ವಿಪರೀತ ಮಳೆಯ ಸಂದರ್ಭದಲ್ಲಿ ಜಾಗೃತೆ ವಹಿಸಿ – ರಮೇಶ್ ಕಾಂಚನ್

Spread the love

ವಿಪರೀತ ಮಳೆಯ ಸಂದರ್ಭದಲ್ಲಿ ಜಾಗೃತೆ ವಹಿಸಿ – ರಮೇಶ್ ಕಾಂಚನ್

ಉಡುಪಿ: ವಾಯುಭಾರ ಕುಸಿತದಿಂದಾಗಿ ಬರುತ್ತಿರುವ ವಿಪರೀತ ಮಳೆ, ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಕೆಲವು ಕಡೆ ಅನಾಹುತಗಳು ಸೃಷ್ಟಿಯಾಗಿದ್ದು,ಇನ್ನು ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಕೂಡ ಪ್ರಾರಂಭವಾಗುವ ಹೊತ್ತಿನಲ್ಲಿ ಜನರು ಬಹಳ ಜಾಗೃತೆ ವಹಿಸುವಂತೆ ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್ ಕಾಂಚನ್ ವಿನಂತಿಸಿಕೊಂಡಿದ್ದಾರೆ.

ಹಾಗೆಯೇ ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಮಳೆಯ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಗತ್ಯವಾದ ಮುಂಜಾಗ್ರತಾ ಕ್ರಮ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು, ಸಾರ್ವಜನಿಕ ದೂರುಗಳಿಗೆ ತುರ್ತುಸ್ಪಂದಿಸಲು ನಗರಸಭೆಯಲ್ಲಿ ಮಳೆಗಾಲದ ತುರ್ತುಕಾರ್ಯಪಡೆ ಇದ್ದು ಆಯಾಯ ವಾರ್ಡ್ ಗಳಿಗೆ ಸೂಪರ್ ವೈಸರ್ ಹಾಗೂ ಆರೋಗ್ಯ ನಿರೀಕ್ಷಕರನ್ನು ನಗರಸಭೆ ನೇಮಿಸಿರುತ್ತದೆ. ಜನರು ಮಳೆಯ ಅನಾಹುತಗಳಿಗೆ ಧೃತಿಗೆಡದೆ ಯಾವುದೇ ಸಮಸ್ಯೆಗಳು ಎದುರಾದಲ್ಲಿ ನಗರಸಭೆಯ ಸಹಾಯವಾಣಿ ನಿಯಂತ್ರಣ ಕೊಠಡಿ ಸಂಖ್ಯೆ 0820 -2520306, ನೋಡಲ್ ಅಧಿಕಾರಿ ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್ 9741943666 ಹಾಗೂ ತಮ್ಮ ಮೊಬೈಲ್ ಸಂಖ್ಯೆಗೆ 9844192340 ಕರೆ ಮಾಡಬಹುದು.ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಬೇಕಾಗಿ ರಮೇಶ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments