ಹಜ್ ಯಾತ್ರೆಗೆ ಮಂಗಳೂರಿನಿಂದಲೇ ವಿಮಾನ: ಕೇಂದ್ರಕ್ಕೆ ಉಸ್ತುವಾರಿ ಸಚಿವರ ಪತ್ರ

Spread the love

ಹಜ್ ಯಾತ್ರೆಗೆ ಮಂಗಳೂರಿನಿಂದಲೇ ವಿಮಾನ: ಕೇಂದ್ರಕ್ಕೆ ಉಸ್ತುವಾರಿ ಸಚಿವರ ಪತ್ರ

ಮಂಗಳೂರು: ಕರಾವಳಿ ಜಿಲ್ಲೆಗಳ ಯಾತ್ರಿಕರಿಗೆ ಅನುಕೂಲವಾಗುವಂತೆ ಹಜ್ ಯಾತ್ರೆಗೆ ಮಂಗಳೂರಿನಿಂದಲೇ ವಿಮಾನವನ್ನು ಆರಂಭಿಸುವಂತೆ ಕೇಂದ್ರ ಸರಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದಾರೆ.

ಈ ಸಂಬಂಧ ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕಿರಣ್ ರಿಜ್ಜು ಅವರಿಗೆ  ಪತ್ರ ಬರೆದಿರುವ ಉಸ್ತುವಾರಿ ಸಚಿವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಹಜ್ ಎಂಬಾರ್ಕೇಶನ್ ಪಾಯಿಂಟ್ ಆಗಿ ಪರಿಗಣಿಸಿದರೆ ಇಲ್ಲಿಂದಲೇ ಹಜ್  ಯಾತ್ರೆಗೆ ನೇರ ವಿಮಾನ ಸಂಚಾರ ಆರಂಭವಾಗಿ  ಕರಾವಳಿ ಭಾಗದವರಿಗೆ ಬಹಳ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮಾಜಿ ಶಾಸಕ ಕೆ.ಎಸ್ ಮೊಹಮ್ಮದ್ ಮಸೂದ್  ಅವರ ಮನವಿಯನ್ನು ಆಧರಿಸಿ  ಉಸ್ತುವಾರಿ ಸಚಿವರು ಕೇಂದ್ರಕ್ಕೆ  ಮನವಿ ಮಾಡಿದ್ದಾರೆ


Spread the love
Subscribe
Notify of

0 Comments
Inline Feedbacks
View all comments