Spread the love
ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್ ಶಿಪ್ ಕಂಚು ಪದಕ ವಿಜೇತೆ ಮಾನ್ಸಿ ಜೆ. ಸುವರ್ಣ ಗೆ ಯಶ್ಪಾಲ್ ಸುವರ್ಣ ಅಭಿನಂದನೆ
ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ವಿಜೇತರಾದ ಮಲ್ಪೆಯ ಕುಮಾರಿ ಮಾನ್ಸಿ ಜೆ. ಸುವರ್ಣ ರವರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅಭಿನಂದನೆ ಸಲ್ಲಿಸಿದ್ದಾರೆ.
ಮಲ್ಪೆಯ ಜಗದೀಶ್ ಸುವರ್ಣ ಮತ್ತು ಮಾಲತಿ ದಂಪತಿಯ ಸುಪುತ್ರಿ ಮಾನ್ಸಿ ಜೆ ಸುವರ್ಣ ರಾಷ್ಟ್ರಮಟ್ಟದ ಬಾಕ್ಸಿಂಗ್ ಚಾಂಪಿಯನ್ ಶಿಪ್ ರಾಜ್ಯದ ಪ್ರತಿನಿಧಿಯಾಗಿ ಕಂಚಿನ ಪದಕ ಗೆಲ್ಲುವ ಮೂಲಕ ಕರ್ನಾಟಕ ರಾಜ್ಯ ಹಾಗೂ ಉಡುಪಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಮಾನ್ಸಿ ಜೆ ಸುವರ್ಣ ರವರ ಈ ಸಾಧನೆ ರಾಜ್ಯದ ಇತರ ಬಾಕ್ಸರ್ ಗಳಿಗೆ ಪ್ರೇರಣೆ ನೀಡಲಿದ್ದು, ಮುಂಬರುವ ದಿನಗಳಲ್ಲಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಗೌರವ ತರುವಂತಾಗಲಿ ಎಂದು ಯಶ್ ಪಾಲ್ ಸುವರ್ಣ ಶುಭ ಹಾರೈಸಿದ್ದಾರೆ.
Spread the love