
ಸಾಮಾಜಿಕ ಜಾಲತಾಣದಲ್ಲಿಅವಹೇಳನ – ದೂರು ದಾಖಲು
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಸಂಬದ್ಧವಾಗಿ ಬರೆದು ಮಾನ ಹಾನಿ ಮಾಡಿದ ಕುರಿತು ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Peace Fayya ಎಂಬ ಹೆಸರಿನ ಫೇಸ್ ಬುಕ್ ಪೇಜ್ ನಿಂದ ಯಾರೋ ಕಿಡಿಗೇಡಿಗಳು ಪಿರ್ಯಾದಿದಾರರ ಪೋಟೋವನ್ನು ತೆಗೆದುಕೂಂಡು ದಕ್ಷಿಣ ಕನ್ನಡದಲ್ಲೊಬ್ಬ ಜಿಹಾದಿ ಕಾಮುಕ ಎಂಬ ತಲೆಬರಹದ ಅಡಿಯಲ್ಲಿ “ಮಡಂತ್ಯಾರಿನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿರುವ ಪೀಸ್ ಫಯ್ಯಾ ಎಂಬ ಜಿಹಾದಿ ಯುವಕ ಸುಂದರ ಹಿಂದೂ ಯುವತಿಯರನ್ನು ಗೆಳೆತನ ಮಾಡಿಕೊಂಡು ಫ್ರೀಯಾಗಿ ಬಟ್ಟೆಗಳನ್ನು ಕೊಡುತ್ತೇನೆ ಎಂದು ಪುಸಲಾಯಿಸಿ ತಮ್ಮ ಜಿಹಾದ್ ಬಲೆಗೆ ಬೀಳಿಸಲು ಪ್ರಯತ್ನ ಮಾಡುತ್ತಿದ್ದಾನೆ ಈತನಿಗೆ ತಕ್ಕ ಪಾಠ ಕಲಿಸಬೇಕು” ಎಂಬಿತ್ಯಾದಿಯಾಗಿದ್ದ ಸಂದೇಶವನ್ನು ಆರೋಪಿಗಳು ಸಾಮಾಜಿಕ ಜಾಲತಾಣಗಳ ಬೇರೆ ಬೇರೆ ಗ್ರೂಪ್ ಗಳಿಗೆ ರವಾನೆ ಮಾಡುತ್ತಿದ್ದು ಈ ಸಂದೇಶವನ್ನು ಸ್ರಷ್ಟಿಸಿದ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದ್ದಾರೆ.
ಪುಂಜಾಲಕಟ್ಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












