಂದ ನೃತ್ಯ ಸಿಂಚನ ನಡೆಯಲಿದೆ. 9.50ಕ್ಕೆ ಸರಿಯಾಗಿ ದಿ| ಕುರಾಡಿ ಸೀತಾರಾಮ ಅಡಿಗ ನೆನಪಿನ ಪುಸ್ತಕ ಮಳಿಗೆಯ ಉದ್ಘಾಟನೆಯನ್ನು ಸಾಹಿತಿ ಡಾ. ಗಣನಾಥ್ ಎಕ್ಕಾರ್ ನೆರ ವೇರಿಸಲಿದ್ದಾರೆ. ನಂತರ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಕನ್ನಡದ ಹಿರಿಯ ವಿಮ ರ್ಶಕ ಎಸ್ ಆರ್ ವಿಜಯಶಂಕರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ಸಾಹಿತಿ ಎಚ್. ಡುಂಡಿರಾಜ್ ಉಪಸ್ಥಿತರಿರುತ್ತಾರೆ. ಸಾಧಕರಾದ ಜಯನ್ ಮಲ್ಪೆ , ಸಿ. ಎಸ್. ರಾವ್, ವಿ.ಜಿ. ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ಹರಿಪ್ರಸಾದ್ ರೈ, ವಾದಿರಾಜ್ ಭಟ್, ವೆಂಕಟೇಶ್ ಪೈ, ವಿನಯ್ ಆಚಾರ್ಯ ಮುಂಡ್ಕೂರ್ ಇವರನ್ನು ಅಭಿನಂದಿಸಲಾಗುವುದು ಮತ್ತು ಇದೇ ಸಂದರ್ಭದಲ್ಲಿ ನಾಲ್ಕು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವಿಶಿಷ್ಟ ರೀತಿಯ ಯಕ್ಷ ಕವಿಗೋಷ್ಠಿ,ಯಕ್ಷಗಾನ, ದೃಶ್ಯ ಭಾಷೆ ಸಂಸ್ಕೃತಿ ಇದರ ಕುರಿತಾದ ವಿಚಾರಗೋಷ್ಠಿ ,ಸಮ್ಮೇಳನ ಅಧ್ಯಕ್ಷ ರೊಂದಿಗೆ ಮಾತುಕತೆ ನಡೆಯಲಿದೆ.

ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ಅವರ ಅಧ್ಯಕ್ಷತೆಯ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಬ್ರಮಣ್ಯ ಜಿ. ಕುರ್ಯ (ಪತ್ರಿಕಾ ರಂಗ) ,ಡೊನಾಥ್ ಡಿ. ಅಲ್ಮೇಡಾ (ಸಾಹಿತ್ಯ), ಮಂಜುನಾಥ್ ಭಟ್ ಮೂಡುಬೆಟ್ಟು (ಯೋಗ), ನಾರಾಯಣ ಸರಳಾಯ ( ಸಂಗೀತ), ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ (ಸಮಷ್ಟಿ), ಚಂದ್ರ ಚಿತ್ತ (ಚಿತ್ರಕಲೆ), ಅನಿಲ್ ಶಂಕರ್ (ದೃಶ್ಯಮಾಧ್ಯಮ), ಪ್ರಕಾಶ್ ಕೊಡಂಕೂರು (ಛಾಯಾಚಿತ್ರ ಮಾಧ್ಯಮ), ಡಾ. ಸುರೇಶ್ ಶೆಣೈ (ವೈದ್ಯಕೀಯ), ಮಂಜುನಾಥ್ ಕಾಮತ್ (ಸಾಮಾಜಿಕ ಜಾಲತಾಣ), ಬಾಲಕೃಷ್ಣ ಕೊಡವೂರು (ರಂಗ ನಟ), ಬಾಲಕೃಷ್ಣ ಮೆಂಡನ್ (ಆಹಾರೋದ್ಯಮ), ರಮೇಶ್ ಮಂಚಿ ( ರಂಗಭೂಮಿ), ಪ್ರಶಾಂತ್ ಕಡಿಯಾಳಿ (ನೃತ್ಯ ), ವಿದುಷಿ ಶಾಂಭವಿ ಆಚಾರ್ಯ (ಭರತನಾಟ್ಯ ), ಕುಸುಮ ಕಾಮತ್ (ಸಾಂಸ್ಕೃತಿಕ ), ವಾಣಿ ಬಾಲಚಂದ್ರ (ಕ್ರೀಡೆ), ಸ್ವರಾಜ್ಯ ಲಕ್ಷ್ಮಿ ಅಲೆವೂರು (ಕಿರುತೆರೆ), ಕುಮಾರಿ ಅವನಿ ಗಣೇಶ್ ಕಲ್ಮಾಡಿ ( ಕ್ರೀಡೆ ), ಮುಕ್ತಾ ಶ್ರೀನಿವಾಸ್ ಮೂಡು ಬೆಟ್ಟು (ವಸ್ತ್ರ ವಿನ್ಯಾಸ ), ಅಶ್ವಿನಿ ಶ್ರೀನಿವಾಸ್ (ಲಲಿತಕಲೆ ), ಸುರೇಖಾ ಭಟ್ (ರಂಗೋಲಿ ), ಮಾಸ್ಟರ್ ಆಶ್ಲೇಷ್ ಆರ್ . ಭಟ್ (ಚಲನಚಿತ್ರ ), ಕುಮಾರಿ ಮಾನ್ಸಿ ಕೆ ಕೋಟ್ಯಾನ್ ಕೊಳ (ನೃತ್ಯ ), ಕುಮಾರಿ ಮಾನ್ಸಿ ಎಸ್.ಎ. ಪುತ್ತೂರು.

ಶಿಕ್ಷಣ ಹಾಗೂ ಸಂಘ ಸಂಸ್ಥೆಗಳಾದ ಹಳೆ ವಿದ್ಯಾರ್ಥಿ ಸಂಘ (ರಿ) ಮತ್ತು ಯುವಕ ಮಂಡಲ (ರಿ) ಕೊಡ ವೂರು, ಸರಸ್ವತಿ ಜಾನಪದ ಕಲಾತಂಡ ವಡಬಾಂಡೇಶ್ವರ ಮಲ್ಪೆ , ಸ್ಕಂದ ಚಂಡೆ ಬಳಗ ವಡಬಾಂಡೇಶ್ವರ, ಯುವಕ ಮಂಡಲ ಮೂಡುಬೆಟ್ಟು, ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಡವೂರು, ಮೂಕಾಂ ಬಿಕಾ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಪಾಳೆಕಟ್ಟೆ ಇವರನ್ನು ಸನ್ಮಾನಿಸಲಾಗುವುದು. ಸಮಾರಂಭದ ಸಮಾರೋಪ ಭಾಷಣವನ್ನು ಸಾಹಿತಿ ಡಾ. ನಿಕೇತನ ಮಾಡಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಯಕ್ಷ ರಂಗಾಯಣ ಕಾರ್ಕಳ ಇವರಿಂದ ಕುಮಾರವ್ಯಾಸ ಭಾರತದ ವಿರಾಟ ಪರ್ವದಿಂದ ಆಯ್ದ ಭಾಗ “ಆರೊಡನೆ ಕಾದು ವೇನು” ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿ ಉಡುಪಿ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ ಕೊಡವೂರು ಹಾಗೂ ರಂಜಿನಿ ವಸಂತ್, ಸ್ವಾಗತ ಸಮಿತಿಯ ಸಾಧು ಸಾಲ್ಯಾನ್, ಕಾರ್ಯದರ್ಶಿ ಸತೀಶ್ ಕೊಡವೂರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments